ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಬೆಳಸುವಲ್ಲಿ ಸಂಗೀತದ ಪಾತ್ರ ಅನನ್ಯ: ಪ್ರಾ ಹಿಡಿಕಿಮಠ

1000066304
Published on
ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಸಂಗೀತಕ್ಕೆ ಆಧ್ಯಾತ್ಮಿಕ, ಸಾಂಸ್ಕೃತಿ  ಪರಂಪರೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಬೆಳಸುವಲ್ಲಿ ಸಂಗೀತದ ಪಾತ್ರ ಅನನ್ಯ ಎಂದು ಪ್ರಾಚಾರ್ಯ ಜಿ. ಟಿ. ಹಿಡಿಕಿಮಠ ಹೇಳಿದರು.
ನಗರದ ಸ್ವರಾಲಯ ಸಂಗೀತ ಶಾಲೆಯಲ್ಲಿ ಸೋಮವಾರ  ಏರ್ಪಡಿಸಿದ್ದ ಪಂಡಿತ ಗುರುನಾಥ ಸುತಾರ ಗುರುವಂದನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗುರುವಿನ ಮಹಿಮೆ ಅಪಾರವಾಗಿದೆ. ಗುರು ಶಿವನ ಸುರೂಪಿ ಆಗಿರುತ್ತಾನೆ. ಗುರುವಿನಲ್ಲಿ ಭಕ್ತಿ ಶ್ರದ್ಧೆ ಸಮರ್ಪಣಾ ಭಾವನೆಯನ್ನು ಹೊಂದಿ ವಿದ್ಯೆಯನ್ನು ಸಂಪಾದಿಸಿಕೊಳ್ಳಬೇಕು ಎಂದು ಹೇಳಿದರು.
ಗುರುನಾಥ ಸುತಾರ ಮಾತನಾಡಿ,  ಪುಟ್ಟರಾಜ ಕವಿ ಗವಾಯಿಗಳವರು ಅಂದ ಅನಾಥ ಮಕ್ಕಳ ಬಾಳಿಗೆ ಬೆಳಕಾಗಿ ಅವರಿಗೆ ಸಂಗೀತ ವಿದ್ಯೆಯನ್ನು ದಾರೆ ಎರೆದರು.  ಅದೇ ಸಂಸ್ಥೆಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ 30 ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯ ಮಾಡಿ ನಿವೃತ್ತಿ ಹೊಂದಿದರುವ ಮಕ್ಕಳಿಗೆ ಸ್ವರಾಲಯ ಸಂಗೀತ ಶಾಲೆ ಸಂಗೀತ ವಿದ್ಯೆಯನ್ನು ಹೇಳಿಕೊಡುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಶಿಕ್ಷಕ ಸಿದ್ದಪ್ಪ ಬಾವಿಕಟ್ಟಿ ಮಾತನಾಡಿ ಹರ ಮುನಿದರೂ ಗುರು ಕಾಯುವನು. ಪಂಡಿತ  ಗುರುನಾಥ ಸುತಾರವರು ಮಕ್ಕಳಿಗೆ ಸಂಗೀತ ವಿದ್ಯೆಯನ್ನು ಕಲಿಸುತ್ತಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.
 ಮಾಲತಿ ಮ್ಯಾಗೇರಿ, ವೀಣಾ ಮ್ಯಾಗೇರಿ, ಹೃಷಿಕೇಶ, ಶಿವಾನಂದ, ಶ್ರೀನಿವಾಸ, ಪ್ರಣವ, ಆದರ್ಶ, ಯಶವಂತ, ಸಮೃದ್ಧಿ, ಪ್ರೃದ್ವಿನಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net