ಅಪ್ರಾಪ್ತ ವಾಹನ ಚಾಲಕರಿಗೆ ಪೊಲೀಸ್​ ಇಲಾಖೆ ಬಿಸಿ

09GDG2C
Published on

ವಿಜಯವಾಣಿ ಸುದ್ದಿಜಾಲ ಗದಗ

ಗದಗ&ಬೆಟಗೇರಿ ಅವಳಿ ನಗರದಲ್ಲಿ ಅಪ್ರಾಪ್ತ ಚಾಲಕರಿಗೆ ಜಿಲ್ಲಾ ಪೊಲೀಸ್​ ಇಲಾಖೆ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್​. ನೇಮಗೌಡ ಅವರ ಮಾರ್ಗದರ್ಶನದಲ್ಲಿ ನಗರದ ಶಹರ, ಗ್ರಾಮೀಣ ಹಾಗೂ ಬೆಟಗೇರಿ ಠಾಣೆ ಪೊಲೀಸರು ಹಾಗೂ ಟ್ರಾಫಿಕ್​ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಅಡ್ಡಾದಿಡ್ಡಿ ಓಡಿಸುವ, ಅಪ್ರಾಪ್ತರು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಹಾಗೂ ಟಂಟಂಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.

ಕಳೆದ ಶುಕ್ರವಾರ ತಡರಾತ್ರಿ ಹುಲಕೋಟಿ ಬಳಿ ಅಪ್ರಾಪ್ತರು ಚಾಲನೆ ಮಾಡುತ್ತಿದ್ದ ಕಾರೊಂದು ಅಪಘಾತ ಸಂಭವಿಸಿ ಇಬ್ಬರು ಅಪ್ರಾಪ್ತರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು. ಪೊಲೀಸ ಇಲಾಖೆಯ ವಿಶೇಷ ಕಾರ್ಯಾಚರಣೆಗೆ ಈ ಟನೆಯೇ ಮೂಲ ಕಾರಣ ಎಂದು ತಿಳಿದು ಬಂದಿದೆ. ವಿಶೇಷ ಕಾರ್ಯಾಚರಣೆ ಮೂಲಕ ಅಪ್ರಾಪ್ತ ಚಾಲಕರಿಗೆ ಹಾಗೂ ಅಪ್ರಾಪ್ತರಿಗೆ ಚಾಲನೆಗೆ ಅವಕಾಶ ಕೊಟ್ಟು ಹಿಂಬದಿ ಸೀಟಿನಲ್ಲಿ ಕುಳಿತ ಪೋಷಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಬಳ್ಳಂಬೆಳಗ್ಗೆ 6 ಗಂಟೆಗೆ ನಗರದ ವಿವಿಧ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್​ ಹಾಕುವ ಮೂಲಕ ಕಾರ್ಯಾಚರಣೆ ಆರಮಭಿಸಿದರು. ಬೆಟಗೇರಿ ಕುಷ್ಟಗಿ ಚಾಳ, ರೈಲ್ವೆ ಅಂಡರ ಬ್ರಿಡ್ಜ್​, ಮಹಾತ್ಮ ಗಾಂಧಿ ವೃತ್ತ, ರೋಟರಿ ಸರ್ಕಲ್​, ಭೂಮರಡ್ಡಿ ಸರ್ಕಲ್​, ಹಳೆ ಜಿಲ್ಲಾಧಿಕಾರಿ ಕಚೇರಿ ವೃತ್ತ, ಮುಳಗುಂದ ನಾಕಾ, ಟಿಪ್ಪು ವೃತ್ತ ಸೇರಿ ನಗರದ ವಿವಿಧೆಡೆ ನಗರ ಸಂಚಾರಿ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಪೊಲೀಸರ ಕಾರ್ಯಾಚರಣೆ ವಿಷಯ ಎಲ್ಲಡೆ ಹಬ್ಬತ್ತಿದ್ದಂತೆ ಅಪ್ರಾಪ್ತ ಚಾಲಕರು. ನಿಯಮ ಗಾಳಿಗೆ ತೂರಿ ಚಾಲನೆ ಮಾಡುವ ಟಂಟಂ ವಾಹನ ಚಾಲಕರು, ಡೆವಿಂಗ್​ ಲೈಸೆನ್ಸ್​ ಇಲ್ಲದೇ ಚಾಲನೆ ಮಾಡುತ್ತಿರುವರು ಪ್ರಮುಖ ರಸ್ತೆ ಹೊರತುಪಡಿಸಿ ಅನ್ಯ ಮಾರ್ಗಗಳನ್ನು ಅನುಸರಿಸಿ ಚಾಲನೆ ಮಾಡುತ್ತಿದ್ದರು. ಪೊಲೀಸ್​ ಕಾರ್ಯಾಚರಣೆಯಿಂದ ನಗರದಲ್ಲಿ ಭಾಗಶಃ ಅರ್ದದಷ್ಟು ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಇತ್ತು. ಅಪ್ರಾಪ್ತರು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್​. ನೇಮಗೌಡ, ಹೆಚ್ಚುವರಿ ಎಸ್​ಪಿ ಎಂ.ಬಿ. ಸಂಕದ ಸೇರಿದಂತೆ ಪೊಲೀಸ್​ ಇಲಾಖೆಯ ಎಲ್ಲ ಸಿಬ್ಬಂದಿಗಳ ಕಾರ್ಯಕಕ್ಕೆ ಪ್ರಭುದ್ಧ ನಾಗರಿಕರು ಶ್ಲಾನೆ ವ್ಯಕ್ತಪಡಿಸಿದರು.

