

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರ ಬಂಗಾರದ ಬೇಟೆಯಾಡಿದೆ.
ಜಿಲ್ಲೆಯ ವಿವಿಧ ಕಳ್ಳತನ ಪ್ರಕರಣ ಭೇದಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಗಳನ್ನು ಬೇಟೆ ಆಡುವುದರ ಜತೆಗೆ 53 ಲಕ್ಷ ಮೌಲ್ಯದ ಬಂಗಾರದ ಆಭರಣ ಮತ್ತು 6 ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದೆ.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಎಸ್ಪಿ ಬಿ.ಎಸ್ ನೇಮಗೌಡ ಅವರು, ಜಿಲ್ಲೆಯಲ್ಲಿ ಫೆಬ್ರುವರಿ ತಿಂಗಳಲ್ಲಿ ಹೆಚ್ಚು ಕಳ್ಳತನ ಪ್ರಕರಣ ಜರುಗಿದ್ದವು. ಈ ಪ್ರಕರಣಗಳನ್ನು ಭೇದಿಸುವುವುದನ್ನು ಇಲಾಖೆ ಸವಾಲಾಗಿ ಸ್ವೀಕರಿಸಿತ್ತು. ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮುತುವಜಿರ್ ವಹಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಅವರಿಂದ ಲಾಂತರ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಯಮದಂತೆ ಆರಭರಣಗಳನ್ನು ಸ್ವತ್ತಿನ ಮಾಲೀಕರಿಗೆ ವಿತರಿಸಲಾಗುವುದು. ಇತರೆ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಬಂಧಿತ ಆರೋಪಿತರ ಮೇಲೆ ಹತ್ತಾರು ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆ ಜಾಮೀನು ನೀಡುವ ಪ್ರಕ್ರಿಯೆಯಲ್ಲಿ ಗೊಂದಲ ಏರ್ಪಡಂತೆ ಮುಂದಿನ ಪ್ರಕ್ರಿಯೆ ಜರುಗಿಸಲಾಗುವುದು. ಪ್ರಕರಣ ಪತ್ತೆ ಹಚ್ಚುವಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡುವುದಾಗಿ ಬಿ.ಎಸ್. ನೇಮಗೌಡ ತಿಳಿಸಿದರು.
ಗದಗ ವಿಭಾಗ:
ಗದಗ ವಿಭಾಗಕ್ಕೆ ಸಂಬಂಧಿಸಿದಂತೆ ಗದಗ ಗ್ರಾಮೀಣದಲ್ಲಿ 6 ಪ್ರಕರಣ, ಬೆಟಗೇರಿ ವಿಭಾಗಕ್ಕೆ ಸಂಬಂಧಿಸಿದಂತೆ 3 ಹಾಗೂ ಶಹರ ಠಾಣೆಯಲ್ಲಿ ದಾಖಲಾದ 1 ಪ್ರಕರಣ ಸೇರಿ ಒಟ್ಟು 10 ಪ್ರಕರಣದಲ್ಲಿ ಮೂರು ಜನ ಆರೋಪಿತರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 31 ಲಕ್ಷ ರೂ. ಮೌಲ್ಯದ 650 ಗ್ರಾಂ ಚಿನ್ನ, 4 ಲಕ್ಷ ರೂ. ಮೌಲ್ಯದ 5000 ಸಾವಿರ ಗ್ರಾಂ ಬೆಳ್ಳಿ ಆಭರಣಗಳ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನರಗುಂದ ವಿಭಾಗ:
ಗಜೇಂದ್ರಗಡ ಠಾಣೆಯ 1 ಪ್ರಕರಣ, ನರೇಗಲ್ ವ್ಯಾಪ್ತಿಯಲ್ಲಿ 2, ಮುಂಡರಗಿ ಠಾಣೆಯಲ್ಲಿ 4 ಹಾಗೂ ನರಗುಂದ ಠಾಣೆಯಲ್ಲಿ ದಾಖಲಾದ 1 ಪ್ರಕರಣ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡ ಠಾಣೆಯಲ್ಲಿ ದಾಖಲಾ 1 ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಪ್ರಕರಣಗಳಿಂದ 18.75 ಲಕ್ಷ ಮೌಲ್ಯದ 336 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಬಂಗಾರದ ಮಂಗಳ ಸೂತ್ರಮ ಬಂಗಾರದ ಹ್ಯಾಂಗಿಂಗ್, ನಕ್ಲೆಸ್ಗಳು ಇದರಲ್ಲಿ ಒಳಗೊಂಡಿವೆ ಎಂದು ಬಿ.ಎಸ್. ನೇಮಗೌಡ ತಿಳಿಸಿದರು.
