ಹಿಂದೂಗಳು ಬಹುಸಂಖ್ಯಾತರಾಗಿದ್ದರೆ ಮಾತ್ರ ದೇಶಕ್ಕೆ ಉಳಿಗಾಲ: ಡಾ. ಪ್ರವೀಣ ತೂಗಾಡಿಯ.

IMG-20250616-WA0026
Published on
ವಿಜಯವಾಣಿ ಸುದ್ದಿಜಾಲ ಗದಗ
ಭಾರತದದಲ್ಲಿ ಹಿಂದುಗಳ ಬದುಕಲು ಸಾಧ್ಯವಾಗುತ್ತಿಲ್ಲ. ಆದರೆ, ದೇಶದಲ್ಲಿ ಹಿಂದು ಬಹುಸಂಖ್ಯಾತರಾಗಿ ಉಳಿಯುವಂತೆ ನೋಡಿಕೊಳ್ಳುವುದು  ಹಿಂದುಗಳಿಂದ ಮಾತ್ರ ಸಾಧ್ಯ. ಹಾಗಾಗಿ ಪ್ರತಿ ಗ್ರಾಮಗಳಲ್ಲಿ, ಶಹರಗಳಲ್ಲಿ ಪ್ರತಿ ವಾರ ಹಿಂದು ಜನರು ಸೇರಿ ಸಾಮೂಹಿಕ ಹನುಮಾನ್ ಚಾಲೀಸ್ ಪಠೀಸಬೇಕು. ಇದು ಹಿಂದುಗಳ ಸುರಕ್ಷತೆಗೆ ಅತ್ಯಗತ್ಯ ಎಂದು ಡಾ. ಪ್ರವೀಣ ತೂಗಾಡಿಯ ಹೇಳಿದರು.
ನಗರದ ಶ್ರೀನಿವಾಸ ಭವನದಲ್ಲಿ ಸೋಮವಾರ ನಡೆದ ಸನಾತನ ಹಿಂದೂ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುಗಗಳಲ್ಲಿ ಅಸುರ ರಾಜ್ಯವು ಇತ್ತು. ದೇವರು ಅಸುರರನ್ನು ನಾಶಪಡಿಸುತ್ತಲೆ ಬಂದಿದ್ದಾರೆ. ಕಲಿಯುಗದಲ್ಲೇ ಹಿಂದುಗಳ ವಿರುದ್ಧ ಷಡ್ಯಂತ್ರ ನಡೆಯುತ್ತಲೆ ಇದೆ. ದೇವರ ವಿರುದ್ಧ, ಧರ್ಮದ ವಿರುದ್ಧ ಹಾಗೂ ಹಿಂದೂಗಳ ವಿರುದ್ಧ ಯುದ್ಧ ನಡೆಸಲಾಗುತ್ತಿದೆ. ಹಿಂದೂ ಸಮಾಜ ಎಚ್ಚರಗೊಳ್ಳಚಿಂತನಸಭೆಯಲ್ಲಿ ಪ್ರ ಪ್ಪರವೀಣ.
ಸೃಷ್ಟಿ ಆರಂಭಕ್ಕೂ ಮುನ್ನ ದೇವರು ಶಕ್ತಿ ರೂಪದಲ್ಲಿ ಇದ್ದರು. ಸೃಷ್ಟಿಯನ್ನು ಸೃಷ್ಟಿಸುವ ಸಂದರ್ಭದಲ್ಲಿ ಉದ್ಭವಿಸಿದ ಶಕ್ತಿಯೇ ಓಂ ಆಗಿದೆ. ನಾವು ದೇವರ ವಂಶಜರಾಗಿದ್ದೇವೆ. ಗತಕಾಲದಲ್ಲಿ ವಿಶ್ವವೇ ಹಿಂದು ನಾಡಾಗಿತ್ತು. ಯುರೋಪ ಕೂಡ ಹಿಂದು ರಾಷ್ಟ್ರವಾಗಿತ್ತು. ಯುರೋಪಿನ ರಾಣಿಯು ಪೂರ್ವ ಕ್ಷತ್ರಿಯ ವಂಶಜರಾಗಿದ್ದರು ಎಂದು ತಿಳಿಸಿದರು.
