ಗದಗ: ನಿಗಮ ಮಂಡಳಿಗೆ ಹೆಚ್ಚಿದ ಒತ್ತಡ. ಕಗ್ಗಂಟಾದ ಆಯ್ಕೆ

20230803_132050
Published on

ಶಿವಾನಂದ ಹಿರೇಮಠ ಗದಗ
ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಜನಪ್ರತಿನಿಧಿಗಳ ಮೇಲೆ ಕಾರ್ಯಕರ್ತರ ಒತ್ತಡ ಅಧಿಕಗೊಳ್ಳುತ್ತಿದೆ. ಆಗಷ್ಟ್​ ತಿಂಗಳಲ್ಲಿ ಭಾಗಶಃ ನಿಮಗ ಮಂಡಳಿಗಳ ಅಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನ ಒಲಿದು ಬರಲಿದೆ ಎನ್ನಲಾಗುತ್ತಿದೆ..
ಚುನಾವಣಾ ಪೂರ್ವದಲ್ಲಿ ಸ್ಥಳಿಯ ಹಲವು ನಾಯಕರಿಗೆ ಜಿಲ್ಲೆಯ ಪ್ರಭಾವಿ ನಾಯಕರು ವಿವಿಧ ಸ್ಥಾನ ನೀಡುವ ಭರವಸೆ ನೀಡಿದ್ದರು. ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದರೂ ಇನ್ನೂ ನಿಗಮ ಮಂಡಳಿಗೆ ಸರ್ಜರಿ ಮಾಡುವ ಪ್ರಕ್ರಿಯೆಗೆ ಸರ್ಕಾರ ಮುನ್ನುಡಿ ಬರೆದಿಲ್ಲ. ಹೀಗಾಗಿ ಕಾರ್ಯಕರ್ತರಲ್ಲೂ ತಳಮಳ ಶುರುವಾಗಿದೆ. ಈ ನಡುವೆ ಆಗಷ್ಟ ತಿಂಗಳಲ್ಲಿ ನಿಗಮಗಳ ಸರ್ಜರಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಲಿದೆ ಎಂಬ ಮಾತುಗಳು ವಿಧಾನಸೌಧ ಅಂಗಳದಲ್ಲಿ ಕೇಳಿ ಬರುತ್ತಿದ್ದು, ಇತ್ತಕಡೆ ಕ್ಷೇತ್ರದಲ್ಲೂ ಆಕಾಂಗಳು ದಂಡು ದುಪ್ಪಟ್ಟಾಗುವತ್ತ ಸಾಗಿದೆ. ಜಿಲ್ಲಾ ಮುಖಂಡರ ಮೇಲೆ ನಿಗಮಕ್ಕಾಗಿ ಮನವಿ ಮಾಡುವ ಪ್ರಸಂಗಗಳು ಜರುಗುತ್ತಿದ್ದು, ಯಾರಿಗೆ ನಿಗಮದ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬುದು ಜಿಲ್ಲೆಯಲ್ಲಿ ಕುತೂಹಲ ಮೂಡಿದೆ.
ಗದಗ:
ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಎಚ್​.ಕೆ. ಪಾಟೀಲ ಕ್ಷೇತ್ರದಲ್ಲಿ ಇತ್ತೀಚಿನ ದಶಕದಲ್ಲಿ ನಿಗಮ ಮಂಡಳಿ ಸ್ಥಾನ ಯಾರಿಗೂ ಒಲಿದು ಬಂದಿಲ್ಲ. ಈ ಬಾರಿ ಮಾಜಿ ನಗರಸಭೆ ಸದಸ್ಯ ಪೀರಸಾಬ್​ ಕೌತಾಳ ನಿಗಮಕ್ಕೆ ಪ್ರಬಲ ಆಕಾಂ ಆಗಿದ್ದಾರೆ. ಕಳೆದ ಮೂರು ಬಾರಿ ನಗರಸಭಾ ಸದಸ್ಯರೂ ಆಗಿರುವ ಅವರು ಒಮ್ಮೆ ಅಧ್ಯಕ್ಷರಾಗಿ, ಅದಕ್ಕೂ ಮೊದಲು ವಿಭಜಿತ ಗದಗ ಜಿಲ್ಲೆಯ ಮೊದಲ ಯುವ ಜಿಲ್ಲಾಧ್ಯಕ್ಷರು ಆಗಿ ಪಕ್ಷ ಸಂಟನೆಯಲ್ಲಿ ತೋಡಗಿದ್ದಾರೆ. ನಿಗಮ ಸ್ಥಾನ ನಿಡುವ ಭರವಸೆಯನ್ನು ಎಚ್​.ಕೆ. ಪಾಟೀಲ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಪ್ರಸಕ್ತ ನಗರಸಭೆ ಚುನಾವಣೆಯಲ್ಲೂ ಪೀರ್​ಸಾಬ್​ ಕೌತಾಳ ಸ್ಪರ್ಧೆ ಮಾಡಲಿಲ್ಲ. ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಗರಸಭೆಗೆ ಸಂಪನ್ಮೂಲ ಸೃಷ್ಟಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ನಗರದ 400ಕ್ಕೂ ಅಧಿಕ ಪ್ರತಿಭಾನ್ವಿತ ಮಕ್ಕಳಿಗೆ ತಲಾ 5000 ರೂ. ಹಾಗೂ 1200ಕ್ಕೂ ಹೆಚ್ಚು ವಿಕಲಚೇತನ ಮಕ್ಕಳಿಗೆ ತಲಾ 6000 ರೂ. ವಿದ್ಯಾಥಿರ್ ವೇತನವನ್ನು ನಗರಸಭೆಯಿಂದ ಕೊಡಮಾಡಿದ್ದು ಇವರ ಹೆಗ್ಗಳಿಕೆ.
ರೋಣ:
ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಮತ್ತು ಕರ್ನಾಟಕ ರಾಜ್ಯದ ತೆಂಗು, ನಾರು ನಿಗಮ ಮಂಡಳಿ ನಿರ್ದೇಶಕರಾಗಿ ಈಗಾಗಲೇ ಸೇವೆ ಸಲ್ಲಿಸಿ ಅನುಭವ ಇರುವ ವೀರಯ್ಯ ಸೋಮನಕಟ್ಟಿಮಠ ಈ ಬಾರಿ ನಿಗಮ ಸ್ಥಾನದ ಆಕಾಂಗಳು. 1982&83 ರಿಂದ ಜಿ.ಎಸ್​. ಪಾಟೀಲರಿಗೆ ಆಪ್ತರು. ಜಿ.ಎಸ್​ ಪಾಟೀಲು ಮೊದಲ ಬಾರಿ ರೋಣ ಪುರಸಭೆಯ ಅಧ್ಯಕ್ಷರಾಗಿ, ತಾಲೂಕು ಎಪಿಎಂಸಿ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ ಸಂದರ್ಭದಿಂದಲೂ ಜತೆಗಿದ್ದವರು. ಜಿಲ್ಲಾ ಕಾಂಗ್ರೆಸ್​ ವಕ್ತಾರರಾಗಿ, ಶಿಕ್ಷಣ ಸಂಸ್ಥೆ ನಿರ್ದೇಶಕ, ಚೇರಮನ್​, ರೋಣ ತಾಲೂಕು ನ್ಯಾಯ ಬೆಲೆ ಅಂಗಡಿಯ ಮಾಲಕರ ಸಂಗದ ತಾಲೂಕು ಅಧ್ಯಕ್ಷ, 1990 ರಿಂದ 2010ರ ವರೆಗೆ 20 ವರ್ಷ ಕಾಲ ರೋಣ ತಾಲೂಕು ಯುವ ಕಾಂಗ್ರೆಸ್​ ಕಮಿಟಿ ಅಧ್ಯಕ್ಷರಾಗಿ ಅನುಭ ಹೊಂದಿದ್ದಾರೆ. ಈ ಹಿನ್ನೆಲೆ ಜಿಲ್ಲಾ ಮುಖಂಡರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಆದರೆ, ಸಚಿವ ಸ್ಥಾನ ಸಿಗದ ಜಿ.ಎಸ್​. ಪಾಟೀಲರು ರಾಜ್ಯ ಮುಖಂಡರಲ್ಲಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನೂ ನಿಡುವಂತೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಮುಖಂಡರೇ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ.

