ಬಾದಾಮಿ ಬನಶಂಕರಿ ದೇವಿ ಜಾತ್ರಾ ಅಂಗವಾಗಿ ಪಾದಯಾತ್ರೆ ಸೇವೆ

IMG-20250108-WA0035
Published on
Gadag:   ಹಂಪಿಯ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಹೇಮಕೂಟ ಹಂಪೆ ಪಾದಯಾತ್ರೆಯ ಸೇವಾ ಸಮಿತಿಯ ವತಿಯಿಂದ ಬಾದಾಮಿ ಬನಶಂಕರಿ ದೇವಿಗೆ ಬಾಗೇನ ಮತ್ತು ಪಿತಾಂಬರ ಸೀರೆ ಅರ್ಪಣೆ ಪ್ರಯುಕ್ತ ಪಾದಯಾತ್ರೆ  ದಿನಾಂಕ 08-01-2025 ರಂದು ಕನಕಗಿರಿಯಲ್ಲಿ ಮುಂಜಾನೆ 6 ಗಂಟೆಗೆ ಹೊರಟು ರಾತ್ರಿ 8.30 ಗಂಟೆಗೆ  ತಾವರಗೇರಾ ತಲುಪುವ  ಸಂದರ್ಭದಲ್ಲಿ ಗದಗ ಜಿಲ್ಲೆಯ ಬೆಟಗೇರಿ ಗದಗ ಗಂಗಾಪುರ್ ಪೇಟೆ ಶಿಗ್ಲಿ  ಲಕ್ಷ್ಮೇಶ್ವರ, ಮುಳಗುಂದ, ಮುಂಡರಗಿ, ಗಜೇಂದ್ರಗಡ, ನೂರಕ್ಕೂ ಹೆಚ್ಚು ಸಮಾಜ ಬಾಂಧವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ದೇವಾಂಗ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಯವರು ಮಾತನಾಡಿ  ನಮ್ಮ ಹಿರಿಯರು  ಹಿಂದಿನಿಂದಲೂ ಈ ಪರಂಪರೆಯನ್ನು ನಡೆಸಿಕೊಂಡು ಬಂದಿದ್ದರು ಮಧ್ಯದಲ್ಲಿ ಕಾರಣಾಂತರದಿಂದ ಸ್ಥಗಿತಗೊಂಡಿತು ಮತ್ತೆ ಈಗ ಸಮಾಜ ಬಾಂಧವರು ಸೇರಿ ಪುನಹ ಮುಂದುವರಿಸಿದ್ದೇವೆ ಇದರಲ್ಲಿ ಗದಗ ಜಿಲ್ಲೆಯ ಅಧ್ಯಕ್ಷರಾದ ದಶರಥರಾಜ ಕೊಳ್ಳಿಯವರು  ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ ಪ್ರವಾಸವನ್ನು ಮಾಡಿ ಸಮಾಜ ಬಾಂಧವರಿಗೆ ಕೊಪ್ಪಳ ತಾಲೂಕ ಕನಕಗಿರಿ ಯಿಂದ ತಾವರಗೇರಿವರಿಗೆ ಒಂದು ದಿನದ ಪಾದಯಾತ್ರೆಯಲ್ಲಿ ಭಾಗವಹಿಸಲು ಮನವಿಯನ್ನ ಮಾಡಿ ಇವತ್ತು ನೂರಕ್ಕೂ ಹೆಚ್ಚು ಜನರನ್ನ ಕರೆದುಕೊಂಡು ಬಂದಿದ್ದಾರೆ ಇದು ನಿಜವಾಗಿಯೂ ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಇದು ಸಂಘಟನಾತ್ಮಕ ಶಕ್ತಿ ಎಂದರೆ ತಪ್ಪಾಗಲಿಕ್ಕಿಲ್ಲ,  ಪ್ರತಿ ವರ್ಷ ಇದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲ ಭಾಗವಹಿಸಿ ದೇವಿಯ ಕೃಪೆಗೆ ಪಾತರಾಗಬೇಕೆಂದು ಹೇಳಿದರು ಹಂಪಿಯಿಂದ ಆರು ದಿನಗಳ ವರೆಗೆ ಪಾದಯಾತ್ರೆ ಮುಖಾಂತರ ಬಾದಾಮಿ ಬನಶಂಕರಿ ಕ್ಷೇತ್ರಕ್ಕೆ 12 -01- 2025 ರಂದು ತಲುಪುವುದು ಇದರ ಮಧ್ಯದಲ್ಲಿರುವ ಎಲ್ಲಾ ಊರುಗಳು ಭಕ್ತರು ಬೆಳಿಗ್ಗೆ ಉಪಹಾರ ಮಧ್ಯಾಹ್ನ ಊಟ ಸಂಜೆ ಉಪಹಾರ ರಾತ್ರಿ ಊಟದ ವ್ಯವಸ್ಥೆ ಮತ್ತು  ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿ ಎಲ್ಲಾ ಭಕ್ತಾದಿಗಳಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ ಆ ತಾಯಿ ಬನಶಂಕರಿ ದೇವಿ ಅವರಿಗೆ  ಉತ್ತರೋತ್ತರ ಅಭಿವೃದ್ದಿಯನ್ನ ಮತ್ತು ಆರೋಗ್ಯ ಆಯಸ್ಸು ಸಂಪತ್ತು ಸಂಘಟನಾ ಶಕ್ತಿಯನ್ನು ಕೊಡಲೆಂದು  ತಾಯಿಯಲ್ಲಿ ಪ್ರಾರ್ಥಿಸುತ್ತೇನೆ
