ಸಂಗೀತದಲ್ಲಿ ಗುರು ಶಿಷ್ಯರ ಸಂಬಂಧ ಅಪಾರ: ಸುಪ್ರಿಯಾ  ಭಟ್ಟ

1000076000
Published on
ಗದಗ: ಸಂಗೀತ ದೇವರನ್ನು ಒಲಿಸಿಕೊಳ್ಳುವ ಭಾಷೆಯಾಗಿದ್ದು ಗುರು  ಶಿಷ್ಯರ ಸಂಬಂಧ ಸಂಗೀತದಲ್ಲಿ ಅನ್ಯೂನ್ಯ ವಾಗಿರುತ್ತದೆ ಎಂದು ಧಾರವಾಡದ ಖ್ಯಾತ ಸಂಗೀತ ವಿದುಷಿ ಶ್ರೀಮತಿ ಸುಪ್ರಿಯಾ ಭಟ್ ಅವರು ಹೇಳಿದರು.
 ಡಾ ಪಿ ಜಿ ಎ ಎಸ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ  ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ  ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ  ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಸಂಗೀತ ಕಲಿತ ವಿದ್ಯಾರ್ಥಿಗಳು ಸಂಸ್ಕಾರವಂತರಾಗುತ್ತಾರೆ ಎಂದು ಅವರು ಹೇಳಿದರು.
 ಪ್ರಾಚಾರ್ಯ ಗಂಗಾಧರ್ ಹಿಡಿಕಿಮಠ ಅವರು ಮಾತನಾಡಿ    ಶಿಕ್ಷಣವೇ ಶಕ್ತಿಯಾಗಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಗಮನಾರ್ವಾಗಿದೆ ಅನೇಕ ವಿಭಾಗದಲ್ಲಿ ಶಿಕ್ಷಕರಿಲ್ಲದೆ ಶಿಕ್ಷಣದ ಗುಣಮಟ್ಟ ಖುಷಿಯುತ್ತಿದೆ  ಎಂದು ಅವರು ಹೇಳಿದರು.
 ಖ್ಯಾತ ತಬಲಾವಾದಕ ಡಾ ಎಚ್ ಬಿ ಹೂಗಾರ್ ಅವರು ಮಾತನಾಡಿ ಖ್ಯಾತ ತಬಲಾವಾದಕ ಉಸ್ತಾ ಜಾಕೀರ್ ಹುಸೇನ್ ಅವರು ತಬಲಾ ಮಂತ್ರಿಕರಾಗಿದ್ದರು ಅಂತ ಸಾಧಕರನ್ನು ಜಗತ್ತು ಸದಾ ನೆನಪಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.
ಡಾ. ವಿಶ್ವನಾಥ್ ಹಿರೇಮಠ ಅವರು ಮಾತನಾಡಿದರು. ಸಮಾರಂಭದಲ್ಲಿ  ವಿ ಎಂ ಪಟ್ಟದಕಲ್, ಶ್ರೇಯಸ್. ಹರ್ಷತ್ ಕುಮಾರ್.ಶಾಮರಾವ್  ಫುಲಾರಿ, ವಿ ಕೆ ಜೋಶಿ, ಶರಣಪ್ಪ ಕಲ್ಬುರ್ಗಿ, ಮಹಾಲಕ್ಷ್ಮಿ ಹೆಗಡೆ, ವಾ ಯಾರ್ ಮೂಲಿಮನಿ, ಮೃತ್ಯುಂಜಯ ಮಠದ,  ಬಿ ಎಚ್ ಜೋಗರೆಡ್ಡಿ,ಹೊಳೆಯಪ್ಪ ಒಲೆಕಾರ್ ಉಪಸ್ಥಿತರಿದ್ದು . ಡಾ ಶಿವಬಸಯ್ಯ  ಗಡ್ಡದ್ಮಠ ಅವರು ಕಾರ್ಯಕ್ರಮ ನಡೆಸಿ ಕೊನೆಗೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net