ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ಜಿ ಲ್ಲಾ ಘಟಕದ ವತಿಯಿಂದ ರಕ್ತದಾನ ಶಿಬಿರ

26GDG05
Published on
Gadag: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (NIMA) ಗದಗ ಜಿಲ್ಲಾ ಘಟಕ, NIFAA , ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಗದಗ, ರಾಜೀವ ಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ರೋಣ, ಡಾ. ಎಸ್. ವಿ. ತೋಟಗಂಟಿಮಠ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಗದಗ ಹಾಗೂ ಅಂಬಿಕಾ ರಕ್ತ ಬಂಡಾರ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕಟ್ಟಡದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿಲಾಗಿತ್ತು. ಅಂಬಿಕಾ ರಕ್ತ ಭಂಡಾರದ ಚೇರ್ಮನ್ ಡಾಕ್ಟರ್ ಅನಂತ ಶಿವಪುರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್ಐಎಂಎ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳು ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನಿಯ, ಇದರಿಂದ ಹಲವಾರು ಜನರ ಸಾವು ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು. ಡಾಕ್ಟರ್ ಎಸ್ ಆರ್ ಹಿರೇಮಠ ಅವರು ರಕ್ತ ದಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು,  . ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಐ ಬಿ ಕೊಟ್ಟೂರು ಶೆಟ್ಟರ್ ಅವರು ಮಾತನಾಡಿ ಎಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲಿಕ್ಕೆ ಮುಂದಾಗಬೇಕು ಇದರಿಂದ ತಮ್ಮ ಆರೋಗ್ಯ ಹಾಗೂ ಸಮಾಜ ಎರಡಕ್ಕೂ ಸಹಿತ ಉಪಯುಕ್ತವಾಗುತ್ತದೆ ಎಂದು ತಿಳಿಸಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿಗಳಾದ ಡಾಕ್ಟರ್ ಎಂ ಡಿ ಸಾಮೂದ್ರಿ ಅವರು ಮಾತನಾಡಿ ಎನ್ಐಎಂಎ ಸಂಘಟನೆ ಮಾಡುತ್ತಿರುವ ಇಂಥ ಸಮಾಜಮುಖಿ ಕಾರ್ಯಗಳಿಗೆ ನಮ್ಮ ರೆಡ್ ಕ್ರಾಸ್ ಸಂಸ್ಥೆಯು ಸದಾ ಸಹಾಯವನ್ನು ನೀಡುತ್ತದೆ ಎಂದು ತಿಳಿಸಿದರು. ಎನ್ಐಎಂಎ ಗದಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಸರೋಜಾ ರಾಮಣ್ಣವರ ಅವರು ಮಾತನಾಡಿ ಇಂದು ಹಲವಾರು ಮಹಿಳೆಯರು ರಕ್ತದಾನವನ್ನ ಮಾಡಿದ್ದು, ಮುಂದೆಯೂ ಸಹಿತ ನಮ್ಮ ಸಂಘಟನೆಗಳು ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ  ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್ಐಎಮ್ಎ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ ಜಯಕುಮಾರ ಬ್ಯಾಳಿಯವರು ಮಾತನಾಡಿ ಅಮರ ಭಗತ್ ಸಿಂಗ್ ರಾಜಗುರು ಹಾಗೂ ಸುಖದೇವ್ ಇವರ ೯೪ನೆ ಬಲಿದಾನ ದಿನದ ಪ್ರಯುಕ್ತ ದೇಶದಾದ್ಯಂತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, 1.5 ಲಕ್ಷ ಬ್ಲಡ್ ಯೂನಿಟ್ ಗಳನ್ನು ಸಂಗ್ರಹಿಸಿ ವಿಶ್ವದಾಖಲೆ ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಲಾಗಿದೆ ಎಂದು ತಿಳಿಸಿದರು ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಸಹಿತ ರಕ್ತವನ್ನು ಕೃತಕವಾಗಿ ನಿರ್ಮಾಣ ಮಾಡಲು ಸಾಧ್ಯವಿಲ್ಲ ಆದ್ದರಿಂದ ಎಲ್ಲರೂ ಸಹಿತ ರಕ್ತದಾನವನ್ನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. ರಕ್ತದಾನ ಶಿಬಿರದಲ್ಲಿ 86 ಜನ ರಕ್ತದಾನವನ್ನು ಮಾಡಿದರು . ಡಾ. ಗಿರೀಶ ಬಡಿಗೇರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾಕ್ಟರ್ ಬಸವರಾಜ ಚನ್ನಪ್ಪಗೌಡರ ಅವರು ಸ್ವಾಗತಿಸಿದರು. ಡಾಕ್ಟರ್ ರಾಜೇಶ್ವರಿ ಹಿರೇಮಠ ಇವರು ಪ್ರಾರ್ಥನೆ ಹಾಗೂ ವಂದನಾರ್ಪಣೆಯನ್ನು ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net