ಗದಗ: ಸಂಗೀತ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಪುಸ್ತಕ ರಾಗರಂಗ ರಜನೀರಾಗ ದರ್ಶನೀ ಪುಸ್ತಕವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಪುಸ್ತಕ ಲೇಖಕರಾದ ಪಂಡಿತ ರಾಘವೇಂದ್ರ ಗುಡಿ ಅವರು ಹೇಳಿದರು.
ಡಾ ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಾ ಅನೇಕ ಸಂಗೀತಗಾರರನ್ನು ಸಂಪರ್ಕಿಸಿ ಮಾಹಿತಿಯನ್ನು ಈ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.
ಖ್ಯಾತ ಸಂಗೀತಗಾರ ಪಂ. ಅರವಿಂದ ಹುಯಿಲ ಗೋಳಕರ್ ಅವರು ಮಾತನಾಡಿ ರಜನೀ ರಾಗದರ್ಶಿನಿ ಪುಸ್ತಕ ಒಂದು ಅತ್ಯುತ್ತಮವಾದ ಕೃತಿಯಾಗಿದ್ದು ಹಿರಿಯ ವಿದ್ವಾಂಸರಾದ ಪಂಡಿತ ರಾಘವೇಂದ್ರ ಗುಡಿ ಅವರು ತಮ್ಮಲ್ಲಿರುವ ಅಪಾರ ಸಂಗ್ರಹವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ರಾತ್ರಿ ಸಮಯದಲ್ಲಿ ಪ್ರಸ್ತುತಪಡಿಸಲಾಗುವ ಎಪ್ಪತ್ತಕ್ಕೂ ಹೆಚ್ಚು ರಾಗಗಳ ಮಾಹಿತಿಯನ್ನು ನೀಡಿ ಸಂಗೀತಗಾರರಿಗೆ ವಿಶೇಷವಾಗಿ ಸಂಗೀತ ವಿದ್ಯಾರ್ಥಿಗಳಿಗೆ ಉಪಕರಿಸಿದ್ದಾರೆ ಎಂದು ಅವರು ಹೇಳಿದರು.
ಡಾ. ಪಂಡಿತ್ ನಾರಾಯಣ ಅಕ್ಕಸಾಲಿ ಅವರು ಮಾತನಾಡಿ ಪುಸ್ತಕ ಸಮಗ್ರವಾಗಿ ಪರಿಚಯಿಸಿದರು.
ಪ್ರಾಚಾರ್ಯ ಜಿ ಟಿ ಹಿಡಿಕಿಮಠ , ಡಾ ಹನುಮಂತ ಹೂಗಾರ್, ವಿ ಕೆ ಜೋಶಿ, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಹಾಗೂ ಉಪನ್ಯಾಸಕ ಎಂ ಎಸ್ ಮಠದವರ ಉಪಸ್ಥಿತರಿದ್ದರು