 ಇದರಲ್ಲಿ ಭಾಗವಹಿಸಿದ ಗದಗ ಜಿಲ್ಲೆಯ,  ಗದಗ, ಶಿಗ್ಲಿ  ಮುಂಡರಗಿ ಗಜೇಂದ್ರಗಡ ಲಕ್ಷ್ಮೇಶ್ವರ ಮುಳಗುಂದ, ಗದಗ ಗಂಗಾಪುರ ಪೇಟ ಹಾಗೂ ಗದಗ್ ಜಿಲ್ಲಾ ನೌಕರರ ಸಂಘ,  ಗದಗ ಬೆಟಗೇರಿ ದೇವಾಂಗ ಮಹಿಳಾ,  ಹಾಗೂ ಸಮಾಜ ಬಾಂಧವರು  ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿ ಮಾಡಿದ್ದೀರಿ ತಮ್ಮೆಲ್ಲರಿಗೂ ತಾಯಿಯ  ಕೃಪೆಇರಲೆಂದರು  ಆಶೀರ್ವದಿಸಿದರು
 ಜಿಲ್ಲಾಧ್ಯಕ್ಷರಾದ ದಶರಥರಾಜ ಕೊಳ್ಳಿ ಯವರು ಮಾತನಾಡಿ ಇಂಥ  ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಮೇಲಿಂದ ಮೇಲೆ ನಡೆಯಬೇಕು ಮತ್ತು ಸಮಾಜದ ಜಿಲ್ಲೆಯ ಎಲ್ಲ ತಾಲೂಕುಗಳ  ಭಕ್ತಾದಿಗಳು ಇದರಲ್ಲಿ ಭಾಗವಹಿಸಿದಾಗ  ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ  ನಮ್ಮ ಮುಂದಿನ ಪೀಳಿಗೆಗಳಿಗೆ ಧಾರ್ಮಿಕ ಸಾಮಾಜಿಕ ಶೈಕ್ಷಣಿಕವಾದಂತ ಸಂಸ್ಕೃತಿಯನ್ನು  ಬಿತ್ತಿದಂತಾಗುತ್ತದೆ ಮತ್ತು ಸಮಾಜದಲ್ಲಿ ಸಂಘಟನಾತ್ಮಕವಾಗಿ ಕೆಲಸ   ಮಾಡಲು ತಮ್ಮೆಲ್ಲರ ಸಲಹೆ ಸೂಚನೆ ಅತಿ ಅವಶ್ಯ ಆದ್ದರಿಂದ ಸಮಾಜ ಬಾಂಧವರು ಮಠದ ಹಾಗೂ ಸಮಾಜದ ಯಾವುದೇ ಕಾರ್ಯಕ್ರಮ ಇದ್ದಲ್ಲಿ ಪೂರ್ವ ಪೂರ್ವಭಾವಿ ಸಭೆಯಲ್ಲಿ ತಾವು ಹಾಜರಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ ಕಾರ್ಯಕ್ರಮದ ರೂಪರೇಷೆಗಳನ್ನು ಹಾಕಿ ಕಾರ್ಯಕ್ರಮ ಮಾಡಲು ಅನುಕೂಲವಾಗುತ್ತದೆ  ಮತ್ತು ಜಿಲ್ಲೆಯ ಎಲ್ಲ ದೇವಾಂಗ ಸಮಾಜ ಬಾಂಧವರು ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಿದ್ದಕ್ಕೆ ಎಲ್ಲ ಸಮಾಜ ಬಾಂಧವರಿಗೆ ಹೃತ್ಪೂರ್ವಕವಾದಂತ ಅಭಿನಂದಗಳನ್ನು ಸಲ್ಲಿಸಿದರು
 ಗದಗ್ ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕೊಪ್ಪಳವರು ಸಾಂದರ್ಭಿಕವಾಗಿ ಮಾತನಾಡಿ  ಮುಂದಿನ  ವರ್ಷ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲ ಸಮಾಜ ಬಾಂಧವರು ಭಾಗವಹಿಸುತ್ತೇವೆಂದರು
 ಈ ಸಂದರ್ಭದಲ್ಲಿ  ಗದಗ ಜಿಲ್ಲೆಯ ಎಲ್ಲ ತಾಲೂಕಿನ ದೇವಾಂಗ ಸಮಾಜ  ಹಿರಿಯರು,  ಮಹಿಳೆಯರು, ಯುವಕರು, ಯುವತಿಯರು,  ಉಪಸ್ಥಿತರಿದ್ದರು
 ಪ್ರಾರಂಭದಲ್ಲಿ ಪಾದಯಾತ್ರೆ ಸೇವಾ ಸಮಿತಿಯ ಸಂಚಾಲಕರಾದ ನಾಗರಾಜ್ ಫಾರ್ಗಿ ಅವರು ಸರ್ವರನ್ನು ಸ್ವಾಗತಿಸಿದರು,  ಜಿಲ್ಲಾ ಕಾರ್ಯದರ್ಶಿಗಳಾದ ವಸಂತ್ ಮುಂಜಾನಿಯವರು ವಂದನಾರ್ಪಣೆ   ಮಾಡಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net