ಸಂಗೀತ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Untitled
Published on

ಕನ್ನಡದ ಕಂಪನ್ನು ಪಸರಿಸುವುದರಲ್ಲಿ  ಸಂಗೀತ ಗಾರರ  ಪಾತ್ರ ಅನನ್ಯ

ಗದಗ: ವಚನ ಗಾಯನ, ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ,  ಕಂಪನ್ನು ಪಸರಿಸುವುದರಲ್ಲಿ ಸಂಗೀತ ಗಾರರ  ಪಾತ್ರ ಅನನ್ಯ  ಎಂದು ಉಪನ್ಯಾಸಕ  ಗಂಗಾಧರ್  ಹಿಡ್ಕಿಮಠ ಅವರು ಹೇಳಿದರು.
ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ  ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿದವರು ಮಾತನಾಡುತ್ತಾ ಸಂಗೀತಗಾರರು ಕನ್ನಡ ಹಾಡುಗಳನ್ನು  ಸಂಗೀತಕ್ಕೆ ಅಳವಡಿಸಿ ಹಾಡುವುದರಿಂದ ಕನ್ನಡದ ಸವಿ  ಜನಸಾಮಾನ್ಯರಿಗೂ ಮುಟ್ಟುತ್ತಿದ್ದು ಇದರಿಂದ ಕನ್ನಡದ ಭಾಷೆ  ನಾಡು ನುಡಿ ಹಿರಿಮೆ ಗರಿಮೆಯನ್ನು ಅರಿಯಲು ಸುಗಮವಾಗುತ್ತದೆ  ಎಂದವರು ಹೇಳಿದರು.
 ಉಪನ್ಯಾಸಕ  ಮೃತ್ಯುಂಜಯ ಮಠದ  ಅವರು ಮಾತನಾಡಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದರಿಂದ  ಕನ್ನಡ ಭಾಷೆ ಬೆಳೆದು ಬರಲು ಸುಗಮವಾಗುತ್ತಿದ್ದು  ಪ್ರತಿಯೊಬ್ಬರು ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಕಳಕಳಿಯನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳಿದರು.
 ಐಕ್ಯೂಎಸ್ಈ ಕೋ ಆರ್ಡಿನೇಟರ್ ಡಾ, ಎನ್ ವಿ ಅಕ್ಕಸಾಲಿ ಅವರು ಮಾತನಾಡಿ  ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು ಯಾರು ಸಂಕೋಚಿತ  ಮನೋಭಾವನೆಯನ್ನು ಬೆಳೆಸಿಕೊಳ್ಳದೆ  ಕನ್ನಡ ಭಾಷೆಯನ್ನು ಬಳಸಬೇಕು  ಅಂದಾಗ ಮಾತ್ರ ಕನ್ನಡ ಭಾಷೆ ಉಳಿದು ಬೆಳೆದು ಬರಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.
 ಡಾ ಎಸ್ ಎಸ್ ಗಡ್ಡಮಠ ಅವರು ಕನ್ನಡದ ಹಾಡುಗಳನ್ನು ಹಾಡಿದರು ಇವರಿಗೆ ತಬಲಾಸಾತಿ ವಾ ಆರ್ ಮೂಲಿಮನಿ ಹಾರ್ಮೋನಿಯಂ ಸಾತಿ   ವಿ ಎಂ ಪಟ್ಟದಕಲ್ ಅವರು ನೀಡಿದರು ಶೃತಿ ಪವನ್, ವಾಣಿಶ್ರೀ, ಸಂಜೆಯ ಅಕ್ಷಾಲಿ, ಹರ್ಷದ್, ವೀರೇಶ್ ಹಿರೇಮಠ  ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net