ಅಂಚೆ ನೌಕರರ ಧರಣೆ

IMG-20250724-WA0011
Published on
ಗದಗ:  ಭಾರತೀಯ ಅಂಚೆ ನೌಕರರ ಸಂಘ  (BPEF) ಹಾಗೂ ಭಾರತೀಯ ಮಾಜ್ದೂರ್ ಸಂಘ (BMS)  ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ
ಆಗ್ರಹಿಸಿ ಮಂಗಳವಾರ ಸಂಜೆ ಗದಗ ವಿಭಾಗೀಯ ಕಚೇರಿ ಎದುರು ಧರಣೆ ನಡೆಸಲಾಯಿತು.
ಭಾರತೀಯ ಅಂಚೆ ನೌಕರರ ಸಂಘದ ಗದಗ ವಿಭಾಗದ  ಸಂಚಾಲಕ ದೊಡ್ಡಪ್ಪ ಇಟಗಿ ಮಾತನಾಡಿ, 8ನೇ ವೇತನ ಆಯೋಗದ ಜಾರಿಗೆ ವಿಳಂಬವಾದ ಕಾರಣ, 50% ಡಿಎವನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಬೇಕು ಎಂದರು.
ಪ್ರತಿದಿನದ "ಲಾಗಿನ್ ಡೇ" ಕಿರುಕುಳವನ್ನು ಸ್ಥಗಿತಗೊಳಿಸಬೇಕು. ಇದಲ್ಲದೆ, ವಾರಕ್ಕೆ ಆರು ದಿನ ಕೆಲಸ ಮಾಡುವ ಸಿಬ್ಬಂದಿಗೆ ರಜೆ ಹೆಚ್ಚಿಸಬೇಕು ಅಥವಾ ಹೆಚ್ಚುವರಿ ವೇತನ ನೀಡಬೇಕು ಎಂದು ಆಗ್ರಹಿದರು.
ಭಾರತೀಯ ಅಂಚೆ ನೌಕರರ ಸಂಘದ ಗದಗ ವಿಭಾಗದ ಕಾರ್ಯದರ್ಶಿ ಡಿ.ಜಿ.ಮ್ಯಾಗೇರಿ ಮಾತನಾಡಿ, 8ನೇ ವೇತನ ಆಯೋಗವನ್ನು ಕೂಡಲೇ ರಚಿಸಬೇಕು ಮತ್ತು ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೆ, ಟಾರ್ಗೆಟ್ ಹೆಸರಿನಲ್ಲಿ ನೌಕರರನ್ನು ಶೋಷಣೆ ಮಾಡುವುದನ್ನು ನಿಲ್ಲಿಸಬೇಕು.
ಗ್ರಾಮೀಣ ಡಾಕ್ ಸೇವಕರನ್ನು (GDS) 8ನೇ ವೇತನ ಆಯೋಗದ ವ್ಯಾಪ್ತಿಗೆ ತರಬೇಕು ಎಂದರು.
ವೆಂಕಟೇಶ ಆಕಳವಾಡಿ ಮಾತನಾಡಿದರು.
ವಿಜಯ ಅಂಬಣ್ಣವರ, ಹಜರತ್ ಅಲಿ, ಭೀಮಪ್ಪ ದೊಡ್ಡಮನಿ, ಅರುಣಕುಮಾರ  ಗಂಗಾವತಿ,
 ರವಿ ಜಾಧವ, ಉಮೇಶ ಸಂದಿಮನಿ, ಶಿವಕುಮಾರ ಸುಳ್ಳದ, ನೀಲಮ್ಮ ದಿಬ್ಬದಮನಿ, ವಿದ್ಯಾ ಗದಗ, ಸರೋಜಾ ಪಟ್ಟಣಶೆಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net