

ಗದಗ : ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸಹಾಯಕವಾಗಲಿದ್ದು ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವಿವಿದ ಪ್ರತಿಭೆಗಳನ್ನು ಕಾರಂಜಿಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸುತ್ತಿರುವದು ಶ್ಲಾö್ಯಘನೀಯ ಎಂದು ಗದಗ ಶಹರ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ ಹೇಳಿದರು.
ಅವರು ಮಂಗಳವಾರ ಗದಗ ರಾಜೀವ ಗಾಂಧಿ ನಗರದ ಸರಕಾರಿ ಉರ್ದು ಪ್ರಾಥಮಿಕ ಶಾಲೆ ನಂ. ೪ ರಲ್ಲಿ ಜರುಗಿದ ಉರ್ದು ಕ್ಲಸ್ಟರ್ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ.ಪ್ರಭಯ್ಯನಮಠ ಮಾತನಾಡಿ ಮಕ್ಕಳಲ್ಲಿ ಹುದುಗಿರುವ ಭಾವನಾತ್ಮಕ ಕಲೆಗಳ ಅನಾವರಣವೇ ಪ್ರತಿಭಾ ಕಾರಂಜಿ ಎಂದರು.
ಡೈಟ್ ಉಪನ್ಯಾಸಕಿ ಸುಧಾ ಬೆನಕಲ್ಲ ಮಾತನಾಡಿ ಮಕ್ಕಳ ವಿಕಾಸದ ಅಭಿವೃದ್ಧಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ ಎಂದರು.
ಗದಗ ಶಹರ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ.ಮಂಗಳಗುಡ್ಡ ಮಾತನಾಡಿ ಪಾಲಕರು, ಪೋಷಕರು ಸಮುದಾಯವು ಮೇಲಿಂದ ಮೇಲೆ ಶಾಲೆಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಸ್‌ಸಿ ಅಧ್ಯಕ್ಷ ಅಮೀನಸಾಬ ಹುಡೇದಮನಿ ಮಾತನಾಡಿ ಸರಕಾರಿ ಶಾಲೆಗಳು ಮಕ್ಕಳ ಬದುಕನ್ನು ಗಟ್ಟಿಗೊಳಿಸುತ್ತವೆ. ಶಾಲಾ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಕೈಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಜಿ.ಎಲ್.ಬಾರಾಟಕ್ಕೆ, ಡಿವೈಪಿಸಿ ಎಂ.ಎಚ್.ಕAಬಳಿ, ಬಿ.ಆರ್.ಪಿ ಮಹ್ಮದ್‌ಶಫಿ ಯರಗುಡಿ, ಜಿಲ್ಲಾ ಉರ್ದು ಸಂಯೋಜಕರಾದ ರಿಜ್ವಾನ್ ಕೌಲಗೇರಿ, ಸಿಆರ್‌ಪಿ ಹಾಗೂ ಬಿಆರ್‌ಪಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಎಸ್.ಡಿ.ಎಂ.ಸಿ ಸದಸ್ಯರಾದ ಕಾಶೀಮ್‌ಸಾಬ ಹುಡೇದಮನಿ, ಜಹಾಂಗೀರಸಾಬ ಕಳಸಾಪೂರ, ಗೌಸ್‌ಪಾಕ್ ಸಿರಸಂಗಿ, ಫರೀದಾ ಡೋಣಿ, ಎಸ್.ಡಿ.ಎಂ.ಸಿಯ ಮಾಜಿ ಅಧ್ಯಕ್ಷರು, ಶಹರ ವಲಯದ ಉರ್ದು ಶಾಲೆಗಳ ಮುಖ್ಯೋಪಾಧ್ಯಾಯರು ಪಾಲ್ಗೋಂಡಿದ್ದರು.
ಹಲೀಮಾ ಶೇಖ್ ಪ್ರಾರ್ಥಿಸಿದರು, ಕಲೀಲ ಜಲಗೇರಿ ಸ್ವಾಗತಿಸಿದರು, ಎಚ್.ಬಿ.ಮಕಾನದಾರ ನಿರೂಪಿಸಿದರು, ಐ.ಬಿ.ಗಾಡಗೋಳ ಪರಿಚಯಿಸಿದರು, ಮುಖ್ಯೋಪಾಧ್ಯಾಯನಿ ಕೆ.ಎ.ದಾವಲಖಾನವರ ವಂದಿಸಿದರು.