ಡಾ ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾರಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ದೇಶಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಾದವರು ದುಶ್ಚಟಗಳ ದಾಸರಾಗುತ್ತಿದ್ದು ಕೇದಕರ ಸಂಗತಿಯಾಗಿದೆ ಆರೋಗ್ಯಕರವಾದ ಸಮಾಜ ನಿರ್ಮಿಸುವುದರಲ್ಲಿ ಯುವಕರ ಪಾತ್ರ ಮುಖ್ಯ ವಾಗಿರುತ್ತದೆ ಎಂದು ಅವರು ಹೇಳಿದರು .
ಖ್ಯಾತ ತಗಲಾ ಉಪನ್ಯಾಸಕ ಹನುಮಂತ ಹೂಗಾರ್ ಅವರು ಮಾತನಾಡಿ ಪ್ರತಿವರ್ಷ ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಿರೋಧ ದಿನವನ್ನಾಗಿ ಆಚರಿಸಲಾಗುತ್ತಿದ್ದು ಇದರ ಉದ್ದೇಶ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಮಾದಕ ವಸ್ತು ವ್ಯಾಪಾರ ವಿರುದ್ಧ ದಿನವಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಡಾ. ನಾರಾಯಣ ಅಕ್ಕಸಾಲಿ, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ,ಉಪನ್ಯಾಸಕ ಮೃತ್ಯುಂಜಯ ಮಠ, ಡಾ. ಹನುಮಂತ ಹೂಗಾರ್, ವಿ ಎಂ ಪಟ್ಟದಕಲ್, ವಂದನಾ ನುಲ್ವಿ ಕಾಲೇಜಿನ ಜಿ ಎಸ್ ಶೃತಿ ಪವನ್, ಸಂಜೆ ಅಕ್ಕಸಾಲಿ ಉಪಸ್ಥಿತರಿದ್ದರು ಇದ್ದರು.