ಪೋಷನ ಅಭಿಯಾನಕ್ಕೆ ಚಾಲನೆ

26GDG07
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾಡಳಿತ ವತಿಯಿಂದ ಇತ್ತೀಚೆಗೆ ನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ. ಮಾತನಾಡಿ ಪೌಷ್ಠಿಕ ಆಹಾರವನ್ನು ಮಕ್ಕಳು, ಗಭಿರ್ಣಿ, ಬಾಣಂತಿಯರು ಸರಿಯಾಗಿ ಸೇವಿಸಬೇಕು ಹಾಗೂ ಅದರ ಮಹತ್ವದ ಅರಿಯಬೇಕು. ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಇದರಿಂದ ರೋಗ ರುಜಿನೆಗಳನ್ನು ತಡೆಗಟ್ಟಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸರಿಯಾದ ಪೋಷಣೆ ಆರೋಗ್ಯಕರ ಜೀವನಕ್ಕೆ ಬುನಾದಿ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ನಿರೂಪಣಾಧಿಕಾರಿ ರಾಧಾ ಮಣ್ಣೂರ ಮಾತನಾಡಿ ಪೋಷಣ ಮಾಸಾಚರಣೆಯಲ್ಲಿ ಬೊಜ್ಜುತನ ನಿವಾರಣೆ, ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವುದು, ಪೋಷಣ ಭಿ ಪಢಾಯಿ ಭಿ, ಶಿಶು ಚಿಕ್ಕ ಮಕ್ಕಳ ಆಹಾರ ಅಭ್ಯಾಸಗಳು, ಪುರುಷರ ಸಹಬಾಗಿತ್ವದ ಕುರಿತಾದ ವಿವಿಧ ಮಾಹಿತಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರ ಹಾಗೂ ದೇವದಾಸಿಯರ ಮರುಸಮೀಕ್ಷೆ ಕುರಿತಾದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಪದ್ಮಾವತಿ ಜಿ ಮಕ್ಕಳಿಗೆ ಅನ್ನಪ್ರಾಶನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷಿಕೆ, ಮಕ್ಕಳಿಂದ ಹಣ್ಣುಗಳ ಆರೋಗ್ಯರ ಗುಣಗಳ ಕುರಿತಾದ ಚಟುವಟಿಕೆ, ಮಕ್ಕಳಿಂದ ಸಂಸತಿಕ ಚಟುವಟಿಕೆಗಳು. ಸೀಮಂತ ಕಾರ್ಯಕ್ರಮ ಹಾಗೂ ಅನ್ನ ಪ್ರಾಶನ ನಡೆಯಿತು.

ಶೈಲಜಾ ವಿನಾಯಕ ಮಾನ್ವಿ, ಶಿವರಾಜ ಎ. ಕೆ., ಎಚ್​. ಎಸ್​. ಜೋಗೇರ, ಸಂಗೀತಾ ಹೂಗಾರ, ಸುಜಾತಾ ಹಾವನೂರ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net