ಇನ್‌ಸ್ಪೈರಾ ಟೆಕ್ನಾಲಜೀಸ್‌ನಲ್ಲಿ ಪರಿಸರ ದಿನಾಚರಣೆ

WhatsApp Image 2025-06-05 at 13.32.17_2dd7128f
Published on

ಗದಗ: ಇನ್‌ಸ್ಪೈರಾ ಟೆಕ್ನಾಲಜೀಸ್ (ಕಂಪ್ಯೂಟರ್ ತರಬೇತಿ ಸಂಸ್ಥೆ), ಗದಗ ಇದರ ವತಿಯಿಂದ ಜೂನ್ 5, ವಿಶ್ವ ಪರಿಸರ ದಿನವನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯೊಂದಿಗೆ ಹರ್ಷೋತ್ಸವದ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಆವರಣದಲ್ಲಿ ಹಲವಾರು ಸಸಿಗಳನ್ನು ನೆಡುವ ಮೂಲಕ ಪರಿಸರದ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸಸಿ ನೆಡುವಲ್ಲಿ ತೊಡಗಿದ್ದು, ಪರಿಸರದ ಬಗ್ಗೆ ತಮಗಿರುವ ಜವಾಬ್ದಾರಿಯ ನಿಲುವನ್ನು ಸ್ಪಷ್ಟಪಡಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಚಂದ್ರಶೇಖರ ಅಣ್ಣಿಗೇರಿ ಅವರು ಉಪಸ್ಥಿತರಿದ್ದು, “ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಕಡೆ ಗಮನ ಹರಿಸಿದರೆ ಮಾತ್ರ ನಿಜವಾದ ಹಸಿರು ಭವಿಷ್ಯ ಸಾಧ್ಯ. ಇಂದಿನ ವಿದ್ಯಾರ್ಥಿಗಳೇ ನಾಳೆಯ ಪರಿಸರ ರಕ್ಷಕರು” ಎಂದು ಅವರು ಹೇಳಿದರು.

ಸಂಸ್ಥೆಯ ಅಧ್ಯಾಪಕರು ಹಾಗೂ ಸಿಬ್ಬಂದಿ ಸಹ ಸಕ್ರಿಯವಾಗಿ ಪಾಲ್ಗೊಂಡು, ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಜವಾಬ್ದಾರಿ ಬೆಳೆಯಿಸುವುದು ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಎಂಬುದಾಗಿದೆ.

ಇನ್‌ಸ್ಪೈರಾ ಟೆಕ್ನಾಲಜೀಸ್ ಸತತವಾಗಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಕಾರಾತ್ಮಕ ಬದಲಾವಣೆ ತರುತ್ತಾ ಬಂದಿದ್ದು, ಈ ಪರಿಸರ ದಿನಾಚರಣೆ ಸಹ ಅಂತಹ ಒಂದು ಸಾರ್ಥಕ ಹೆಜ್ಜೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net