ಗದಗ: ಬೆಟಗೇರಿ ಪಿ ಬಿ ರೋಡ್ ಹತ್ತಿರ ಇರುವ ವಚನ ಪಿತಾಮಹ ದೇವರ ದಾಸಿಮಯ್ಯನವರ 31ನೇ ಹುಣ್ಣಿಮೆ ವಚನ ಕಾರ್ಯಕ್ರಮವನ್ನು ದಿವಸ ನೂಲ ಹುಣ್ಣಿಮೆ ದಿವಸ ನೆರವೇರಿಸಲಾಯಿತು. ಪ್ರತಿಯೊಬ್ಬ ಮಹಿಳೆಗೆ ಮಹಿಳೆಗೆ ಹಿಂದೂ ಧರ್ಮದಲ್ಲಿ ಅನಾಧಿಕಾಲದಿಂದಲೂ ಸ್ವಾತಂತ್ರ್ಯ ನೀಡಲಾಗಿದೆ. ಅವರವರ ಶಕ್ಯಾನುಸಾರ ಹಲವಾರು ಕ್ಷೇತ್ರಗಳಲ್ಲಿ ಸ್ತ್ರೀ ಮೇಲ್ಪಂತ್ತಿಯಲ್ಲಿದ್ದಾಳೆ. ಎಲ್ಲ ಜಂಜಾಟಗಳ ಜವಾಬ್ದಾರಿಗಳ ಜೊತೆಗೆ ಮಹಿಳೆ ತನಗೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮೆರೆಯಬೇಕು. ಇದು ಸಮಾಜಕ್ಕೂ ಕುಟುಂಬಕ್ಕೂ ದೇಶಕ್ಕೂ ಒಳ್ಳೆಯದು ಇತ್ತೀಚಿನ ದಿನಮಾನಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆ ಸಾಧಿಸುತ್ತಿರುವುದು ಸಂತಸದ ಸಂಗತಿ ರಾಜಕೀಯ, ಸಾಹಿತ್ಯ, ಕ್ರೀಡೆ ,ವಿಜ್ಞಾನ ,ಸಮಾಜ ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