

ವಿಜಯವಾಣಿ ಸುದ್ದಿಜಾಲ, ಗದಗ
ಗ್ರಾಪಂ ಪಿಡಿಓ, ಕಾರ್ಯದಶಿರ್, ಡಾಟಾ ಎಂಟ್ರಿ ಆಪರೇಟರ್ ಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅ.4 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿಧಿರ್ಷ್ಟಾವಧಿ ಧರಣಿ ನಡೆಸಲಿದ್ದೇವೆ ಎಂದು ಗ್ರಾಪಂ ಪಿಡಿಓ ಜಿಲ್ಲಾ ಸಂದ ಅಧ್ಯಕ್ಷ ಕುಮಾರ ಪೂಜಾರ ಹೇಳಿದರು.
ನಗರದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಡ್ತಿ, ಗ್ರಾಪಂಗಳ ಗ್ರೇಡ್ಗಳನ್ನು ಹೆಚ್ಚಿಸುವುದು, ಬಡ್ತಿಯಲ್ಲಿನ ಸಮಸ್ಯೆ ನಿವಾರಣೆ, ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದೇವೆ. ಈ ವೇಳೆ ಗ್ರಾಪಂಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಇತರೆ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಹೇಳಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದೆರ್ಜೆಗೆ ಹೆಚ್ಚಿಸುವಂತೆ ಹಲವು ವರ್ಷದ ಬೇಡಿಕೆ ಇದ್ದರೂ ಅದನ್ನು ಪರಿಗಣಿಸದೇ ಪ್ರಸ್ತುತ ಇರುವ 6021 ಹುದ್ದೆಗಳಲ್ಲಿಯೇ 1500 ಹುದ್ದೆಗಳನ್ನು ಕಡಿಮೆ ಮಾಡಿ ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಯಮ ಬಾಹಿರವಾಗಿ ಹುದ್ದೆ ಸೃಷ್ಟಿಸಲಾಗಿದೆ.ಗೆಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೆ ಏರಿಸಬೇಕಾದ ಮೂಲ ಆಶಯವನ್ನು ಅರಿಯದ ಇಲಾಖೆ ಇಂತಹ ಎಡವಟ್ಟುಗಳನ್ನು ಮಾಡಿ ಪಿಡಿಓಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ವರ್ಗಾವಣೆಗೆ ನಡೆಸುತ್ತಿರುವ ಕೌನ್ಸಿಲಿಂಗ್ ಪದ್ಧತಿಯಲ್ಲೂ ಹಲವು ಲೋಪದೋಷಗಳಿವೆ. ಇಲಾಖೆಯ ಶೋಷಣೆಗಳಿಂದ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 21 ಪಿಡಿಓಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕೌಟುಂಬಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಸಾಮೂಹಿಕ ರಾಜೀನಾಮೆಗೆ ಪಿಡಿಓಗಳು ತಯಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಸೋಮರೆಡ್ಡಿ ನಡವೂರು ಮಾತನಾಡಿ, ಸರ್ಕಾರಿಂದ ಗ್ರಾಪಂಗಳಿಗೆ ಸೂಕ್ತ ಸಹಕಾರ ಸಿಗುತ್ತಿಲ್ಲ. ಪಿಡಿಓಗಳಿಗೆ ಅನಾನುಕೂಲತೆ ಸೃಷ್ಟಿಸುತ್ತಿರುವುದರಿಂದ ಸದ್ಯರಿಗೂ ಕಾರ್ಯ ನಿರ್ವಹಿಸಲು ತೋಂದರೆ ಆಗುತ್ತಿದೆ. ಹಾಗಾಗಿ ಪಿಡಿಓಗಳ ರಾಜ್ಯ ಮಟ್ಟದ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದರು.
ಎಸ್ಡಿಎಂಸಿ ಸಂದ ರಾಜ್ಯಾಧ್ಯಕ್ಷ ಮಾಹಂತೇಶ ಕೋತ, ಅಶ್ವಿನಿ ಕುರಡಗಿ, ಮಹಾಂತೇಶ ತಳವಾರ, ಸವಿತಾ ಸೋಮಣ್ಣವರ, ಶೀವಲೀಲಾ ಗೋಳಪ್ಪನ್ನವರ, ಮಾಲತೇಶ ಮೇವುಂಡಿ, ಸಂತೋಷ ಹೂಗಾರ, ಮಂಜುನಾಥ ಗಣಿ ಇತರರು ಇದ್ದರು.
ಬೇಡಿಕೆಗಳೇನು?