

ಗದಗ: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಖಂಡಿಸಿ ಹಾಗೂ ತ್ವರಿತ 8ನೇ ವೇತನ ಜಾರಿ, ಎನ್ಪಿಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಗದಗ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಅಂಚೇ ಕಚೇರಿ ಸಿಬ್ಬಂದಿ ಸಾಂಕೇತಕವಾಗಿ ಕಪ್ಪು ಪಟ್ಟಿ ಕಟ್ಡಿಕೊಂಡು ಪ್ರತಿಭಟಿಸಿದರು.
ಇದೇ ವೇಳೆ ಮಾತನಾಡಿದ ಭಾರತೀಯ ಅಂಚೆ ನೌಕರರ ಸಂದ ಜಿಲ್ಲಾ ಕಾರ್ಯದಶಿರ್ ಡಿ. ಜಿ. ಮ್ಯಾಗೇರಿ, ಅಂಚೆ ಇಲಾಖೆಯ ನೌಕರರಿಗೆ ಅವೈಜ್ಞಾನಿಕ ಗುರಿ ನಿಗದಿಗೊಳಿಸಬಾರದು. ಗ್ರಾಮೀಣ ಡಾಕ್ ಸೇವಕರಿಗೆ ಕನಿಷ್ಠ ವೇತನದ ಜತೆಗೆ ರಜೆಯ ಸೌಲಭ್ಯಗಳನ್ನು ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಶ್ರೀ ಭತಿರ್ಗೊಳಿಸಿ ಅಂಚೆ ಇಲಾಖೆಯಲ್ಲಿರುವ ಕಾರ್ಯದ ಒತ್ತಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ವಿಜಯ ಅಂಬಣ್ಣವರ, ಹಜರತ್ ಅಲಿ, ರವಿ ಜಾಧವ, ಉಮೇಶ ಸಂದಿಮನಿ, ಶಿವಕುಮಾರ ಸುಳ್ಳದ, ಮಂಜುನಾಥ ಟಿ, ನೀಲಮ್ಮ ದಿಬ್ಬದಮನಿ, ಸರೋಜಾ ಪಟ್ಟಣಶೆಟ್ಟಿ ಇದ್ದರು.