

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯಲ್ಲಿ Feb .2023ರ ರಿಂದ ಈ ವರೆಗೆ 1.37 ಕೋಟಿ ಮೌಲ್ಯದ 883 ಮೊಬೈಲ್ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಅದರ ಭಾಗವಾಗಿ ಕಳೆದ ಒಂದು ತಿಂಗಳಿಂದ 25 ಲಕ್ಷ ಮೌಲ್ಯದ 158 ಮೊಬೈಲ್ಗಳನ್ನು ಪತ್ತೆ ಮಾಡಲಾಗಿದ್ದು, ಇಂದು ಮಾಲೀಕರಿಗೆ ಮೊಬೈಲ್ ಹಸ್ತಾಂತರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.
ಗದಗ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಿಇಐಆರ್/ಮೋಬಿೈ ಪೋರ್ಟಲ್ನಲ್ಲಿ ಮೊಬೈಲ್ ಕಳೆದುಕೊಂಡವರಿಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಇದವರೆಗೂ ಗದಗ ಜಿಲ್ಲೆಯಲ್ಲಿ 2992 ಜನ ದೂರುಗಳನ್ನು ದಾಖಲಿಸಿದ್ದರು. ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸೇರಿದಂತೆ ಒಟ್ಟು 1.37 ಕೋಟಿ ಬೆಲೆಬಾಳುವ 883 ಮೊಬೈಲ್ ಗಳನ್ನು ಪತ್ತೆ ಮಾಡಿ ಮರಳಿ ಮಾಲೀಕರಿಗೆ ವಿತರಿಸಲಾಗಿದೆ. ಇನ್ನೂ ಹಲವು ಮೊಬೈಲ್ ಪ್ರಕರಣ ಬಾಕಿ ಇದ್ದು, ಪತ್ತೆ ಹಚ್ಚಲಾಗುವುದು ಎಂದು ಬಿ.ಎಸ್. ನೇಮಗೌಡ ಹೇಳಿದರು.
ಮನೆಗಳ್ಳತನ ಪ್ರಕರಣ: ನಗರದಲ್ಲಿ ಮೆ. 23 ರಂದು ನಡೆದಿದ್ದ ಶೇಖರಗೌಡ ಪಾಟೀಲ ಎನ್ನುವವರ ಮನೆಗಳ್ಳತನ ಪ್ರಕರಣವನ್ನು ಪತ್ತೆ ಮಾಡಲಾಗಿದೆ. 3 ಜನ ಅಂತರ ರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ವೈಭವ ನಗರದ ನಿವಾಸಿಗಳಾದ 34 ವರ್ಷದ ಖಾಜಾಶೇಖ ರಫೀಕ ಸೈಯದ, ಅರಮಾನ್ ಇರ್ಫಾನ್ ಶೇಖ (19), ಇನ್ನೊರ್ವ ಆರೋಪಿ ಮೆಹಬೂಬ ಇಬ್ರಾಹಿಂ ಮುಲ್ಲಾ (18) ಬಂಧಿತ ಆರೋಪಿಗಳು. ಬೆಳಗಾವಿ, ಹೊಸಪೇಟೆ, ಬಳ್ಳಾರಿ, ಗುಂತಕಲ್ಲನಲ್ಲಿಯೂ ವಿವಿಧ ರೀತಿಯ ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವುದು ತನಿಖೆಯ ವೇಳೆಯಲ್ಲಿ ಪತ್ತೆಯಾಗಿದೆ. ಮೊದಲನೇ ಆರೋಪಿ ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಬಂಧಿತನಾಗಿದ್ದ. ಬಂಧಿತ ಆರೋಪಿಗಳಿಂದ ಕಳ್ಳತನವಾಗಿದ್ದ 20 ಲಕ್ಷ ಮೌಲ್ಯದ 401 ಗ್ರಾಂ ಬಂಗಾರ, 2.80 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ, ವಿವಿಧ ಅಪರಾಧ ಕೃತ್ಯಗಳಿಗೆ ಬಳಸುತ್ತಿದ್ದ 1.50 ಲಕ್ಷ ಮೌಲ್ಯದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ ತನಿಖೆ ನಡೆಸಿ ಗದಗ ಶಹರ ಠಾಣೆಯ ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡಲಾಗಿದೆ ಎಂದರು.
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
ಪತ್ನಿಯ ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲವು ಆರೋಪಿಗೆ ಐಪಿಸಿ ಕಲಂ 498 (ಎ) ಅಡಿಯಲ್ಲಿ 1 ಸಾವಿರ ದಂಡ ಹಾಗೂ 3 ವರ್ಷ ಶಿಕ್ಷೆ, ಐಪಿಸಿ 302 ಅಡಿಯಲ್ಲಿ 5 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಲೆ$್ಮಶ್ವರ ತಾಲೂಕಿನ ಬಸಾಪೂರ ಗ್ರಾಮದ ನಿವಾಸಿ ಈಶ್ವರಪ್ಪ ಮಹಾಲಿಂಗಪ್ಪ ಪೂಜಾರ (44) ಎಂಬುವನು ತನ್ನ ಹೆಂಡತಿಯಾದ ಶಂಕ್ರವ್ವ ಈಶ್ವರಪ್ಪ ಪೂಜಾರ (28) ಅವಳೊಂದಿಗೆ ಪದೇ ಪದೆ ಶೀಲ ಶಂಕಿಸಿ ತಂಟೆ ಮಾಡುತ್ತಲೇ ಬಂದಿದ್ದ. ಇದರಿಂದ ಬೇಸತ್ತು ಪತ್ನಿ ಗದಗ ತಾಲೂಕಿನ ಮದಗಾನೂರು ಗ್ರಾಮಕ್ಕೆ ಬಂದಿದ್ದಳು. ಇದರಿಂದ ಮತ್ತಷ್ಟು ರೋಸಿ ಹೋಗಿದ್ದ ಈಶ್ವರಪ್ಪ 2019ರಲ್ಲಿ ಕೊಡಲಿಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದನು. ಸುಧೀರ್ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಸವಿತಾ ಶಿಗ್ಲಿ ವಾದ ಮಂಡಿಸಿದ್ದರು ಎಂದು ಬಿ.ಎಸ್. ನೇಮಗೌಡ ತಿಳಿಸಿದರು.
ಕೋಟ್:
ಮೊಬೈಲ್ ಕಳೆದುಕೊಂಡವರು ತಡಮಾಡದೆ ಮೊಬಿೈ ಆಪ್ ಮೂಲಕ ದೂರು ಸಲ್ಲಿಸಬಹುದು. ಮೊಬೈಲ್ ಪತ್ತೆಗಾಗಿ ಪೊಲೀಸ್ ಇಲಅಖೆಯ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ.
-ಬಿ.ಎಸ್. ನೇಮಗೌಡ, ಎಸ್ಪಿ
ಗದಗ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಪತ್ತೆ ಮಾಡಿದ ಮೊಬೈಲ್ಗಳನ್ನು ಗುರುವಾರ ಮರಳಿ ಮಾಲೀಕರಿಗೆ ಪೊಲೀಸ್ ಇಲಾಖೆ ಹಸ್ತಾಂತರಿಸಿತು. ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಕದ, ಧೀರಜ್ ಶಿಂದೆ ಇತರರು ಇದ್ದರು.