ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಪ್ರಾಪ್ತರ ಬೈಕ್​ ರೈಡಿಂಗ್​ ಬಿಸಿ,

ಗದಗ ನಗರದಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್​ಗಳನ್ನು ಸೀಜ್​ ಮಾಡಲಾಗಿದ್ದು, ಗದಗ ಎಸ್​ಪಿ ಬಿ.ಎಸ್​. ನೇಮಗೌಡ ಪರಿಶೀಲನೆ ನಡೆಸಿದರು. ಪಿಎಸ್​ಐ ಸವಿತಾ ಮುನ್ಯಾಳ, ಡಿಎಸ್​ಪಿ ಎಂ.ಬಿ. ಸಂಕದ, ಸಿಪಿಐ ಬಿ.ಜಿ. ಸುಬ್ಬಾಪೂರಮಠ, ವಿಕಾಸ ಲಮಾಣಿ ಇತರರು ಇದ್ದರು.
ಗದಗ ನಗರದಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್​ಗಳನ್ನು ಸೀಜ್​ ಮಾಡಲಾಗಿದ್ದು, ಗದಗ ಎಸ್​ಪಿ ಬಿ.ಎಸ್​. ನೇಮಗೌಡ ಪರಿಶೀಲನೆ ನಡೆಸಿದರು. ಪಿಎಸ್​ಐ ಸವಿತಾ ಮುನ್ಯಾಳ, ಡಿಎಸ್​ಪಿ ಎಂ.ಬಿ. ಸಂಕದ, ಸಿಪಿಐ ಬಿ.ಜಿ. ಸುಬ್ಬಾಪೂರಮಠ, ವಿಕಾಸ ಲಮಾಣಿ ಇತರರು ಇದ್ದರು.
Published on

ವಿಜಯವಾಣಿ ವಿಶೇಷ ಗದಗ
ಗದಗ ಬೆಟಗೇರಿ ಅವಳಿ ನಗರದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಬೈಕ್​ ರೈಡಿಂಗ್​ ನಿಂದ ಜನರು ಹೈರಾಣಾಗಿದ್ದು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೆಕ್ಕಲ್ಲ ಕಡಿವಾಣ ಹಾಕಲು ಮಂಗಳವಾರ ಮತ್ತು ಬುಧವರಾ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ವಿಶೇಷ ಕಾರ್ಯಾಚರಣೆಯಲ್ಲಿ ತೋಡಗಿರುವ ಜಿಲ್ಲಾ ಪೊಲೀಸ್​ ಇಲಾಖೆ ಮಕ್ಕಳಿಗೆ ಮತ್ತು ಬೈಕ್​ ಚಲಾಯಿಸಲು ಅನುಮತಿ ನಿಡುವ ಪಾಲಕರಿಗೂ ಬಿಸಿ ಮುಟ್ಟಿಸಿದ್ದಾರೆ.
ಪೊಲೀಸ್​ ಕಾರ್ಯಾಚರಣೆಯಲ್ಲಿ ಈ ವರೆಗೆ ಒಟ್ಟು 55 ಬೈಕ್​ಗಳನ್ನು ಸೀಜ್​ ಮಾಡಲಾಗಿದೆ. ಟ್ರಾಫಿಕ್​ ಪೊಲೀಸ್​ ಠಾಣೆಗೆ ಬೈಕ್​ಗಳನ್ನು ರವಾನೆ ಮಾಡಲಾಗಿದ್ದು, ಪಾಲಕರನ್ನು ಕರೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಡೆವಿಂಗ್​ ಲೈಸೆನ್ಸ್​ ಇಲ್ಲದೇ ಬೈಕ್​ ಚಲಾಯಿಸುತ್ತಿರುವ ಅಪ್ರಾಪ್ತರ ಪಾಲಕರಿಗೆ ದಂಡ ವಿಧಿಸಿ ಪ್ರಕರಣಗಳನ್ನು ಕೋರ್ಟ್​ಗೆ ವರ್ಗಾಯಿಸಲಾಗುತ್ತಿದೆ.

ಕರ್ಕಶ ಶಬ್ದಕ್ಕೂ ಕಡಿವಾಣ:
ದಾಳಿಯಲ್ಲಿ ಸಂದರ್ಭದಲ್ಲಿ ಅತ್ಯಂತ ಕರ್ಕಶವಾಗಿ ಶಬ್ದ ಮಾಡುವ ಸೈಲೆನ್ಸರ್​ಗಳನ್ನು ಬಳಕೆ ಮಾಡುತ್ತಿದ್ದ 37 ವಾಹನಗಳನ್ನು ಸೀಜ್​ ಮಾಡಲಾಗಿದೆ. ಕರ್ಕಶ ಶಬ್ದ ಹೊರಸೂಸುವ ಸೈಲೆನ್ಸರ್​ ಗಳನ್ನು ಅಳವಡಿಸಿಕೊಡುಇವ ಗ್ಯಾರೇಜ್​ಗಳಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಕರ್ಕಶ ಶಬ್ದ ಮಾಡುವ ಸೈಲೆನ್ಸರ್​ಗಳನ್ನು ಅಳವಡಿಕೆ ಮಾಡುತ್ತಿದ್ದ ಗ್ಯಾರೇಜ್​ ಮೇಲೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿ 8 ಸೈಲೆನ್ಸರ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ಮಕ್ಕಳ ಬೈಕ್​ ಹುಚ್ಚಾಟಕ್ಕೆ ತೆರೆ ಸಪೋರ್ಟ ಮಾಡುವ ತಂದೆ ತಾಯಿಗಳಿಗೆ ಮಂಗಳವಾರದ ಪೊಲೀಸರ ಕಾರ್ಯಾಚರಣೆ ಎಚ್ಚರಿಕೆಯ ಗಂಟೆಯಾಗಿದೆ.

ಮಳೆಯಲ್ಲೇ ಕಾರ್ಯಾಚರಣೆ:
ಜಿಲ್ಲೆಯಾದ್ಯಂತ ಕಳೆದೆರೆಡೂ ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಮಳೆ ನಡುವೆಯೂ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ಪೊಲೀಸ್​ ವಿಶೇಷ ಕಾರ್ಯಾಚರಣೆಗೆ ವಿವಿಧ 27 ಸ್ಥಳದಲ್ಲಿ ಸಿಬ್ಬಂದಿಗಳು ಸೇರಿದಂತೆ ವಿವಿಧ ಪೊಲೀಸ್​ ಠಾಣೆಯ 91 ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಬೆಳಗ್ಗೆ 8 ಗಂಟೆಯಿಂದಲೇ ಪೊಲಿಸರು ನಗರದಲ್ಲಿ ಕಾರ್ಯಾಚರಣೆಗೆ ಇಳಿದರು. ನಗರದ ಗಾಂಧಿ ಸರ್ಕಲ್​, ರೋಟರಿ ಸರ್ಕಲ್​, ಪುಟ್ಟಯ್ಯಜ್ಜ ಸರ್ಕಲ್​, ಹಳೆಯ ಡಿಸಿ ಆಫೀಸ್​ ಸರ್ಕಲ್​, ಮುಳಗುಂದ ನಾಕಾ, ಟಿಪ್ಪು ಸುಲ್ತಾನ ಸರ್ಕಲ್​, ಮುಖ್ಯ ಬಾಜಾರಗಳಲ್ಲಿ ಪೊಲೀಸ್​ ತಂಡ ಕಾರ್ಯಾಚರಣೆ ನಡೆಸಿತು. ನಗರದಲ್ಲಿ ಏಕಾಏಕಿ ಪೊಲೀಸ್​ ಸಿಬ್ಬಂದಿಗಳ ತಂಡಗಳನ್ನು ಕಂಡು ಜನರು ನಿಬ್ಬೆರಗಾಗಿದ್ದರು. ಏನಿದು ಕಾರ್ಯಾಚರಣೆ ಎಂದು ಉದ್ಘಾರ ತೆಗೆಯುತ್ತಿದ್ದರು. ವಿಶೇಷ ಕಾರ್ಯಾಚರಣೆ ಬಗ್ಗೆ ಪೊಲೀಸ್​ ಇಲಾಖೆ ಎಲ್ಲಿಯೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ.

ಕೋಟ್​:
ಅಪ್ರಾಪ್ತ ಮಕ್ಕಳ ಕೈಯಲ್ಲಿ ಬೈಕ್​ ನೀಡುವ ಬಗ್ಗೆ ಪಾಲಕರು ಎಚ್ಚರ ವಹಿಸಬೇಕು. ಬೇಕಾಬಿಟ್ಟಿ ಕರ್ಕಶ ಸೈಲೆನ್ಸರ್​ ಬಳಸಿದರೇ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅಪ್ರಾಪ್ತ ಮಕ್ಕಳು ಬೈಕ್​ ಬಳಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ಮಾಡಿ ವಾಹನಗಳನ್ನು ಸೀಜ್​ ಮಾಡಲಾಗಿದೆ. ಅಪ್ರಾಪ್ತರು ಬಳಸುವ ವಾಹನಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು, ಜಿಲ್ಲೆಯಾದ್ಯಂತ ಎಲ್ಲಾ ಕಡೆಗಳಲ್ಲಿ ಅಭಿಯಾನ ನಡೆಸಿ, ಆ ಮೇಲೆ ಎಲ್ಲಾ ಸೈಲೆನ್ಸರ್​ಗಳನ್ನು ನಾಶ ಪಡಿಸಲಾಗುವುದು.
- ಬಿ. ಎಸ್​. ನೇಮಗೌಡ. ಪೊಲೀಸ್​ ವರಿಷ್ಠಾಧಿಕಾರಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net