ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ:ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

25GDG02
Published on


ಗದಗ: ಇತ್ತೀಚೆಗೆ ನಗರದ ವಿದ್ಯಾದಾನ ಸಮಿತಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅನೇಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಪ್ರಾಥಮಿಕ ವಿಭಾಗದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಾದ ತೇಜಸ್ವಿನಿ ಹುಡೇದ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ, ಸಾದಿಯಾಫಾತಿಮಾ ಮುಲ್ಲಾ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ, ಭಕ್ತಿ ಆಲತಗಿ ಕವನ ವಾಚನದಲ್ಲಿ ಪ್ರಥಮ, ಪ್ರವೀಣ ತಡಸದ ಚಿತ್ರಕಲೆಯಲ್ಲಿ ಪ್ರಥಮ, ಕೃತಿಕಾ ಹಿಡಕಿಮಠ ಭಕ್ತಿಗೀತೆಯಲ್ಲಿ ಪ್ರಥಮ, ಲಾವಣ್ಯ ಗೌಡರ ಅಭಿನಯ ಗೀತೆಯಲ್ಲಿ ಪ್ರಥಮ, ರಾಘವೇಂದ್ರ ಖಠಾರೆ ಹಿಂದಿ ಕಂಠಪಾಠದಲ್ಲಿ ಪ್ರಥಮ, ಆದ್ಯಾ ನರೇಗಲ್ಲಮಠ ದೇಶಭಕ್ತಿಗೀತೆಯಲ್ಲಿ ದ್ವಿತೀಯ, ಪ್ರಸಾದ ಪಟ್ಟಣಶೆಟ್ಟಿ ಮಿಮಿಕ್ರಿಯಲ್ಲಿ ದ್ವಿತೀಯ, ಗಗನ ಗಡಾದ ಆಶುಭಾಷಣದಲ್ಲಿ ಪ್ರಥಮ, ಭೂಮಿಕಾ ರೇವಣಕರ ಪ್ರಬಂಧ ರಚನೆಯಲ್ಲಿ ಪ್ರಥಮ, ಸುಮಾ ಡಂಬಳ ಕ್ಲೇ ಮಾಡಲಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
1 ರಿಂದ 4ನೇ ತರಗತಿ ಕನ್ನಡ ಮಾಧ್ಯಮ ವಿಭಾಗದಲ್ಲಿ ಅಹ್ಮದಜಾದ್ ಖವಾಸ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ, ಸಾನ್ವಿ ಚೌಗಲಿ ಅಭಿನಯಗೀತೆಯಲ್ಲಿ ತೃತೀಯ ಸ್ಥಾನ, ಬಸವರಾಜ ಕರಿಬಿಷ್ಠಿ ಭಕ್ತಿಗೀತೆಯಲ್ಲಿ ಪ್ರಥಮ, ಸುಧಾ ಅರಹುಣಸಿ ದೇಶಭಕ್ತಿಗೀತೆಯಲ್ಲಿ ದ್ವಿತೀಯ, ಮನೋಜ ಸಾಲಗುಂದಿ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದಲ್ಲಿ ಅಲಿಶಾ ಶಿರಹಟ್ಟಿ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ, ಸ್ಫೂರ್ತಿ ಪಾಟೀಲ ಮಿಮಿಕ್ರಿಯಲ್ಲಿ ಪ್ರಥಮ, ರಿಹಾನಾ ಹವಾಲ್ದಾರ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ, ಆಸ್ಮಾ ಪಾಪಣ್ಣವರ ಹಿಂದಿ ಭಾಷಣದಲ್ಲಿ ಪ್ರಥಮ, ಸ್ನೇಹಾ ಶೆಟ್ಟರ ಭರತನಾಟ್ಯದಲ್ಲಿ ಪ್ರಥಮ, ಅಮೃತಾ ಅಂಗಡಿ ಕವನ ವಾಚನದಲ್ಲಿ ಪ್ರಥಮ, ನಿವೇದಿತಾ ಹೊಸಮಠ ಭಾವಗೀತೆಯಲ್ಲಿ ಪ್ರಥಮ, ವೇದಿಕಾ ದಂಡೋತಿ ಗಝಲ್‌ನಲ್ಲಿ ದ್ವಿತೀಯ
ಸಾಮೂಹಿಕ ವಿಭಾಗದಲ್ಲಿ ಜ್ಯೋತಿಕಾ ಮಸ್ಕಿ ತಂಡ ಜಾನಪದ ನೃತ್ಯದಲ್ಲಿ ದ್ವಿತೀಯ

