ಗದಗ: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರ ರಾಷ್ಟ್ರೀಯ ಸೇವಾ ಯೋಜನೆ (NSS) ಕೋಶದ ಸ್ನಾತಕೋತರ ಘಟಕಗಳಿಂದ ಮತ್ತು ಬಿಂಕದಕಟ್ಟಿ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಗ್ರಾಮದಲ್ಲಿ 2025-26ನೇ ಸಾಲಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ(ಪ್ರ) *ಪ್ರೊ. ಡಾ. ಸುರೇಶ್ ವಿ. ನಾಡಗೌಡರ* ಅವರು ವಹಿಸಿಕೊಂಡಿದ್ದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಹೇಳಿದರು:
“ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ, ಮಾನವೀಯತೆ ಮತ್ತು ಗ್ರಾಮೀಣಾಭಿವೃದ್ಧಿಯ ನೈಜ ಅರಿವನ್ನು ಬೆಳೆಸುವ ಚಳುವಳಿಯಾಗಿದೆ. ಶಿಬಿರದ ಅನುಭವವೇ ವಿದ್ಯಾರ್ಥಿಗಳಲ್ಲಿ ನೇತೃತ್ವ, ಶ್ರಮ ಮತ್ತು ಸಮುದಾಯ ಸೇವೆಯ ಮನೋಭಾವವನ್ನು ರೂಪಿಸುತ್ತದೆ. ಎನ್‌ಎಸ್‌ಎಸ್ ಚಟುವಟಿಕೆಗಳ ಮೂಲಕ ಯುವಕರು ‘ಗ್ರಾಮದಿಂದ ರಾಷ್ಟ್ರ ನಿರ್ಮಾಣದತ್ತ’ ಹೆಜ್ಜೆ ಇಡಬೇಕು ಎಂದರು.”
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, *ಶ್ರೀ ಚಂದ್ರುಗೌಡ ಎಸ್. ಶಿವನಗೌಡರ*, ಸದಸ್ಯ–ಕಾರ್ಯದರ್ಶಿ, ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅವರು ಶಿಬಿರಕ್ಕೆ ಚಾಲನೆ ನೀಡಿದರು. ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು ಹೇಳಿದರು:
> “ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಒಂದು ಮಾದರಿಯ ವಿಶ್ವವಿದ್ಯಾಲಯವಾಗಿದೆ. ಇದರ ಶಾಂತ, ಹಸಿರು ಮತ್ತು ಅಕಾಡೆಮಿಕ್ ವಾತಾವರಣವು ವಿದ್ಯಾರ್ಥಿಗಳ ಕಲಿಕೆ ಮತ್ತು ಚಿಂತನೆಗೆ ಉತ್ತೇಜನ ನೀಡುತ್ತದೆ. ಇಂತಹ ವಿಶ್ವವಿದ್ಯಾಲಯಗಳಿಂದಲೇ ನಿಜವಾದ ಬದಲಾವಣೆಗಳು ಗ್ರಾಮೀಣ ಸಮಾಜದಲ್ಲಿ ಮೂಡಿ ಬರಲು ಸಾಧ್ಯ. ಎನ್‌ಎಸ್‌ಎಸ್ ಶಿಬಿರಗಳು ಸಮಾಜ ಮತ್ತು ಶಿಕ್ಷಣದ ನಡುವಿನ ಸೇತುವೆಯಂತಿವೆ ಎಂದು ಅಭಿಪ್ರಾಯಪಟ್ಟರು.”
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶ್ರೀ ಆರ್.ಎಂ. ಮೂಲಿಮನಿ, ಬಿಂಕದಕಡ್ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಿಂಗಪ್ಪ ಪರಪ್ಪನವರ್, ಉಪಾಧ್ಯಕ್ಷರಾದ ಶ್ರೀಮತಿ ದ್ಯಾಮವ್ವ ಆರಟ್ಟಿ, ಸದಸ್ಯರಾದ ವರದ ರೆಡ್ಡಿ ರಂಗಪ್ಪನವರ್, ಶ್ರೀಮತಿ ಲಕ್ಷ್ಮಿ ಪ್ರಕಾಶ ಮೂಲಿಮನಿ, ಶ್ರೀ ಪತ್ತೆಸಾಬ್ ಪಾಪುಸಾಬ್ ನದಾಫ್, ಶ್ರೀ ಮಂಜುನಾಥ ಯಲ್ಲಪ್ಪ ಮಕಾಳೆ, ಶ್ರೀಮತಿ ತುಳಿಸಾ ಶ್ರೀನಿವಾಸ್ ಗೌಡ ತಿಮ್ಮನಗೌಡರ, ಶ್ರೀ ದೇವೇಂದ್ರಗೌಡ ಕರಿಗೌಡರ ಹಾಗೂ ಇತರ ಸದಸ್ಯರು, ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಸಂಯೋಜಕರಾದ ಶ್ರೀ ಪ್ರಕಾಶ್ ಮಾಚೇನಹಳ್ಳಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು,
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಸುರೇಶ್ ಲಮಾಣಿ, ಶ್ರೀ ಮಹೇಶ್ ಅಣ್ಣಿಗೇರಿ, ಸಹ ಶಿಬಿರಾಧಿಕಾರಿಗಳಾದ ಶ್ರೀ ನಿಂಗಪ್ಪ ಡಿಎಸ್, ಶ್ರೀ ದೇವರಾಜ್ ದೊಡ್ಡಮನಿ, ಕು. ಕವಿತಾ ಅವರು ಉಪಸ್ಥಿತರಿದ್ದರು.
ಈ ಶಿಬಿರದ ಅವಧಿಯಲ್ಲಿ ಬಿಂಕದಕಟ್ಟಿ ಗ್ರಾಮದಲ್ಲಿ ಶ್ರಮದಾನ, ಸ್ವಚ್ಛತಾ ಅಭಿಯಾನ, ಆರೋಗ್ಯ ಶಿಬಿರ, ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಿದ್ದು,
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡರು.