

ವಿಜಯವಾಣಿ ಸುದ್ದಿಜಾಲ ಗದಗ
ಬಡ್ಡಿ ದಂದೆಕೋರರು, ಮೈಕ್ರೋಫೈನಾನ್ಸ್ ಹಾವಳಿಗೆ ಕೆಂಗೆಟ್ಟ ಜನರ ರಕ್ಷಣೆಗೆ ಮುಂದಾಗಿರುವ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಅಕ್ರಮ ಲೇವಾದೇವಿ ವ್ಯವಹಾರ ನಡೆಸುತ್ತಿರುವರ ಮನೆ ಮೇಲೆ ದಾಳಿ ನಡೆಸುತ್ತಿದೆ. ಒಂದೊಂದೆ ಅಕ್ರಮ ದಂಧೆಕೋರರ ಮೇಲೆ ದಾಳಿ ನಡೆಸಿ ನೋಂದ ಜನರನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ. ಇದರ ಭಾಗವಾಗಿ ಮಂಗಳವಾರ ಬೆಟಗೇರಿಯ 17 ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದೆ. ದಾಳೆ ಸಂದರ್ಭದಲ್ಲಿ ಕಂತೆ ಕಂತೆ ಹಣ ಪತ್ತೆ ಆಗಿದ್ದು, ಖುದ್ದು ಪೊಲೀಸ್ ದಂಗಾಂಗಿ ಹೋಗಿದ್ದಾರೆ. ಆರೋಲಿತ ಯಲ್ಲಪ್ಪ ಮಿಸ್ಕಿನ್ ಮತ್ತು ಸಂಬಂಧಿತರಿಗೆ ಸಂಬಂಧಿಸಿ ಮನೆ, ಫೈನಾನ್ಸ್, ತೋಟದ ಮನೆ ಸೇರಿದಂತೆ 17 ಕ್ಕೂ ಅಧಿಕ ಕಡೆ ದಾಳಿ ನಡೆಸಿ ಹಣ ವಶಪಡಿಸಿಕೊಂಡಿದ್ದಾರೆ. 10 ಲಕ್ಷಕ್ಕೂ ಅಧಿಕ ಹಣ ಪತ್ತೆ ಆಗಿದ್ದರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ತನಿಖೆ ನಡೆಸಲು ಮುಂದಾಗಿದ್ದು, ಗದಗ ನಗರದಲ್ಲಿ ಬಹುದಿನಗಳ ನಂತರ ಬಹುದೊಡ್ಡ ಅಕ್ರಮ ಲೇವಾದೇವಿ ವ್ಯವಹಾರಕ್ಕೆ ಪೊಲೀಸರು ಇತೀಶ್ರೀ ಹೇಳಲು ಮುಂದಾಗಿದ್ದು ಗದಗ ನಗರದಲ್ಲಿ ಬಡ್ಡಿ ದಂಧೆಕೋರರಲ್ಲಿ ನಡುಕ ಹುಟ್ಟಿಸಿದ್ದಾರೆ. ಪೊಲೀಸ್ ದಾಳಿ ನಂತರ ಸುದ್ದಿಗೋಷ್ಟಿ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಂಗಳವಾರ ಮಾಹಿತಿ ನೀಡಿದರು.