ಕನ್ನಡ ಮಾಧ್ಯಮ ಪ್ರೌಢ ವಿಭಾಗದಲ್ಲಿ ಉಮಾ ನಾಯ್ಕಲ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ಸ್ಪಂದನಾ ನಾಯ್ಕಲ್ ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ, ಶೃತಿ ಇಟಗಿ ಪದ್ಯ ವಾಚನದಲ್ಲಿ ದ್ವಿತೀಯ, ವೈಷ್ಣವಿ ಕಡಿವಾಲ ಆಶುಭಾಷಣದಲ್ಲಿ ದ್ವಿತೀಯ, ಸ್ಫೂರ್ತಿ ರೋಣದ ಮಿಮಿಕ್ರಿಯಲ್ಲಿ ದ್ವಿತೀಯ, ಮಂಜುನಾಥ ಅಸ್ಕಿ ಜಾನಪದ ಗೀತೆಯಲ್ಲಿ ದ್ವಿತೀಯ, ಉಮಾ ನಾಯ್ಕಲ್ ಭಾವಗೀತೆಯಲ್ಲಿ ತೃತೀಯ, ಮಹ್ಮದ್ ರಿಹಾನ ಗೋಡೆಕಾರ ಗಝಲ್‌ನಲ್ಲಿ ತೃತೀಯ, ಸೃಷ್ಠಿ ಚಾಕಲಬ್ಬಿ ಕನ್ನಡ ಭಾಷಣದಲ್ಲಿ ತೃತೀಯ, ಸಮರ್ಥ ಮಾಸ್ತಮರಡಿ ಧಾರ್ಮಿಕ ಪಠಣದಲ್ಲಿ ತೃತೀಯ, ಅಯುಬ್ ಎರಂಡಿವಾಲೆ ಚರ್ಚಾ ಸ್ಪರ್ಧೆಯಲ್ಲಿ ತೃತೀಯ, ಮಂಜುನಾಥ ತಳವಾರ ಚಿತ್ರಕಲೆಯಲ್ಲಿ ತೃತೀಯ ಹಾಗೂ ಸಾಮೂಹಿಕ ವಿಭಾಗ ರಿಹಾನ್ ಗೋಡೆಕಾರ ತಂಡ ಕವ್ವಾಲಿ ಪ್ರಥಮ, ಕೀರ್ತಿ ಸೊಂಟಿ ವೀರನಾರಾಯಣ ಕಲಾಲ ಕ್ವಿಜ್‌ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ತನಿಷ್ಕಾ ಟೊಪಗಿ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ, ರಕ್ಷಾ ಸಣ್ಣದ್ಯಾವಣ್ಣವರ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ, ನೂತನ ಕೊಣ್ಣೂರ ಮಿಮಿಕ್ರಿಯಲ್ಲಿ ಪ್ರಥಮ, ಶ್ರೇಯಾ ಖಾನಾಪೂರ ಕಂಠಪಾಠದಲ್ಲಿ ದ್ವಿತೀಯ, ಹುದಾ ಮುಲ್ಲಾ ಹಿಂದಿ ಕಂಠಪಾಠದಲ್ಲಿ ದ್ವಿತೀಯ, ಪ್ರಿಯಾಂಕಾ ಪೂಜಾರ ಕಥೆ ಹೇಳುವ ಸ್ಪರ್ಧೆಯಲ್ಲಿ ತೃತೀಯ, ಮಂದಾರ ಬೂದಗುಂಪಿ ಧಾರ್ಮಿಕ ಪಠಣದಲ್ಲಿ ತೃತೀಯ, ವೇದಾ ಭಜಂತ್ರಿ ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ, ಸ್ಫೂರ್ತಿ ನೀಲಗಾರ ಭಕ್ತಿಗೀತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ತೋಂಟದಾರ್ಯ ಶಿಕ್ಷಣ ಸಂಸ್ಥೆ ಚೇರಮನ್ನರಾದ ಶಿವಾನಂದ ಪಟ್ಟಣಶೆಟ್ಟರ, ಕಾರ್ಯದರ್ಶಿಗಳಾದ ಕೊಟ್ರೇಶ ಮೆಣಸಿನಕಾಯಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ನಾಗರಾಜ ಗಾಳಿ, ಶಿಕ್ಷಕರಾದ ಕೆ.ಎಂ ಗೌಡರ ಸೇರಿದಂತೆ ಶಿಕ್ಷಕವೃಂದ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net