ನರಗುಂದ ಮತ್ತು ಶಿರಹಟ್ಟಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್​ ಪರಭಾವಗೊಂಡಿರುವ ಹಿನ್ನೆಲೆ ಈ ಕ್ಷೇತ್ರಗಳಿಗೂ ಅಧಿಕಾರ ವಿಕೇಂದ್ರಿಕರಣ ಮಾಡಬೇಕೆಂದು ಆಗ್ರಹ ಕೇಳಿಬರುತ್ತಿದೆ. ಶಿರಹಟ್ಟಿಯಲ್ಲಿ ಪರಾಜಿತ ಅಭ್ಯಥಿರ್ ಸುಜಾತಾ ದೊಡ್ಡಮನಿ, ಕಾಂಗ್ರೆಸ್​ ಮುಖಂಡ ಉಮಾಯನ ಮಾಗಡಿ ಮತ್ತು ನರಗುಂದದಲ್ಲಿ ಟಿಕೆಟ್​ ವಂಚಿತ ಸಂಗಮೇಶ ಕೊಳ್ಳಿವರ ಕೂಡ ರೇಸ್​ನಲ್ಲಿ ಇದ್ದಾರೆ. ಕೆಲವರು ಜಿಲ್ಲಾ ಮುಖಂಡರ ಮೇಲೆ ಅವಲಂಭಿತರಾಗಿದರೆ, ಕೆಲವರು ರಾಜ್ಯ ಮುಖಂಡರನ್ನು ಸಂಪಕಿರ್ಸಿ ತಮ್ಮ ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net