ಮಾದಕ ದ್ರವ್ಯದ ವಿರೋಧಿ ದಿನಾಚರಣೆ

23GDG07
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾ ಪೊಲೀಸ ಇಲಾಖೆಯಿಂದ ಬೆಟಗೇರಿ ಬಸ್​ ನಿಲ್ದಾಣದಲ್ಲಿ ಸೋಮವಾರ ಮಾದಕ ದ್ರವ್ಯದ ವಿರೋಧಿ ದಿನಾಚರಣೆ ನಿಮಿತ್ಯ ಬೈಕ್​ ರ್ಯಾಲಿಗೆ ಚಾಲನೆ ನೀಡಲಾಯಿತು.

ಬೈಕ್​ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಬೆಟಗೇರಿ ವೃತ್ತ ಸಿಪಿಐ ಧೀರಜ್​ ಶಿಂಧೆ, ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಒಂದು ಅಪರಾಧವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಸಮಗ್ರ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಂರ್ಪೂಣ ಒಂದು ಪೀಳಿಗೆಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಯುವಕರ ದೈಹಿಕ, ಮಾನಸಿಕ, ನೈತಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಇದರಿಂದ ಉಂಟಾಗುವ ಹಾನಿ ಅಪಾರ, ಮಾದಕ ದ್ರವ್ಯಗಳ ದುರ್ವ್ಯಸನವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಹೋರಾಡಲು ಪೊಲೀಸ್​ ಅಧಿಕಾರಿಗಳು ದಂಡನಾತ್ಮಕ ಕ್ರಮಗಳು ಮತ್ತು ಜನರಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಅರಿವು ಮೂಡಿಸುವಂತಹ ಪರಿಣಾಮಕಾರಿ ತಂತ್ರಗಳನ್ನು ರೂಪಿಸಬೇಕು. ಪ್ರತಿವರ್ಷ ಜೂ. 26 ರಂದು ಅಂತರರಾಷ್ಟ್ರೀಯ ಮಾದಕ ದ್ರವ್ಯ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷವೂ ಸಹ ಎಲ್ಲಾ ಟಕಗಳ ಅಧಿಕಾರಿಗಳು ಅರ್ಥರ್ಪೂಣ ಮತ್ತು ಪರಿಣಾಮಕಾರಿಯಾಗಿ ಆಚರಿಸುವ ಮೂಲಕ ಶಿಣ ಸಂಸ್ಥೆ, ಸಂ ಸಂಸ್ಥೆಗಳು, ಯುವಕರ ಕ್ಲಬ್​, ಕ್ರೀಡಾಪಟುಗಳು, ಧಾಮಿರ್ಕ ಮತ್ತು ಆಧ್ಯಾತ್ಮಕ ಚಿಂತಕರು ಈ ಬಗ್ಗೆ ಜಾಗತಿ ಮೂಡಿಸಬೇಕು ಎಂದು ಕರೆ ನೀಡಿದರು.

ಶಿಣ ಸಂಸ್ಥೆಗಳಲ್ಲಿ ವಿದ್ಯಾಥಿರ್ಗಳಿಗೆ ಜೀವನದಲ್ಲಿ ಆರೋಗ್ಯಕರ ಆಯ್ಕೆಗಳನ್ನು ಮಾಡುವಂತೆ ಮತ್ತು ಮಾದಕ ದ್ರವ್ಯಗಳಿಂದ ದೂರವಿರುವಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವ ಅಗತ್ಯತೆ ಇದೆ. ಯುವಕರ ಕ್ಲಬ್​ ಮತ್ತು ಸಂಗಳಲ್ಲಿ ನಾಕೋರ್ಟಿಕ್​ ಪದಾರ್ಥಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಕ್ರೀಡಾಪಟುಗಳು, ಚಲನಚಿತ್ರ ನಟರಂತಹ ರೋಲ್​ ಮಾಡೆಲ್​ಗಳನ್ನು ಹಾನಿಕಾರಕ ಸಹವತಿರ್ಗಳ ಗುಂಪುಗಳನ್ನು ತಪ್ಪಿಸುವಂತೆ ಪ್ರೇರೇಪಿಸಲು ಸೇರಿಸಿಕೊಳ್ಳಬೇಕು ಎಂದ ಅವರು, ಸಮುದಾಯದ ಧಾಮಿರ್ಕ ಮತ್ತು ಆಧ್ಯಾತ್ಮಿಕ ನಾಯಕರು ಜನರ ನಡವಳಿಕೆಯನ್ನು ಸಕಾರಾತ್ಮಕವಾಗಿ ರೂಪಿಸಲು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಾಯ ಮಾಡಬೇಕು ಎಂದು ತಿಳಿಸಿದರು.

ಬೈಕ್​ ರ್ಯಾಲಿಯು ಬೆಟಿಗೇರಿ ಬಸ್​ ನಿಲ್ದಾಣದಿಂದ ಪ್ರಾರಂಭಿಸಿ ತೆಂಗಿನಕಾಯಿ ಬಜಾರ್​ ಕುರಹಟ್ಟಿಪೇಟೆ ಮಾರ್ಗವಾಗಿ ಹಾತಲಗೇರಿ ನಾಕಾ, ಕೆ.ಸಿ. ರಾಣಿ ರಸ್ತೆ, ಗಾಂಧಿ ಸರ್ಕಲ್​ ಮೂಲಕ ಮುನ್ಸಿಪಲ್​ ಮೈದಾನದಲ್ಲಿ ಬಂದು ಮುಕ್ತಾಯಗೊಂಡಿತು.

ಬೈಕ್​ ರ್ಯಾಲಿಯಲ್ಲಿ ಬೆಟಿಗೇರಿ ಬಡಾವಣೆ ರಾಜೀವಗಾಂಧಿ ನಗರ ಪೋಲಿಸ ಠಾಣೆಯ ಪಿಎಸ್​ಐ ಮಾರುತಿ ಜೋಗದಂಡ್ಕರ, ಬೆಟಗೇರಿ ಬಡಾವಣೆ ಪೊಲೀಸ್​ ಠಾಣೆ ಪಿಎಸ್​ಐ ಲಕ್ಷ$್ಮಪ್ಪ ಆರಿ, ಪಿಎಸ್​ಐ ಸೇರಿದಂತೆ ಬೆಟಿಗೇರಿ ಬಡಾವಣೆಯ ಪೊಲೀಸ್​ ಠಾಣೆ ಹಾಗೂ ಬೆಟಿಗೇರಿ ವೃತ್ತದ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net