ಆಧ್ಯಾತ್ಮಕ ಜೀವನ ಕ್ರಮ ಸುಖಿ ಜೀವನಕ್ಕೆ ರಹದಾರಿ: ಡಿ.ಜಿ.ಮ್ಯಾಗೇರಿ

IMG-20250301-WA0022
Published on
ಗದಗ: ಮಹಾಶಿವರಾತ್ರಿ ಅಂಗವಾಗಿ ನಗರದ ಮುಸ್ಸಿಪಲ್ ಕಾಲೇಜ್ ಆವರಣದಲ್ಲಿ ಶುಕ್ರವಾರ ಸಂಜೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ  ಆಶ್ರಯದಲ್ಲಿ ಗದಗ ಅಂಚೆ ಇಲಾಖೆ ಅಧಿಕಾರಿಗಳು ಹಾಗೂ  ಪೋಸ್ಟಮನ್ ಗಳ ಸೇವೆ ಗುರುತಿಸಿ ಸನ್ಮಾನ ಮಾಡಲಾಯಿತು.
ಕಳೆದ ಮೂರು ದಿನಗಳ ಕಾಲ ನಗರ ವಿವಿಧೆಡೆಗಳಲ್ಲಿ ವೈವಿಧ್ಯಮಯ ಶಿವಲಿಂಗ ದರ್ಶನ ನಡೆಯಿತು.
ಸನ್ಮಾನ ಸ್ವೀಕರಿಸಿ ಪ್ರಧಾನ ಅಂಚೆ ಇಲಾಖೆಯ ಉಪ ಅಂಚೆ ಪಾಲಕರಾದ ಡಿ.ಜಿ.ಮ್ಯಾಗೇರಿ ಮಾತನಾಡಿ, ಬದುಕಿನಲ್ಲಿ ಭೌತಿಕ ಸಂಪತ್ತು ಕೆಲವು ಸಮಯ ಮಾತ್ರ ಸುಖ ಕೊಡಬಹುದು. ಆದರೇ, ಆಧ್ಯಾತ್ಮಕ ಜೀವನ ಕ್ರಮದಿಂದಾಗಿ ಸುಖ, ಶಾಂತಿ, ನೆಮ್ಮದಿ ಪಡೆದುಕೊಳ್ಳಲು ಇಂತಹ ಧಾರ್ಮಿಕ ಕೆಲಸ ಇನ್ನೂ ಹೆಚ್ಚು ಜನರ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದರು.
ಅಂಚೆ ಇಲಾಖೆ ಎಸ್.ವಿ.ಹಿರೇಮಠ ಮಾತನಾಡಿ, ದಿನನಿತ್ಯ ಕಾಯಕ ಯೋಗಿಗಳಾಗಿರುವ ಅಂಚೆ ಪೇದೆಗಳ ಸೇವಾ ನಿಷ್ಠೆ, ಪ್ರಾಮಾಣಿಕತೆ, ಕೆಲಸದಲ್ಲಿ ತೋರುವ  ಶ್ರದ್ದೆ ಗುರುತಿಸಿ ಸನ್ಮಾನ ಮಾಡಿರುವದು ಸಂತಸದ ತಂದಿದೆ ಎಂದರು.
 ಮುಂಬರುವ ದಿನಗಳಲ್ಲಿ ಅಂಚೆ ಇಲಾಖೆ ನೌಕರಿಗೆ ಸೇವಾ ಮನೋಭಾವ ಆತ್ಮವಿಶ್ವಾಸ ಹೆಚ್ಚೆಚ್ಚು ಬೆಳೆಸಿಕೊಳ್ಳಲು ಪ್ರೇರಣೆಯಾಗಿದೆ ಎಂದರು.
ಜಗತ್ತಿನ 140 ದೇಶಗಳಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯವು ಧರ್ಮ ರಹಿತ, ಜಾತಿ ರಹಿತ ಆಧ್ಯಾತ್ಮ ಸೇವೆ ಮಾಡುತ್ತಿದೆ. ಪಾವನಧಾಮ ಕೇಂದ್ರದಡಿ 18 ಕೇಂದ್ರಗಳು ಹಾಗೂ ನೂರಾರು ಗೀತ ಪಾಠಶಾಲೆಗಳು ನಿರಂತರವಾಗಿ ನಡೆಯುತ್ತಿವೆ. ಈ 18 ಕೇಂದ್ರಗಳಲ್ಲಿ 45ಕ್ಕೂ ಅಧಿಕ ಸಹೋದರಿಯರು ತಮ್ಮನ್ನು ತಾವು ಸಮರ್ಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ’ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ನಕುಮಾರಿ ಜಯಂತಿ ಅಕ್ಕನವರು ಬೆಳಕು ನುಡಿ ಹೇಳಿದರು.
ಗದಗ ವಿಭಾಗೀಯ ಇಲಾಖೆ ಶ್ರೀಕಾಂತ ತೆರದಾಳ, , ವ್ಯಾಪಾರ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ಆಕಳವಾಡಿ,  ಗದಗ-ಬೆಟಗೇರಿ ಅಂಚೆ ಸಿಬ್ಬಂದಿ ಪಾಲ್ಗೊಂಡಿದ್ದರು. ಸಾವಿತ್ರಿ ಅಕ್ಕನವರು ನಿರೂಪಿಸಿದರು. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net