

ಗದಗ: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಗದಗ ಪೇಟೆಯ ವೀರಭಧ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪೋಷಣ ಮಾಸಾಚರಣೆ ಕಾರ್ಯಕ್ರಮದ ಕುರಿತಾದ ಪೌಷ್ಠಿಕ ಆಹಾರವನ್ನು ಮಕ್ಕಳು, ಗರ್ಭೀಣಿಯರು ಬಾಣಂತಿಯರು ಸರಿಯಾಗಿ ಸೇವಿಸಬೇಕು ಎಂದರು ಹಾಗೂ ಅದರ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಪದ್ಮಾವತಿ ಜಿ ಇವರು ಮಾತನಾಡಿ ಸೆಪ್ಟೆಂಬರ ಮಾಹೆಯಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಏಕ್ ಪೇಡ್ ಮಾಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಗಿಡ) ನೆಡುವುದರ ಮೂಲಕ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಉದ್ಘಾಟನೆ ಮಾಡಲಾಗಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪೌಷ್ಠಿಕ ಕೈತೋಟಗಳನ್ನು ನಿರ್ಮಿಸಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯವನ್ನು ನಾವು ಉತ್ತಮವಾಗಿರಿಸಿಕೊಳ್ಳಬಹುದು ಎಂದು ಹೇಳಿದರು.
ಜಿಲ್ಲಾ ನಿರೂಪಣಾಧಿಕಾರಿ ಶ್ರೀಮತಿ ರಾಧಾ ಜಿ ಮಣ್ಣೂರ ಇವರು ಮಾತನಾಡುತ್ತಾ ಮಕ್ಕಳ ಪೌಷ್ಠಿಕತೆ, ಗರ್ಭೀಣಿ ಬಾಣಂತಿಯರಲ್ಲಿನ ರಕ್ತಹೀನತೆ ಹಾಗೂ ಇಲಾಖೆಯ ವಿವಿಧ ಯೋಜನೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು
ಎಸ್. ಜಿ. ಪೂಜಾರ ಮಾತೃವಂದನಾ ಸಂಯೋಜಕರು 1 ನೇ ಗರ್ಭೀಣಿ ಹಾಗೂ ಎರಡನೇ ಮಗು ಹೆಣ್ಣುಮಗು ಹೊಂದಿರುವ ಬಾಣಂತಿಯರಿಗೆ ಕ್ರಮವಾಗಿ 5000 ಮತ್ತು 6000ಗಳ ಧನಸಹಾಯವನ್ನು ನೇರ ನಗದು ವರ್ಗಾವಣೆ ಮೂಲಕ ಆರ್ಥಿಕ ಸಹಾಯ ಇಲಾಖೆಯಿಂದ ಪಡೆದುಕೊಳ್ಳಬಹುದೆಂದು ಹೇಳಿದರು ಹಾಗೂ ಕು. ಸಂಗೀತಾ ಹೂಗಾರ ಪೋಷಣ ಜಿಲ್ಲಾ ಸಂಯೋಜಕರು ಇವರು ಮಕ್ಕಳ ಬೆಳವಣಿಗೆ ಮೇಲ್ವೀಚಾರಣೆ ಕುರಿತು ಮಾಹಿತಿ ನೀಡಿದರು ಹಾಗೂ ಕು. ಪವನ ಕಾಟೀಗರ ಪೋಷಣ ಜಿಲ್ಲಾ ಸಹಾಯಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಎಚ್.ಎಸ್ ಜೋಗೇರ, ಶ್ರೀಮತಿ ಮಂಜುಳಾ ಹಬೀಬ ವಲಯ ಮೇಲ್ವೀಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗರ್ಭೀಣಿಯರು, ತಾಯಂದಿರು, ಮಕ್ಕಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.
ಶ್ರೀಮತಿ ಮಂಜುಳಾ ಹಬೀಬ ವಲಯ ಮೇಲ್ವೀಚಾರಕಿಯರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮಂಜುಳಾ ಕಮತ್ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಂದಿಸಿದರು