

ವಿಜಯವಾಣಿ ಸುದ್ದಿಜಾಲ ಗದಗ
ನೂರಾರು ವಿದ್ಯಾಥಿರ್ಗಳಿಗೆ ಜ್ಞಾನಧಾರೆ ಎರೆಯುವ ಜೊತೆಗೆ ಆರೋಗ್ಯ, ೇತ್ರದಲ್ಲಿಯೂ ಕೆಎಲ್ಇ ಸಂಸ್ಥೆ ದೇಶವಿದೇಶಗಳಲ್ಲಿ ಮಹಾ ಸಂಸ್ಥೆ ಆಗುವ ಮೂಲಕ ಬೆಳದು ನಿಲ್ಲಲು ಸಂಸ್ಥೆಯ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಠ್ಠಲ ಕೋಳಿ ತಿಳಿಸಿದರು.
ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ಬೆಟಗೇರಿಯ ಶಿವರತ್ನ ವೃದ್ದಾಶ್ರಮದಲ್ಲಿ ಏರ್ಪಡಿಸಿದ್ದ ಡಾ. ಪ್ರಭಾಕರ ಕೋರೆಯವರ 77ನೇ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮ ಅಧ್ಯತೆ ವಹಿಸಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆ ಮೊದಲು ಉತ್ತರ ಕರ್ನಾಟಕದ ಮಹಾನ ಸಂಸ್ಥೆ ಆಗಿತ್ತು. ಕಳೆದೆರೆಡು ದಶಕಗಳಿಂದ ಈ ಸಂಸ್ಥೆಯ ಅಂಗ ಸಂಸ್ಥೆಗಳು ದೇಶ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಮಾಜಸೇವೆಯಲ್ಲೂ ತೋಡಗಿಸಿಕೊಂಡಿವೆ ಎಂದರು.
ಡಾ. ಎ. ಕೆ. ಮಠ ಮಾತನಾಡಿ, ಕೆಎಲ್ಇ ಸಂಸ್ಥೆಯ ಅಧಿಕಾರವನ್ನು ಕೋರೆಯವರು ವಹಿಸಿಕೊಂಡಾಗ ಕೇವಲ 36 ಸಂಸ್ಥೆಗಳಿದ್ದವು. ಈಗ 282 ಸಂಸ್ಥೆಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ನರ್ಸರಿಯಿಂದ ಸ್ನಾತಕೋತ್ತರವರೆಗೂ ಎಲ್ಲ ೇತ್ರಗಳಲ್ಲೂ ಸಂಸ್ಥೆಗಳನ್ನು ಹುಟ್ಟುಹಾಕಿರುವುದು ಕೋರೆ ಅವರ ಕಾರ್ಯಮತೆ, ಶ್ರದ್ಧೆ, ಸಾಮಾಜಿಕ ಕಳಕಳಿ, ಶಿಣಪ್ರೇಮ ನಿಜಕ್ಕೂ ಶ್ಲಾನೀಯ ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ಡಾ. ವೀಣಾ ಮತ್ತು ಬೋಧಕ ಮತ್ತು ಭೋದಕೇತರ ಸಿಬ್ಬಂದಿಗಳು ಇದ್ದರು.