ದೋಷಪೂರಿತ ನಂಬರ್​ ಪ್ಲೇಟ್​:

ಅವಳಿ ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದ್ವಿಚಕ್ರ ವಾಹನ, ಟಂಟಂ ಮತ್ತು ಆಟೋಗಳಲ್ಲಿ ದೋಷಪೂರಿತ ನಂಬರ್​ ಪ್ಲೇಟ್​ ಅಳವಡಿಸಿರುವುದು, ನಂಬರ್​ ಪ್ಲೇಟ್​ ಮರೆಮಾಚಿ ಚಾಲನೆ, ಅತಿ ವೇಗದ ಚಾಲನೆ ಮಾಡುತ್ತಿರುವವರ ವಿರುದ್ಧವೂ ದಂಡ ಹಾಕಿ ವಾಹನಗಳನ್ನು ವಶಕ್ಕೆ ಪಡೆಯಲಾಯಿತು. ಅವಳಿ ನಗರದಲ್ಲಿ ಸಂಚರಿಸುತ್ತಿದ್ದ ಡಿಎಲ್​, ಇನ್ಸೂರೆನ್ಸ್​, ಪಮಿರ್ಟ್​ ಇಲ್ಲದ ಹಾಗೂ ನೋಂದಣಿ ಇಲ್ಲದ ಆಟೋಗಳನ್ನು ಸೀಜ್​ ಮಾಡಲಾಯಿತು.

ಜಾಗೃತಿ ಕಾರ್ಯಕ್ರಮ:

ವಾಹನಗಳನ್ನು ಜಪ್ತಿ ಮಾಡಿದ ಸ್ಥಳದಲ್ಲೇ ಪೊಲೀಸರು ಚಾಲಕರಿಗೆ ಸಂಚಾರಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿದರು. ಆಟೋ ಚಾಲಕರು, ಮಾಲೀಕರು ವಾಹನಗಳನ್ನು ಸಾರಿಗೆ ಇಲಾಖೆ ನಿಯಮದಡಿ ಎಲ್ಲ ದಾಖಲಾತಿ ಹೊಂದಿರಬೇಕು. ಚಾಲನಾ ನಿಯಮ ಪಾಲಿಸಬೇಕು. ಇಲ್ಲವಾದಲ್ಲಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೇ, ನಗರದೊಳಗೆ ಅತಿ ವೇಗದ ಚಾಲನೆ, ನಂಬರ್​ ಪ್ಲೇಟ್​ ಮರೆಮಾಚಿ ಓಡಿಸುವುದು ಕಾನೂನುಬಾಹಿರ. ವಾಹನ ಚಾಲಕರು ಕಾನೂನಿನ ಪ್ರಕಾರವೇ ನಡೆದುಕೊಳ್ಳಬೇಕು. ಇಲ್ಲವಾದರೆ ಅಂತಹವರನ್ನು ಗುರುತಿಸಿ, ಕಠಿಣ ಶಿೆಗೆ ಒಳಪಡಿಸಲಾಗುವುದು ಎಂದು ವಾಹನ ಚಾಲಕರಿಗೆ ವಾಹನ ಚಾಲನಾ ನಿಯಮಗಳ ಕುರಿತು ಪೊಲೀಸರು ತಿಳುವಳಿಕೆ ನೀಡುತ್ತಿರುವುದು ಕಂಡು ಬಂದಿತು.

ಎಷ್ಟೇಷ್ಟು ವಾಹನ:

ಕಾರ್ಯಾಚರಣೆಯಲ್ಲಿ ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡಿದ 102 ದ್ವಿಚಕ್ರ ವಾಹನ ಹಾಗೂ 3 ಟಂಟಂ, ಅಪ್ರಾಪ್ತರು ಚಾಲನೆ ಮಾಡಿದ 16 ದ್ವಿಚಕ್ರ ವಾಹನ ಹಾಗೂ 1 ಟಂಟಂ, ದೋಷಪೂರಿತ ಸೈಲೆನ್ಸರ್​ ಹೊಂದಿದ್ದ 4 ದ್ವಿಚಕ್ರ ವಾಹನ ಸೇರಿ 122 ದ್ವಿಚಕ್ರ ವಾಹನ ಹಾಗೂ 4 ಟಂಟಂ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net