

ವಿಜಯವಾಣಿ ಸುದ್ದಿಜಾಲ ಗದಗ
ಪಂಚಮಸಾಲಿ ಸಮುದಾಯದ ಭವನ ಕಟ್ಟಲು ಸರ್ಕಾರ ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಹೊರವಲಯದಲ್ಲಿ ನೂತನವಾಗಿ ನಿಮಿರ್ಸಲು ಉದ್ದೇಶಿಸಿರುವ ಪಂಚಮಸಾಲಿ ಸಮುದಾಯದ ಕಟ್ಟಡ ಭವನದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಒಂದು ಕಟ್ಟಡ ಕಟ್ಟುವಾಗ ಸುಂದರ ಕಟ್ಟಡ ನಿಮಿರ್ಸಲು ಗಮನ ಹರಿಸಬೇಕು. ಆದರೆ, ಇಂದಿನ ದಿನಗಳಲ್ಲಿ ಖಚಿರ್ನ ಕಡೆಗೆ ಹೆಚ್ಚು ಗಮನ ಕೊಡಲಾಗುತ್ತಿದೆ. ಕಟ್ಟಡವನ್ನು ಸುಂದರಗೊಳಿಸಿದರೆ ದಾನಿಗಳು ತಾವಾಗಿಯೇ ಕೈ ಜೋಡಿಸುತ್ತಾರೆ. ಸಮುದಾಯದವರ ವಿಶ್ವಾಸ ಗಳಿಸಬೇಕು. ಎಲ್ಲರೂ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ಸಚಿವರು ಹೇಳಿದರು.
ಪಂಚಮಸಾಲಿ ಭವನ ಸುಂದರವಾಗಿ ಕಟ್ಟಬೇಕು ಎಂಬುದು ನನ್ನ ಮನವಿ. 2024 ಫೆಭ್ರುವರಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗಿದೆ. 2024 ಫೆಭ್ರುವರಿ ತಿಂಗಳಲ್ಲಿ ಮೊದಲ ಮಹಡಿ ಮುಗಿಯುವಂತೆ ಕೆಲಸ ವೇಗವಾಗಿ ನಡೆಯಬೇಕು. ಸಾರ್ವಜಿನಕ ಆಸ್ತಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕೆಲಸ ವೇಗವಾಗಿ ನಡೆಯಬೇಕು. ವಿಳಂಬವಾದರೆ ಕಟ್ಟಡ ಖರ್ಚು ವೆಚ್ಚ ಹೊರೆ ಆಗುತ್ತವೆ. ಹಾಗಾಗಿ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕಾಗುತ್ತದೆ ಎಂದು ಎಚ್. ಕೆ. ಪಾಟೀಲ ಹೇಳಿದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಪಂಚಮಸಾಲಿ ಸಮಾಜದಲ್ಲಿ ಬೆಂಬಲ ನೀಡುವರ ಬದಲಾಗಿ ಕಾಲೆಳೆಯುವರೇ ಹೆಚ್ಚು. ಆದರೆ, ಸಚಿವ ಎಚ್.ಕೆ. ಪಾಟೀಲರು ನಮ್ಮ ಸಮಾಜದ ಭವನಕ್ಕೆ ಈಗಾಗಲೇ 1 ಕೋಟಿ ನೀಡಿದ್ದಾರೆ. ನಾವು ಅಧಿಕಾರದಲ್ಲಿ ಇದ್ದರೂ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯ ಆಗುತ್ತಿರಲಿಲ್ಲ. ಎಲ್ಲರೂ ಆಥಿರ್ಕ ಸದೃಢ ಆಗಿರುತ್ತಾರೆ. ಆದರೆ, ಕೊಡುವ ದಾನಿಗಳು ಕಡಿಮೆ. ಇಂತಹ ಕಾರ್ಯಕ್ಕೆ ಎಲ್ಲರೂ ದಾನಿಗಳಾಗಬೇಕು ಎಂದರು.
ಎಸ್.ವಿ. ಸಂಕನೂರು ಮಾತನಾಡಿ, ಮಾರ್ಚನಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 10 ಲಕ್ಷ ಹಣವನ್ನು ಮೊದಲ ಕಂತಿನಲ್ಲಿ ಕೊಡುತ್ತೇನೆ ಎಂದರು.
