

ಗದಗ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಿದ್ಯಾಥಿರ್ಗಳಾದ ಸತೀಶ್ ಕನ್ನೇರ ಹಾಗೂ ಆದಿತ್ಯ ಗೊರವರ ಕಾಯ ವೈಖರಿ ಪರಿಗಣಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದಾರೆ. ಆ. 15 ರಂದು ದಿಲ್ಲಿಯ ಕೆಂಪು ಕೋಟೆಯಲ್ಲಿ ಜರಗುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಇಬ್ಬರು ವಿದ್ಯಾಥಿರ್ಗಳನ್ನು ಪ್ರಧಾನಮಂತ್ರಿಗಳ ಸನ್ಮಾನಿಸಲಿದ್ದಾರೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನಿಮಿತ್ಯ ರಾಷ್ಟ್ರೀಯ ಭಾವೈಕ್ಯತೆ ಪ್ರಾಚಾರ ಗೊಳಿಸುವ ಹಿನ್ನೆಲೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ನನ್ನ ದೇಶ, ದೇಶಪ್ರೇಮ ಕಾರ್ಯಕ್ರಮವನ್ನು ಕಾಲೇಜಿನ ಎನ್ಎಸ್ಎಸ್ ಯಾಶಸ್ವಿಯಾಗಿದೆ. ಈ ಹಿನ್ನೆಲೆ ವಿದ್ಯಾಥಿರ್ಗಳನ್ನು ಸನ್ಮಾನಿಸಲು ಆಹ್ವಾನಿಸಲಾಗಿದೆ.