

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ತೆರಿಗೆ ಸಲಹೆಗಾರರ ವತಿಯಿಂದ ಗದಗ ನಗರದ ಸಂಭಾಪೂರ ರಸ್ತೆಯ ಪುಣೇಕರ ಲೇಔಟನಲ್ಲಿ ಹಮ್ಮಿಕೊಳ್ಳಲಾದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಎಂ. ಎಸ್. ವಸ್ತ್ರದ ಉದ್ಘಾಟಿಸಿದರು.
ದಿನದಿಂದ ದಿನಕ್ಕೆ ಪರಿಸರದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ಪರಿಸರ ನಾಶ ಹೆಚ್ಚಾಗುತ್ತಿದ್ದು, ಸಂರಣೆಯ ಕುರಿತು ಜಾಗೃತಿ ಮೂಡಿಸುವುದು ಬಹಳ ಅವಶ್ಯ ಎಂದರು.
ಹಿರಿಯ ತೆರಿಗೆ ಸಲಹೆಗಾರರಾದ ಬಸವರಾಜ ಶೆಲ್ಲಿಕೇರಿ ಸಸಿನೆಟ್ಟು ಮಾತನಾಡಿ, ಹಬ್ಬ ಹರಿದಿನ, ಶುಭ ಸಮಾರಂಭಗಳ ಸವಿನೆನಪಿಗಾಗಿ ಗಿಡಮರಗಳನ್ನು ಬೆಳೆಸುವುದನ್ನು ರೂಢಿ ಮಾಡಿಕೊಳ್ಳಬೇಕು. ಕಪ್ಪತ್ತಗುಡ್ಡ ಪ್ರದೇಶದಿಂದ ಗದಗ ನಗರ ಶುದ್ಧಗಾಳಿಗೆ ಹೆಸರು ವಾಸಿಯಾಗಿದೆ. ಆ ಹೆಸರನ್ನು ನಿರಂತರ ಉಳಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯದಶಿರ್ ಚೇತನ ಅಂಗಡಿ, ಉಪಾಧ್ಯ ಸಿದ್ಧು ಕಲ್ಲನಗೌಡರ, ಜಂಟಿ ಕಾರ್ಯದಶಿರ್ ಕುಮಾರ ಶೆಲ್ಲಿಕೇರಿ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.