ಸಂಗೀತ ಮಹಾವಿದ್ಯಾಲಯಕ್ಕೆ ನ್ಯಾಕ್  ಟೀಂ ಬೇಟೆ

Published on

ಸಂಗೀತದ ಕಾಶಿ ಗದುಗಿನ ವೀರೇಶ್ವರ ಪುಣ್ಯಾಶ್ರಮ: ರಾಜೇಶ್ ಶಹಾ 

ಗದಗ: ದಕ್ಷಿಣ ಭಾರತದ ಸಂಗೀತದ ಕಾಶಿ ಗದುಗಿನ  ಶ್ರೀ  ವೀರೇಶ್ವರ ಪುಣ್ಯಶ್ರಮವಾಗಿದ್ದು ಈ    ಒಂದು ಸಂಗೀತದ  ಪವಿತ್ರ ಸ್ಥಳಕ್ಕೆ ನನ್ನ ನಮಸ್ಕಾರಗಳು ಎಂದು  ಕಾಶಿಯ  ಪೀರ್ ಟೀಮಿನ ಸಂಯೋಜಕರಾದ ಡಾ. ರಾಜೇಶ್ ಶಹಾ ಅವರು ಹೇಳಿದರು.
 ಡಾ ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ನ್ಯಾಕ್  ಟೀಮ್  ಬೇಟೆ ನೀಡಿ ಮಹಾವಿದ್ಯಾಲಯವನ್ನು ತಪಾಸಣೆ ಮಾಡಿ  ಅವರು ಮಾತನಾಡುತ್ತಾ ಹಾನಗಲ್ಲ ಕುಮಾರೇಶ್ವರರು ಪಂಡಿತ್ ಪಂಚಾಕ್ಷರ ಗವಾಯಿಗಳವರು ಹಾಗೂ ಡಾ ಪುಟ್ಟರಾಜ ಕವಿ ಗವಾಯಿಗಳವರು   ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ ವಾಗಿರುತ್ತದೆ ಎಂದವರು ಹೇಳಿದರು,
 ನ್ಯಾಕ್ ಟೀಮಿನ    ಸದಸ್ಯರಾದ ಮಹಾರಾಷ್ಟ್ರದ ಉಮೇಶ್ ಚಪ್ಪಕಿ ಅವರು ಮಾತನಾಡಿ ಗದಗ್ ಸಂಗೀತಕ್ಕೆ ಮಹಾನ್ ಕೊಡಗಿಯನ್ನು ಕೊಟ್ಟಿದ್ದು ಇಲ್ಲಿ ಅನೇಕ ಸಂಗೀತಗಾರರು ಆಗಿ ಹೋಗಿದ್ದಾರೆ ಡಾ ಪುಟ್ಟರಾಜ ಕವಿ ಗವಾಯಿಗಳವರ ಅಂದರ ಶಿಕ್ಷಣ ಸಮಿತಿಯ ಕಾರ್ಯ ಶ್ಲಾಘನೀಯವಾಗಿರುತ್ತದೆ ಎಂದವರು ಹೇಳಿದರು.
 ನ್ಯಾಪಿರ್ ಟೀಮಿನ ಚೇರ್ಮನ್ನರಾದ ಗುಜರಾತದ  ಪಂಡಿತ ಈಶ್ವರ್ ಚಂದ್ರ ಅವರು ಮಾತನಾಡಿ ಸಂಗೀತಕ್ಕೆ ಸಾಹಿತ್ಯದ ಪ್ರಾಮುಖ್ಯತೆ ಅಪಾರ ವಾಗಿದ್ದು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನೆರವೇರಿಸಿ ಕೊಟ್ಟಿದ್ದಾರೆ ಅವರ ಭವಿಷ್ಯ ಉಜ್ವಲವಾಗಲೆಂದು ಅವರು ಹೇಳಿದರು.
 ಇದೇ ಸಂದರ್ಭದಲ್ಲಿ  ಮಹಾವಿದ್ಯಾಲಯ ತಪಾಸಣೆ ಮಾಡಿದ ವರದಿಯನ್ನು ಪ್ರಾಚಾರ್ಯ ಡಾ. ಸುಮಿತ್ರ ಹಿರೇಮಠ ಅವರಿಗೆ ಹಸ್ತಾಂತರ ಮಾಡಿದರು.
 ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಮಿತ್ರ ಹಿರೇಮಠ  ನ್ಯಾಕಿನ ಕೋ ಆರ್ಡಿನೇಟರ್ ವೈಲಿನ ಉಪನ್ಯಾಸಕ ಡಾ ನಾರಾಯಣ ಅಕ್ಕಸಾಲಿ   ಖ್ಯಾತ ಸಂಗೀತಗಾರ ಡಾ. ಮೃತ್ಯುಂಜಯ ಶೆಟ್ಟರ್, ಆಡಳಿತ ಅಧಿಕಾರಿ ಪಿಸಿ ಹಿರೇಮಠ, ನ್ಯಾಯವಾದಿ ಎಂ ಆರ್ ಹಿರೇಮಠ್, ಕಾಲೇಜಿನ ಜಿಎಸ್ ಕುಮಾರಿ ಶ್ರುತಿ ಪವನ್ ಹಾಗೂ ಸಂಜೆ ಅಕ್ಕಶಾಲಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net