ಸುದ್ದಿಗೋಷ್ಠಿ:
ಬಂಡಿದಂಧೆಕೋರರ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ನೀಡಿ ಮಾತನಾಡಿದ ಬಿ.ಎಸ್. ನೇಮಗೌಡ ಅವರು, ಅಶೋಕ ಗಣಾಚಾರಿ ಎಂಬುವದು ದೂರು ನೀಡಿದ್ದರು. 2016 ರಲ್ಲಿ ಆರೋಪಿತ ಯಲ್ಲಪ್ಪ ತೃಜುಸಾ ಮಿಸ್ಕಿನ್ ಅವರಿಂದ 1 ಕೋಟಿ ಹಣ ಸಾಲ ಪಡೆದಿದ್ದೆ. ಈ ವರೆಗೂ 1.40 ಕೋಟಿ ಹಣ ಮರುಪಾವತಿ ಮಾಡಿದ್ದೇನೆ. ಇನ್ನೂ ಹಲವು ಆಸ್ತಿಗಳನ್ನು ಅಡ ಇಟ್ಟಿದ್ದೇನೆ. ಆದರೂ ಮಿಸ್ಕಿನ್ ಅವರು ನನಗೆ ಇನ್ನೂ ಹಣಕ್ಕಾಗಿ ಪೀಡಿಸುತ್ತಿದ್ದಾಗಿ ದೂರು ನೀಡಿದ್ದರು. ದೂರು ಆದರಿಸಿ ಮಂಗಳವಾರ ಮಿಸ್ಕಿನ್ ಅವರಿಗೆ ಸಂಬಂಧಿಸಿದ ಹಲವಡೆ ದಾಳಿ ನಡೆಸಿದ್ದೇವೆ. ಇತ್ತೀಚೆಗೆ ದಾಳಿ ನಡೆಸುತ್ತಿದ್ದನ್ನು ಗಮನಿಸಿ ಮಿಸ್ಕಿನ್ ಅವರು ಸಂಬಂಧಿತರ ಮನೆಗೆ ಹಣ ಸಾಗಿಸಿದ್ದು ದಾಳಿ ವೇಳೆ ಕಂಡು ಬಂದಿದೆ. ದಾಳೆ ವೇಳೆ ಖಾಲಿ ಬಾಂಡ್, ಬರೆದ ಬಾಂಡ್ ಗಳು ಚೆಕ್, ನಗದು ಹಣ, ಚಿನ್ನಾಭರಣ ಸಿಕ್ಕಿದೆ. ಒಂದು ಸೂಟಕೇಸ್ ಬಾಂಡ್ ಗಳು ಸಿಕ್ಕಿವೆ.. ಬಂಗಾರದ ಒಡೆವೆಗಳು ಸಿಕ್ಕಿವೆ. 12 ತಂಡಗಳು, 50 ಜನ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದರು. ಸಿಪಿಐ ದೀರಜ್ ಶಿಂದೆ, ಸಂಗಮೇಶ ಶಿವಯೋಗಿ, ಡಿವೈಎಸ್ ಪಿ ಇನಾಮದಾರ ಇತರರು ನೇತೃತ್ವ ವಹಿಸಿದ್ದರು. ಯಲ್ಲಪ್ಪ ತೇಜುಸಾ ಮಿಸ್ಕಿನ್, ವಿಕಾಶ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ, ಮೋಹನ ಎಂಬುವರ ಮೇಲೆ ಎಫೈಆರ್ ದಾಖಲಿಸಲಾಗಿದೆ ಎಂದು ಬಿ.ಎಸ್. ನೇಮಗೌಡ ತಿಳಿಸಿದರು.
ಬಾಕ್ಸ್:
ಬಡ್ಡಿದಂಧೆಕೋರ ಮನೆ ಮೇಲೆ ದಾಳಿ ನಡೆಸಿದ ವೇಳೆ ನಗರದ ಬಾರ್ ಮಾಲೀಕರೊಬ್ಬರು ದಾಳಿ ನಡೆಸಿದ ಸ್ಥಳಕ್ಕೆ ಧಾವಿಸಿದ್ದು ಅನುಮಾನಕ್ಕೆ ಕಾರಣವಾಯಿತು. ಬಡ್ಡಿದಂಧೆ ವೇಳೆ ಅಕ್ರಮ ಲಿಕ್ಕರ್ ಮಾರಾಟದ ಹಣ ಪತ್ತೆ ಆಗಿದೆ ಎಂಬ ಚರ್ಚೆಯು ಮಂಗಳವಾರ ಬೆಟಗೇರಿಯಲ್ಲಿ ಚರ್ಚೆ ಆಯಿತು.
ಕೋಟ್:
ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅವರಿಗೆ ಮಾಹಿತಿ ನೀಡಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣದ ಮೂಲದ ಕುರಿತು ತನಿಖೆ ನಡೆಸಲಿದ್ದಾರೆ.
- ಬಿ.ಎಸ್. ನೇಮಗೌಡ, ಪೊಲೀಸ್ ವರಿಷ್ಠಾಧಿಕಾರಿ