ಆದಿ ಕವಿ ಮಹಾಋಷಿ ವಾಲ್ಮೀಕಿ ಜಯಂತಿ ರಾಮಾಯಣವು ಭಾರತೀಯ ಸಂಸ್ಕೃತಿಯ ಪ್ರತೀಕ : ಹಿಡಿಕಿಮಠ

1000087595
Published on

ಗದಗ. ಮಹಾಕಾವ್ಯ ರಾಮಾಯಣವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ  ಎಂದು ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಗಂಗಾಧರ ಹಿಡಿಕಿಮಠ ಅವರು ಹೇಳಿದರು.  ಡಾ ಪಿಜಿಎಎಸ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತ್ತರ ಕೇಂದ್ರದಲ್ಲಿ  ಆಯೋಜಿಸಿದ್ದ

 ಆದಿ ಕವಿ ಮಹಾಋಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತ  ನೀತಿ, ಧರ್ಮ, ಸಂಸ್ಕೃತಿ ಕುರಿತು ಆದಿಕವಿ ಮಹಾಋಷಿ ವಾಲ್ಮೀಕಿಯ ರಾಮಾಯಣದಲ್ಲಿ ನಾವು ನೋಡುತ್ತೇವೆ ಎಂದ ಅವರು ಭಾರತೀಯರಿಗೆ ರಾಮಾಯಣವು ಒಂದು ಪವಿತ್ರ ಗ್ರಂಥವಾಗಿದೆ ಇದು ಸಂಸ್ಕೃತ  ಸಾಹಿತ್ಯದ  ಮೇರು  ಗ್ರಂಥವಾಗಿದೆ  ಎಂದು ಅವರು ಹೇಳಿದರು.
 ಪಂಡಿತ್ ಶಾಮರಾವ್    ಫೂಲಾರಿ ಅವರು ಮಾತನಾಡಿ ಪ್ರತಿಯೊಬ್ಬರು ವಾಲ್ಮೀಕಿ ರಾಮಾಯಣವನ್ನು ಓದಬೇಕು ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಹೇಳಬೇಕು ಅದು ಪ್ರಗತಿಪರ ಸಮಾಜಕ್ಕೆ ಸನ್ಮಾರ್ಗವನ್ನು   ಮಾಡುತ್ತದೆ ಎಂದು ಅವರು ಹೇಳಿದರು.
 ಶ್ರೀಮತಿ ಮಹಾಲಕ್ಷ್ಮಿ  ಹೆಗಡೆ , ಡಾ ನಾರಾಯಣ್ ಹಿರೇಕೊಳಚ್ಚಿ,ವಾಯ್ ಆರ್  ಮೂಲಿಮನಿ, ವಿ ಕೆ ಜೋಶಿ, ಡಾ. ಕೊಡಗಾನೂರ ಹನುಮಂತ್, ಎಚ್ಎಫ್ ಓಲೆಕಾರ್ ವಿ ಎಂ ಪಟ್ಟದಕಲ್, ಬಿ ಎಚ್ ಜೋಕ್ ರೆಡ್ಡಿ, ಡಾ. ಎಸ್ ಎಸ್  ಗಡ್ಡದಮಠ ಉಪಸ್ಥರಿದ್ದು ಕೊನೆಗೆ   ವಂದಿಸಿದರು. ವರದಿ. ಸಂಗೀತ ಮಹಾವಿದ್ಯಾಲಯ ಗದಗ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net