ಆರೋಪಿತ ಹಿನ್ನೆಲೆ:
ಗದಗ ವಿಭಾಕ್ಕೆ ಸಂಬಂಧಿಸಿದಂತೆ 3 ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಅಂಬೇಡ್ಕರ ನಿವಾಸಿ ಅಮರ್ ಚವ್ಹಾಣ(36), ಬಳ್ಳಾರಿ ಜಿಲ್ಲೆ ಕಂಪ್ಲಿಯ ರಾಮು ಶಿಕಾರಿ(30) ಹಾಗೂ ಕಂಪ್ಲಿಯ ರಾಜು ವಡ್ಡರ(320 ಬಂಧಿತ ಆರೋಪಿಗಳು. ಕಳ್ಳತನ ಮಾಡಿದ ಸ್ವತ್ತುಗಳನ್ನು ಪೈನಾನ್ಸಗಳಲ್ಲಿ ಇಟ್ಟು ಸಾಲ ಪಡೆದಿದ್ದಾರೆ. ಕೆಲವರಿಗೆ ಮಾರಾಟ ಮಾಡಲಾಗಿದೆ. ಕಳ್ಳತನಕ್ಕೆ ಬೆಂಬಲಿಸಿದವರಿಗೆ ಕದ್ದ ವಸ್ತುವಿನಲ್ಲಿ ಪಾಲನ್ನು ನೀಡಲಾಗಿದೆ. ಎೈಆರ್ ಪ್ರತಿ ವಿತರಿಸಿ ನಿಯಮಾನುಸಾರ ಇನ್ನೂಳಿದ ಆಭರಣಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ನರಗುಂಧ ವಿಭಾಗದಲ್ಲಿ ಕಳ್ಳತನ ಮಾಡಿದ 3 ಆರೋಪಿಗಳನ್ನು ಹಾಗೂ ಕಳ್ಳತನದ ವಸ್ತುಗಳನ್ನು ಸ್ವೀಕರಿದ 3 ಆರೋಪಿಗಳನ್ನು ಬಂಧಿಸಿದಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಏರೂರು ಗ್ರಾಮದ ಹನುಮಂತಪ್ಪ ಶೇಖರ್ ಸಿಂಗ್, ಗಂಗಾವತಿಯ ಶಂಕರ್ ವಾಲ್ಮಿಕಿ, ಸಿಂಧನೂರು ತಾಲೂಕಿನ ತುರುವಿನ ಹಾಳ ಗ್ರಾಮದ ಜಿಲಾನಿ ರಾಜೇಸಾಬ್ ಕಳ್ಳತನ ಮಾಡಿದ ಆರೋಪಿಗಳು. ಸಿಂಧೂನೂರು ತಾಳೂಕಿನ ಮಹಮ್ಮದ ಹುಸೇನ್ ಸುಬಾನಸಾಬ, ಅಬ್ದುಲ್ ರೆಹಮಾನ ಅಬ್ದುಲ್ ಖಾದರ್ ಮತ್ತು ದಾವಲಸಾಬ ಎಂಬುವರು ಕಳುವಿನ ವಸ್ತುಗಳನ್ನು ಸ್ವೀಕರಿಸಿದವರಾಗಿದ್ದಾರೆ. ಇವರಿಂದ 2 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿ.ಎಸ್. ನೇಮಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಎಸ್.ಎಸ್. ಬಿಳಗಿ, ಎಲ್.ಕೆ. ಜೂಲಕಟ್ಟಿ, ಶಿವಾನಂದ ಬನ್ನಿಕೊಪ್ಪ, ಜೆ.ಎಚ್. ಇನಾಂಧಾರ, ಹಲವರು ಇದ್ದರು.