ಭಾರತದ ಜನಸಂಖ್ಯೆ ಪ್ರಮಾಣ 1.9 ಇಳಿದಿದೆ. ಇದರಲ್ಲಿ ಹಿಂದು ಮುಸ್ಲಿಂ ಸಮುದಾಯದವರು ಇದ್ದಾರೆ. ಅದರಲ್ಲೂ ಹಿಂದುಗಳ ಪ್ರಮಾಣ 1.4, ಮುಸ್ಲಿಂ ಸಮುದಾಯದ 2.7 ಪ್ರಮಾಣದಲ್ಲಿ ವೃದ್ದಿ ಆಗುತ್ತಿದೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಭಾರತದಲ್ಲಿ ಹಿಂದುಗಳ ಸಂಖ್ಯೆ ಕುಸಿಯಲಿದೆ. ಹಿಂದು ವಿರೋಧಿಗಳು ಹಿಂದು ಸಮಾಜ ನಾಶ ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಹಿಂದುಗಳು ತಮ್ಮ ರಕ್ಷಣೆಗೆ ಹಿಂದು ಜನಸಂಖ್ಯೆ ಹೆಚ್ಚಿಸಬೇಕಾಗಿದೆ. ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿ ಆಗಬೇಕು. ಬಾಂಗ್ಲಾ ಮುಸ್ಲಿಂರನ್ನು ದೇಶದಿಂದ ಹೊರಗಡೆ ಕಳಿಸಬೇಕು. ಹಿಂದುಗಳು ಮೂರು ಮಕ್ಕಳು ಹೊಂದಬೇಕು. ಹಿಂದೂಗಳು ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ತಿಳಿಸಿದರು.
ವಿಶ್ವದಲ್ಲಿ ಯಾವುದೇ ಮೂಲೆಯಲ್ಲೂ ಹಿಂದುಗಳ ಮೇಲೆ ಆಕ್ರಮಣ ನಡೆದರೆ ಅದನ್ನು ವಿರೋಧಿಸಬೇಕು ಎಂದು ತಿಳಿಸಿದರು.
ರಾಮಮಂದಿರ ಉಳಿದರೆ ಮಾತ್ರ ನಮ್ಮ ಮನೆಗಳು ಉಳಿಯುತ್ತವೆ. ಇಲ್ಲವಾದರೆ ನಮ್ಮ ಮನೆ, ಮನೆ ಹೆಣ್ಣುಮಕ್ಕಳು ಉಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಭಾರತದಲ್ಲಿ ಹಿಂದುಗಳ ರಕ್ಷಣೆಗೆ 1989 ರಲ್ಲೇ ಹಿಂದುಗಳಲ್ಲಿನ ಎಲ್ಲ ಸಮಾಜದ ಯೋದರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಯಿತು. ದೇಶದಲ್ಲಿ 4 ಲಕ್ಷ ಹಿಂದು ಸಮಾಜದ ಯೋಧರು ಸಿಕ್ಕರು. ಇದಾದ ನಂತರ ರಾಮ ಮಂದಿರ ನಿರ್ಮಾಣ ಸಂಕಲ್ಪಕ್ಕೆ ಅಣಿಯಾದೆವು.
ಶಿವಾನಂದ ಮಠದ ಸದಾಶಿವಾನಂದ ಶ್ರೀಗಳು,  ರಮೇಶ ಕುಲಕರ್ಣಿ, ಶ್ರೀಕಾಂತ ಖಟವಟೆ ಇತರರು ಇದ್ದರು.
ಬಾಕ್ಸ್:
ಸಭೆಯಲ್ಲಿ ಪ್ರಶ್ನೋತ್ತರ ನಡೆಯಿತು. ಹಿಂದೂ ರಕ್ಷಣಾ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಹಾಗೂ ಏಕರೂಪ ನಾಗರಿಕ ಕಾನೂನುಗಳು ಶೀಘ್ರ ಜಾರಿ ಆಗಬೇಕು ಎಂದು ಜನರು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net