

ವಿಜಯವಾಣಿ ಸುದ್ದಿಜಾಲ ಗದಗ
ಬದುಕಿನ ಜೀವನದಲ್ಲಿ ಅವಕಾಶಗಳು ಆಗಾಗ್ಗೆ ಬಂದು ಹೋಗುತ್ತವೆ. ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುವದೇ ವಿದ್ಯಾಥಿರ್ಗಳ ಗುರಿ ಆಗಿರಬೇಕು ಎಂದು ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ. ಎಂ. ಬುರಡಿ ಹೇಳಿದರು.
ಪಂಡಿತ ಪಂಚಾರ ಗವಾಯಿಗಳವರ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಾಂಸತಿಕ, ಕ್ರೀಡಾ, ಎನ್ಎಸ್ಎಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾಥಿರ್ಗಳಲ್ಲಿ ಗುರಿಗಳು ಸ್ಪಷ್ಟವಾಗಿರಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯ. ಬದುಕಿನ ಜೀವನದಲ್ಲಿ ಹೊಗಳಿಕೆ, ತೆಗಳಿಕೆ ಸಹಜ. ಹೊಗಳಿಕೆಗೆ ಹಿಗ್ಗದೇ, ತೆಗಳಿಕೆಗೆ ತಗ್ಗದೇ ಸಮುದ್ರದಂತ ಸ್ಥಿತ ಪ್ರಜ್ಞೆ ಹೊಂದಿರಬೇಕು. ವಿದ್ಯಾಥಿರ್ಗಳಲ್ಲಿರುವ ಮೆದುಳು ಒಂದೇ ಆದರೆ ಅದರ ಉಪಯೋಗ ಸಮರ್ಥ ಬಳಕೆ ಮಾಡಿಕೊಳ್ಳುವುದರ ಮೂಲಕ ವೃತ್ತಿ ಬದುಕಿನಲ್ಲಿ ವ್ಯತ್ಯಾಸ ಕಾಣುತ್ತೇವೆ. ಆದಕಾರಣ ವಿದ್ಯಾಥಿರ್ಗಳು ಸತತ ಪ್ರಯತ್ನ ಮಾಡುವುದರ ಮೂಲಕ ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಪ್ರಾ. ಬಿ. ಜಿ. ಹಿರೇಮಠ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ವಿದ್ಯಾಥಿರ್ಗಳಿಗೆ ವಿವಿಧ ಅವಕಾಶಗಳು ಇರುತ್ತವೆ. ಅವುಗಳನ್ನು ಉಪಯೋಗಿಸಿಕೊಳ್ಳುವುದರ ಮೂಲಕ ಆದರ್ಶ ಜೀವನ ಪಡೆದುಕೊಳ್ಳಬೇಕು ಎಂದರು. ಮಹಾವಿದ್ಯಾಲಯದಲ್ಲಿ ವರ್ಷ ರ್ಪೂತಿ ನಡೆದುಬಂದ ಚಟುವಟಿಕೆಗಳ ವರದಿಯನ್ನು ಉಪಾಧ್ಯ ಪ್ರೊ. ಎ್. ಬಿ. ಅಂಗಡಿ ಪ್ರಸ್ತತ ಪಡಿಸಿದರು.
ನಿವೃತ್ತ ಪ್ರಾ. ಡಾ. ಜಿ. ಎಸ್. ಯತ್ನಟ್ಟಿ, ಪ್ರೊ. ಎ್. ಬಿ. ಅಂಗಡಿ, ಪ್ರೊ. ಬಿ. ಕೆ. ಪೂಜಾರ, ಡಾ. ಜಿ. ಎಸ್. ಯತ್ನಟ್ಟಿ, ಡಾ. ಬಿ. ಜಿ. ಹಿರೇಮಠ, ಡಾ. ಆರ್. ಎಸ್. ದಾನರಡ್ಡಿ ಇತರರು ಇದ್ದರು.