ಮಂತ್ರಗಳು ನಮ್ಮನ್ನು ಮಂತ್ರಮುಗ್ಧಗೊಳಿಸುವ ಹಾಗೂ ಆಪತ್ತಿನಿಂದ ರಕ್ಷಿಸುವ ದಿವ್ಯ ಔಷಧಿಗಳಾಗಿವೆ, ಶಕ್ತಿಯುತವಾದ ಬೀಜಾಕ್ಷರಗಳಿಂದ ಕೂಡಿರುವ ಮಂತ್ರಗಳನ್ನು ಶ್ರದ್ಧೆಯಿಂದ ಪೂರ್ಣ ನಂಬಿಕೆಯಿದ ಪಠಣೆ ಮಾಡಿದರೆ ಅವುಗಳು ನಮ್ಮನ್ನು ಕಾಯುವುದು ನಿಶ್ಚಿತ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಮರಣ ಎಂಬುದನ್ನು ಅಲ್ಲಗಳೆದಿದ್ದು, ಸಾವು ಎಂದರೆ
ಆತ್ಮವು ಶಿಥಿಲವಾಗಿರುವ ದೇಹವನ್ನು ತೊರೆದು ಮತ್ತೊಂದು ದೇಹ ಸೇರುವ ಘಟ್ಟ ಎಂದೇ ವ್ಯಾಖ್ಯಾನ ಮಾಡಲಾಗಿದೆ. ಜೀವಿತಾವಧಿಯಲ್ಲಿ ನಾವು ನಮ್ಮ ಕಾರ್ಯಗಳಿಗೆ ಸಾಧನೆ ಎಂದು ಬಣ್ಣಿಸುತ್ತೇವೆ ಆದರೆ ನಮ್ಮ ಜೀವನ ಎಷ್ಟು ನಶ್ವರವೋ ಸಾವು ಕೂಡ ಅಷ್ಟೇ ನಶ್ವರ ಎಂದರು.
ಡಾ.ಜಿ.ಬಿ ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ.ಎಸ್.ಡಿ ಯರಿಗೇರಿ, ಡಾ.ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಶ್ರೀಮತಿ ಬಿ.ವಿ ಹಿರೇಮಠ, ಡಾ.ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.