ಪ್ರಾಚಾರ್ಯ ವಿ ಎಂ ಗುರುಮಠ ಹಾಗೂ ಎನ್ ಎಂ ಶೇಕ್ ಅವರಿಗೆ ನಿವೃತ್ತಿ ನಿಮಿತ್ಯ ಸನ್ಮಾನ

IMG-20250429-WA0008
Published on

ಸಂಗೀತ ಮಹಾವಿದ್ಯಾಲಯ ಬೆಳೆಸುವುದರಲ್ಲಿ ಪ್ರಾಚಾರ್ಯ  ವಿ ಎಂ ಗುರುಮಠ ಅವರ ಕೊಡುಗೆ ಅನನ್ಯ

ಗದಗ: ಪದ್ಮವಿಭೂಷಣ  ಡಾ. ಪುಟ್ಟರಾಜ ಕವಿ ಗವಾಯಿಗಳವರು ಸಂಗೀತ ಮಹಾವಿದ್ಯಾಲಯವನ್ನು ಹುಟ್ಟು ಹಾಕಿದರು  ಅದಕ್ಕೆ ತಮ್ಮದೇ ಆದಂತ  ಕೊಡುಗೆ ನೀಡಿ ಅದನ್ನು ಬೆಳೆಸಿದ ಕೀರ್ತಿ ಪ್ರಾಚಾರ್ಯ  ವಿ ಎಂ ಗುರುಮಠ ಅವರಿಗೆ ಸಲ್ಲುತ್ತದೆ ಎಂದು  ಡಾ ಪಿ ಜಿ ಎ ಎಸ ಸಮಿತಿಯ ಕಾರ್ಯದರ್ಶಿಗಳಾದ ಜಿ ಎಸ್ ಪಾಟೀಲ್ ಅವರು ಹೇಳಿದರು.
ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ  ಇಂದು  ನಿವೃತ್ತಿ ಹೊಂದುತ್ತಿರುವ   ಪ್ರಾಚಾರ್ಯ ವಿ ಎಂ ಗುರುಮಠವರನ್ನು ಹಾಗೂ ಹಿಂದಿ ಉಪನ್ಯಾಸಕರಾದ ಎನ್ ಎಂ  ಶೇಕ್  ಅವರನ್ನು ಸನ್ಮಾನಿಸಿ  ಅವರು ಮಾತನಾಡುತ್ತಾ  ಹಿಂದಿ ಉಪನ್ಯಾಸಕರಾದ ಎನ್ ಎಂ ಸೇಕ್  ಅವರು ಸುದೀರ್ಘ 34 ವರ್ಷಗಳ ಕಾಲ ಮಹಾವಿದ್ಯಾಲಯದಲ್ಲಿ ಹಿಂದಿ ಉಪನ್ಯಾಸಕರಾಗಿ ಕಾರ್ಯ ಮಾಡಿ ಮಹಾವಿದ್ಯಾಲಯದ ಏಳಿಗೆಗೆ ಅವರದೇ ಆದ ಕೊಡಗಿಯನ್ನು  ನೀಡಿದ್ದಾರೆ ಅವರಿರುವರ  ನಿವೃತ್ತಿ ಜೀವನ ಸುಖಕರವಾಗಲಿ ಎಂದು ಅವರು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಇಂಗ್ಲಿಷ್ ಉಪನ್ಯಾಸಕರಾದ ಜಿ ಟಿ  ಹಿಡ್ಕಿಮಠ  ಅವರನ್ನು  ನೂತನ ಪ್ರಾಚಾರ್ಯರಾಗಿ ನೇಮಕ ಮಾಡಲಾಯಿತು.
 ಈ ಸಂದರ್ಭದಲ್ಲಿ ಎಸ್ ಎಂ ಗೌಡರ್, ಎಸ್ ಆರ್ ಇಟಗಿ,  ಮಲ್ಲಯ್ಯ ಶಿರೋಳಮಠ, ಚಕ್ರ ನವರ,  ಎಸ್‌ ಸಿ ಹಿರೇಮಠ್, ಡಾ. ಮೃತ್ಯುಂಜಯ ಶೆಟ್ಟರ್, ಶ್ರೀಮತಿ ಸುಮಿತ್ರ ಹಿರೇಮಠ್ ಉಪಸ್ಥರಿದ್ದರು. ಕಾರ್ಯಕ್ರಮವನ್ನು ಡಾ. ನಾರಾಯಣ್ ಅಕ್ಕಸಾಲಿ ಅವರು ನಡೆಸಿ ಕೊನೆಗೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net