

Gadag: ಪ್ರಕಲ್ಪ ಶಿಕ್ಷಣ ಸಂಸ್ಥೆ (ರಿ) ಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ“ವಾರ್ಷಿಕ ಕ್ರೀಡಾ ಕಾರ್ಯಕ್ರಮʼʼ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಎಸ್. ವಿ. ಹುಬ್ಬಳ್ಳಿ ಅಧ್ಯಕ್ಷರಾಗಿ, ಶ್ರೀಮತಿ ಎಸ್.ಎಸ್.ಹುಬ್ಬಳ್ಳಿ ಹಾಗೂ ಕಾರ್ಯದರ್ಶಿಗಳಾದ ಪಿ.ಎಸ್.ಹುಬ್ಬಳ್ಳಿ ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಎಮ್.ಎಮ್.ಡಂಬಳ, ಶ್ರೀಮತಿ ಪುಷ್ಪಾ ಪಿ. ಮೇಗೇರಿ,ಸಹ-ಗುರುವೃಂದದವರು ಮತ್ತು ವಿದ್ಯಾರ್ಥಿಗಳು ಇದ್ದರು. ಈ ವರ್ಷದ ವಾರ್ಷಿಕ ಕ್ರೀಡಾಕೂಟದ ಕಾರ್ಯವನ್ನು ಶ್ರೀ ಎಸ್. ವಿ. ಹುಬ್ಬಳ್ಳಿ ಸಸಿಗಳಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು ನಂತರ ಆಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಿಗೆ ಚಾಲನೆ ನೀಡಿದರು. ಮಕ್ಕಳಿಗಾಗಿ ಓಡುವ ಸ್ಫರ್ಧೆ, ಕಪ್ಪೆ ಜಿಗಿತ, ಲಿಂಬೆಹಣ್ಣು-ಚಮಚ, ಪುಸ್ತಕದ ಸಮತೋಲನ ಹೀಗೆ ವಿವಿಧ ರೀತಿಯ ವೈಯಕ್ತಿಕ ಆಟ ಹಾಗೂ ಕಬ್ಬಡ್ಡಿ, ಖೋ ಖೋ, ಕ್ರಿಕೆಟ್, ಲಗೋರಿ ಇತ್ಯಾದಿ ಗುಂಪು ಆಟಗಳನ್ನು ಏರ್ಪಡಿಸಲಾಗಿತ್ತು. ಕಬ್ಬಡ್ಡಿ ಗುಂಪುಗಳ ನಾಯಕರಾಗಿ ವಸಂತ ಪಾಟೀಲ, ಚೇತನ ಹೆಬ್ಬಳ್ಳಿ ಹಾಗೂ ಖೋ ಖೋದಲ್ಲಿ ಕಿರಣ ಅಮರದ, ವೀರೇಶ ಸವಕಾರ,ಶಿವಕುಮಾರ ರೊಟ್ಟಿ, ಪೃಥ್ವಿ ಸುರಳ್ಳಿಕೇರಿ ಮುಂತಾದವರು ಭಾಗವಹಿಸಿದ್ದರು. ಮತ್ತು ಲಗೋರಿ ಗುಂಪುಗಳ ನಾಯಕಿರಾಗಿ ನವ್ಯಾ ಗಾಣಿಗೇರ್, ಹರ್ಷಿತಾ ಕಮ್ಮಾರ ಹಾಗೂ ಖೋ ಖೋದಲ್ಲಿ ಅಖಿಲಕುಮಾರಿ ಪಿ.,ನೇತ್ರಾ ಹಟ್ಟಿ, ಭೂಮಿಕಾ ಎಚ್., ಪ್ರಕೃತಿ ದಂಹಿಡೆ ಮುಂತಾದವರು ಭಾಗವಹಿಸಿದ್ದರು. ಶ್ರೀ ಎಸ್. ವಿ. ಹುಬ್ಬಳ್ಳಿರವರು “ಮಕ್ಕಳ ಅಭ್ಯಾಸದ ಜೊತೆ ಕ್ರೀಡೆಯು ಮುಖ್ಯ. ಕ್ರೀಡೆಯಿಂದ ಮಾನಸಿಕ ಸಾಮರ್ಥ್ಯ ಹಾಗೂ ಸಾಮರ್ಥ್ಯವು ವೃದ್ದಿ ಅಗುತ್ತದೆ, ದೈಹಿಕ ಶ್ರಮ ಮತ್ತು ಕೌಶಲ್ಯವನ್ನು ಒಳಗೊಂಡ ಚಟುವಟಿಕೆ, ಇದರಲ್ಲಿ ಒಬ್ಬ ವ್ಯಕ್ತಿ ಅಥವಾ ತಂಡವು ಇನ್ನೊಬ್ಬರೊಂದಿಗೆ ಅಥವಾ ಇತರರೊಂದಿಗೆ ಮನರಂಜನೆಗಾಗಿ ಸ್ಪರ್ಧಿಸಬೇಕು, ಮಕ್ಕಳು ವಿವಿಧ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ತುಂಬಾ ಮುಖ್ಯ..… ಎಂಬ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರೀಡಾಕೂಟದ ಭಾಗವಹಿಸಲು ಪ್ರೋತ್ಸಾಹಿಸಿದ್ದರು. “ನೀವು ಆಟವನ್ನು ಗೆಲ್ಲುತ್ತೀರ ಅಥವಾ ಸೋಲುತ್ತೀರಾ ಎನ್ನುವುದು ಮುಖ್ಯವಲ್ಲ ನೀವು ಆಟವನ್ನು ಹೇಗೆ ಆಡಿದಿರಿ ಎಂಬುದು ಮುಖ್ಯ ಮತ್ತು ಅತ್ಯಂತ ಮುಖ್ಯವಾಗಿರುವುದೆಂದರೆ ಗೆಲ್ಲುವುದಲ್ಲ ಆದರಲ್ಲಿ ಪಾಲ್ಗೊಳ್ಳುವುದು….. ಎಂಬ ಭಾವನೆಯನ್ನು ವ್ಯಕ್ತಪಡಿಸುವುದರ ಮೂಲಕ ಶಾಲಾ ಗುರುವೃಂದದವರು, ಪಾಲಕರು ಸಭೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದಾರೆ.