ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ

17GDG03
  ಗದಗ ನಗರದ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಕಚೇರಿಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಭೆಯನ್ನು ಮಂಜುನಾಥ ಚಂದಪ್ಪನವರ ಉದ್ಘಾಟಿಸಿದರು. ಜೀತೇಂದ್ರಕುಮಾರ ಬನ್ಸಾಲಿ, ನಂದಿನಿ ಚಂದಪ್ಪನವರ, ಸ್ವಿಟಿ ಬನ್ಸಾಲಿ, ಲಿಂಗರಾಜ ಎಂ ಸೊರಟೂರು, ಭರತ ಕಂಬಂಮ, ಸಂತೋಷ ಲಕ್ಕುಂಡಿ, ಸುರೇಶ ಎಸ್. ಎಚ್., ಸವಿತಾ ಎಸ್, ಎಚ್., ಆನಂದ ಮಾನ್ವಿ ಇತರರು ಇದ್ದರು.
Published on
ಗದಗ:
ನಗರದ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಸಂಸ್ಥೆಯ 10ನೇ ವರ್ಷದ ಸದಸ್ಯರ ವಾರ್ಷಿಕ ಮಹಾಸಭೆ ಜರುಗಿತು.
ಸಂಸ್ಥೆಯ ಚೇರ್ಮನ್ ಮಂಜುನಾಥ ಚಂದಪ್ಪನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿದ್ದಲಿಂಗ ಶ್ರೀಗಳ ಆಶಿರ್ವಾದದಿಂದ 2015 ರಲ್ಲಿ  ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಗೆ ಚಾಲನೆ ಸಿಕ್ಕಿತು. ಆರಂಭದಲ್ಲಿ 480 ಸದಸ್ಯರಿಂದ ಆರಂಭವಾದ ನಮ್ಮ ಸಂಸ್ಥೆ ಇಂದು 1500 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಗ್ರಾಹಕರ ಆತ್ಮವಿಶ್ವಾಸವನ್ನು ಉಳಿಸಿಕೊಂಡಿದೆ. ತಾಲೂಕಿನ ಪ್ರತಿ ಗ್ರಾಮ ಗ್ರಾಮಗಳಲ್ಲಿ ಸದಸ್ಯತ್ವ ಮಾಡುವ ಮೂಲಕ ಸಂಸ್ಥೆ  57 ಲಕ್ಷ ಠೇವಣಿಯಿಂದ ಆರಂಭವಾದ ಸಂಸ್ಥೆ ಇದೀಗ 5 ಕೋಟಿ ಗಡಿ ದಾಟಿದೆ. ಸಂಸ್ಥೆಯು ಕಳೆದ ವರ್ಷ 40 ಕೊಟಿ ವ್ಯವಹಾರ ನಡೆಸಿದೆ. ಸಂಸ್ಥೆಯ ಸಿಬ್ಬಂದಿ ಹಗಲಿರುಳ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಪಿಗ್ಮಿ, ಮಾಸಿಕ ಪಿಂಚಣಿ ಯೋಜನೆ, ಪಿಗ್ಮಿ ಸಾಲದ ಯೋಜನೆ, ದ್ವಿಚಕ್ರವಾಹನಗಳ ಮೇಲೆ ಸಾಲ ಯೋಜನೆ, ಗೋಲ್ಡ ಲೋನ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಜನ ಸಾಮಾನ್ಯರಿಗೆ ಸಹಕಾರಿ ಆಗುವ ಕೆಲಸವನ್ನು ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ. ಆರಂಭದಲ್ಲಿ 302500 ಶೇರು ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ ಈಗ 4,50,200 ಶೇರು ಬಂಡವಾಳದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ 12,24822 ಲಕ್ಷ ರೂ. ಲಾಭಾಂಶ ಗಳಿಸಿದೆ. ಕಳೆದ ವರ್ಷಕ್ಕಿಂತ ಅಧಿಕ 4 ಲಕ್ಷ ರೂ ಅಧಿಕ ಲಾಭ ಗಳಿಸಿದೆ ಎಂದು ತಿಳಿಸಿದರು.
 ಸಂಸ್ಥೆಯ ಉಪಾಧ್ಯಕ್ಷ ಜೀತೇಂದ್ರಕುಮಾರ ಬನ್ಸಾಲಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ವಿಶೇಷವಾಗಿ ಪಿಗ್ಮಿ ಸಂಗ್ರಹಕಾರರನ್ನು ಅಭಿನಂಧಿಸಬೇಕು. ನಮ್ಮ ಸಂಸ್ಥೆ ಗದಗ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಗೆ ಸಂಸ್ಥೆಯು ಶ್ರಮಿಸುತ್ತಿದೆ. ಹೊಸದಾಗಿ ಶಾಖೆ ತೆರೆಯಲು, ಉನ್ನತಮಟ್ಟದ ಸೇವೆ ನೀಡಲು ಸಂಸ್ಥೆಯು ಉತ್ಸುಕವಾಗಿದೆ. ಕಳೆದ  ಹತ್ತು ವರ್ಷಗಳಲ್ಲಿ ಸಂಸ್ಥೆಯು ನಿರೀಕ್ಷೆ ಮೀರಿ ಬೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ನಂದಿನಿ ಚಂದಪ್ಪನ್ನವರ, ಸ್ವಿಟಿ ಬನ್ಸಾಲಿ, ಭರತ ಕಂಬಂಮ, ಸಂತೋಷ ಲಕ್ಕುಂಡಿ, ಸುರೇಶ ಎಸ್. ಎಚ್., ಸವಿತಾ ಎಸ್, ಎಚ್., ಆನಂದ ಮಾನ್ವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net