ಪ್ರವಚನ ಕೇಳುವುದರಿಂದ ಜೀವನ ಸಾರ್ಥಕ: ನಂದಿವೇರಿಮಠ ಶ್ರೀಗಳು

06GDG06
Published on

ವಿಜಯವಾಣಿ ಸುದ್ದಿಜಾಲ ಗದಗ
ಮನುಷ್ಯನಿಗೆ ಜೀವನದಲ್ಲಿ ಜ್ಞಾನದ ಬೆಳಕು ಸೀಗಬೇಕಾದರೆ ಪ್ರತಿಯೊಬ್ಬರು ಪ್ರವಚನ ಕೇಳುವುದರ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕಪ್ಪತಗುಡ್ಡದ ನಂದಿವೇರಿಮಠದ ಶಿವಕುಮಾರ ಶ್ರೀಗಳು ಹೇಳಿದರು.
ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೇಮರೆಡ್ಡಿ ಮಲ್ಲಮ್ಮನವರು ತಮ್ಮ ಜೀವನವನ್ನೇ ಗುರುಲಿಂಗ ಜಂಗಮರಿಗೆ ಅಪಿರ್ಸಿದರು. ಶ್ರೀಶೈಲ ಮಲ್ಲಿಕಾರ್ಜುನರು ಮಲ್ಲಮ್ಮನನ್ನು ಹುಡಕಿಕೊಂಡು ಬಂದು ಅವಳ ಭಕ್ತಿಗೆ ಒಲಿದರು. ಮನುಷ್ಯ ಹುಟ್ಟಿದ ಮೇಲೆ ಒಳ್ಳೆಯದನ್ನು ಮಾಡಬೇಕು. ಮತ್ತೊಬ್ಬರ ಬಗ್ಗೆ ಅಸೂಯೆ ಪಡಬಾರದು. ಧರ್ಮಕ್ಕಾಗಿ ಹೋರಾಡಿದವರನ್ನು ನಾವು ಈಗಲೂ ನಮ್ಮ ಜೀವನದಲ್ಲಿ ಸ್ಮರಿಸುತ್ತೇವೆ. ಅಕ್ಕಮಹಾದೇವಿ ಹಾಗು ಹೇಮರೆಡ್ಡಿ ಮಲ್ಲಮ್ಮ ಅವರು ಹೆಣ್ಣು ಮಕ್ಕಳಿಗೆ ಆದರ್ಶ ಆಗಿದ್ದಾರೆ. ಕಾಮ, ಕ್ರೋದ, ಮಸ್ತರವನ್ನು ಬಿಡಬೇಕು ಎಂದರು.
ಮಾಜಿ ನಗರಸಭೆ ಸದಸ್ಯ ಎಂ. ಎಂ. ಹಿರೇಮಠ ಮಾತನಾಡಿ, ಶ್ರಾವಣ ಮಾಸದಲ್ಲಿ ದೇವಸ್ಥಾನಕ್ಕೆ ಬಂದು ಪುರಾಣ ಪ್ರವಚನವನ್ನು ಕೇಳಬೇಕು. ಬರುವಾಗ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಬೇಕು. ಹೆಮರೆಡ್ಡಿ ಮಲ್ಲಮ್ಮ ಸಂಸಾರದಲ್ಲಿದ್ದರೂ ಸಹ ದೊಡ್ಡ ಸಾಧನೆ ಮಾಡಿದವರು. ಅಂತವರ ಕುರಿತು ಬಹಳ ಭಕ್ತಿಯಿಂದ, ಶ್ರದ್ಧೆಯಿಂದ ಪ್ರವಚನ ಆಲಿಸಬೇಕು. ತೃಪ್ತಿ ಜೀವನ ನಡೆಸಬೇಕು ಎಂದರು
ಕೊಟ್ರಪ್ಪ ಕಮತರ, ವೀರುಪಾಪ್ಪ ಅಕ್ಕಿ, ಶಾಸ್ತ್ರಿಗಳು, ಸಿದ್ಲಿಂಗಪ್ಪ ಅರಳಿ, ರಾಚಪ್ಪ ಕೋರಿ, ವೀರುಪಾಪ್ಪ ಅಂಗಡಿ, ಶೇಖಪ್ಪ ಹೊಂಬಳ, ಈಶ್ವರಪ್ಪ ಲಕ್ಕುಂಡಿ, ತೊಟಪ್ಪ ಕರಮುಡಿ, ಶಂಕರ ನಿರ್ಲಕೇರಿ, ಗಂಗಾಧರ ನಂದಿಕೋಲಮಠ, ಸುರೇಶ ಮಾಳವಾಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net