ಗದಗ: ಆಧುನಿಕ ಯುಗದಲ್ಲಿ ಮನುಷ್ಯ ಕೆಲಸದ ಒತ್ತಡದಿಂದ ಶಾಂತಿಯನ್ನು ಕಳೆದುಕೊಂಡು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು ಧ್ಯಾನ ಮಾಡುವುದರಿಂದ ಮನುಷ್ಯ ಆ ಎಲ್ಲ ಒತ್ತಡಗಳಿಂದ ಪಾರಾಗಿ ಸುಖ ಶಾಂತಿ ನೆಮ್ಮದಿಯನ್ನು ಪಡೆದುಕೊಳ್ಳಬಹುದು ಎಂದು ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿ ಎಂ ಗುರುಮಠ ಅವರು ಹೇಳಿದರು.
ಡಾ ಪಿ ಜಿ ಎ ಎಸ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಶಿವ ಧ್ಯಾನ ಕೇಂದ್ರದ ಧ್ಯಾನ ಬಂಧುಗಳಿಂದ ಆಯೋಜಿಸಿದ್ದ ಧ್ಯಾನ ಜಗತ್ತು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಜ್ಞಾನ ಮತ್ತು ಧ್ಯಾನ ಒಂದಕ್ಕೊಂದು ಅವಿನಾಭವ ಸಂಬಂಧವಿದ್ದು ಪ್ರತಿಯೊಬ್ಬರೂ ಧ್ಯಾನದ ಮಹತ್ವವನ್ನು ಅರಿತು ಧ್ಯಾನ ಮಾಡುವುದರಿಂದ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದವರು ಹೇಳಿದರು.
ಚಿಕ್ಕೋಡಿಯ ವಸುಂದರ ವಾರಿಯರ್ಸ್ ಸಂಸ್ಥಾಪಕರಾದ ಡಾ ಜೀವಂದರ್ ಕೇತಪ್ಪನವರ್ ಮಾತನಾಡಿ ಶ್ರೀ ವೀರೇಶ್ವರ ಪುಣ್ಯಾಸರಮವು ತ್ರಿವೇಣಿ ಸಂಗಮವಾಗಿದ್ದು ಇಲ್ಲಿ ಸಂಗೀತ ಸಾಹಿತ್ಯ ನೃತ್ಯ ಕಲಿಯು ಬೆಳೆದು ಸಾವಿರಾರು ಜನರಿಗೆ ಬದುಕನ್ನು ಕೊಟ್ಟಿರುವಂತ ಸ್ಥಳ ಇದು ಆಗಿದ್ದು ಇನ್ನ ಮೇಲೆ ಧ್ಯಾನ ಜಗತ್ತಿನ ಪರಿಣಾಮವಾಗಿ ಇನ್ನೂ ಈ ಸ್ಥಳ ಉತ್ತುಂಗದ ಶಿಖರಕ್ಕೆ ಬೆಳೆದು ಸಾವಿರಾರು ಜನರಿಗೆ ಆಶ್ರಯ ನೀಡುವ ಸ್ಥಳವಾಗುತ್ತದೆ ಎಂದವರು ಹೇಳಿದರು.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಡಾ. ಕಲ್ಲಯ್ಯ ಅಜ್ಜನವರು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿ ಧ್ಯಾನ ಜಗತ್ತಿನ ಮುಖಾಂತರ ಧ್ಯಾನದ ಬಗ್ಗೆ ಅರಿವನ್ನು ಮೂಡುತ್ತಿರುವ ಶಿವ ಧ್ಯಾನ ಕೇಂದ್ರದ ಧ್ಯಾನ ಬಂಧುಗಳ ಕಾರ್ಯ ಪ್ರಶಂಷನೀಯವಾಗಿದೆ ಎಂದು ಅವರು ಹೇಳಿದರು.
ಡಾ ನಾರಾಯಣ ಹಿರೇಕೊಳಚ್ಚಿ, ಶಿವಸಯ್ಯ ಗಡ್ಡನ್ಮಠ, ಹನುಮಂತ್ ಹೂಗಾರ್, ರಾಹುಲ್ ರಾಥೋಡ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿದವು ಇವರಿಗೆ ತಬ್ಲಾಸಾತಿ ಶರಣಬಸಪ್ಪ ಕಲ್ಬುರ್ಗಿ ಹಾರ್ಮೋನಿಯಂ ಸಾತಿ ವಿ ಎಂ ಪಟ್ಟದಕಲ್ಲು ಅವರು ನೀಡಿದರು.