ಟ್ರಸ್ಟ್ ನೋಂದಣಿಯಾಗಿ ಒಂದು ವರ್ಷದಲ್ಲಿ ಸಮಾಜದ ಬಾಂಧವರು 55 ಲಕ್ಷ ದೇಣಿಗೆ ಸಂಗ್ರಹಿಸಿ ಭೂಮಿ ಖರೀದಿಸಿದ್ದು ಹೆಮ್ಮೆಯ ವಿಷಯ. ಕಿತ್ತೂರು ಚೆನ್ನಮ್ಮ ಹೆಸರಿನಿಂದ ಈ ಭವನ ಕಟ್ಟಲಾಗುತ್ತಿದೆ. ಚೆನಮ್ಮ ಎಂಬುದು ವ್ಯಕ್ತಿ ಅಲ್ಲದೇ ಒಂದು ಶಕ್ತಿ ಎಂದು ಹೇಳಿದರು.
ಮೋಹನ ಮಾಳಶೆಟ್ಟಿ, ಸಿದ್ದು ಪಲ್ಲೇದ, ಬಿ.ಬಿ. ಅಸೂಟಿ, ವಸಂತ ಪಡಗದ, ಸಿದ್ದು ಪಾಟೀಲ, ಅಕ್ಬರಸಾಬ ಬಬಚಿರ್ ಇತರರು ಇದ್ದರು.
ಬಾಕ್ಸ್:
ಬೆಳಗಾವಿ ಅಧಿವೇಶನದಲ್ಲಿ ಪಂಚಮಸಾಲಿಗಳ ಮೇಲೆ ನಡೆದ ಲಾಠಿ ಚಾರ್ಜ ವಿಷಯ ಕುರಿತು ವಿಷಾಧ ವ್ಯಕ್ತಪಡಿಸಿದ ಎಸ್.ವಿ. ಸಂಕನೂರು ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು. ತಮ್ಮ ಹಕ್ಕನ್ನು ಪ್ರತಿಪಾದಿಸಲು ಬಂದಿದ್ದ ಪಂಚಮಸಾಲಿಗಳ ಮೇಲೆ ಸರ್ಕಾರ ಲಾಠಿ ಚಾರ್ಜ್ ಮಾಡಿದ್ದು ನೋವಿನ ಸಂಗತಿ. ಸರ್ಕಾರ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಕೋಟ್:
ಶಿಕ್ಷಣ ಮುಂದುವರಿದ ಯುಗದಲ್ಲಿ ಪಂಚಮಸಾಲಿ ಸಮಾಜ ಶಿಕ್ಷಣದಿಂದ ದೂರ ಊಳಿದಿದೆ. ಪಂಚಮಸಾಲಿ ಸಮಾಜ ಶಿಕ್ಷಣವಂತರಾಗಬೇಕು. ಸಹಕಾರ ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜ ಸೇವೆ ಅಧಿಕವಾಗಿದೆ. ಎಲ್ಲರೂ ಶಿಕ್ಷಣ ಪಡೆದು ಸಮಾಜದ, ದೇಶದ ಉನ್ನತಿಗೆ ಪಾಲುದಾರ ಆಗಬೇಕು.
- ಸಚಿವ ಎಚ್. ಕೆ. ಪಾಟೀಲ ಹೇಳಿದರು.
ಕೋಟ್:
ಪಂಚಮಸಾಲಿ ಸಮುದಾಯ ಭವನ ನಿಮಿರ್ಸಲು ಅಗತ್ಯ ಹಣಕಾಸು ಹೊಂದಿಸಲು ಆರಂಭದ ದಿನಗಳಲ್ಲಿ ಕಷ್ಟವಾಗಿತ್ತು. ದಿನಕಳೆದಂತೆ ಎಲ್ಲವೂ ಸುಗಮವಾಯಿತು. ನೂತನ ಸಮುದಾಯವನ್ನು ಸಮಾಝದ ಅಭಿವೃದ್ಧಿಗೆ ಪರಿರ್ಪೂಣವಾಗಿ ಬಳಸಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುವುದು.
- ಮೋಹನ್ ಮಾಳಶೆಟ್ಟಿ, ಅಧ್ಯಕ್ಷ