ಗದಗ ಹೊಸ ಬಸ್ಸ ನಿಲ್ದಾಣದಲ್ಲಿ ಪೆಟ್ರೋಲ್​ ಪಂಪ್​ ಸ್ಥಾಪನೆಗೆ ವಿರೋಧ

04GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಹೊಸ ಬಸ್ಸ ನಿಲ್ದಾಣದಲ್ಲಿ ಪೆಟ್ರೋಲ್​ ಪಂಪ್​ ಪ್ರಾರಂಭಿಸುತ್ತಿರುವುದನ್ನು ಚೇಂಬರ್​ ಆ್​ ಕಾಮರ್ಸ ವಿರೋಧಿಸಿ ವಿಭಾಗೀಯ ನಿಯಂತ್ರಣಾ-ಕಾರಿ ಡಿ. ಎಂ. ದೇವರಾಜು ಅವರಿಗೆ ಶನಿವಾರ ಮನವಿ ಸಲ್ಲಿಸಿತು.

ಚೇಂಬರ್​ ಆ್​ ಕಾಮರ್ಸ ಸಂಸ್ಥೆಯ ಅಧ್ಯ ತಾತನಗೌಡ ಪಾಟೀಲ ಮಾತನಾಡಿ, ಬಸ್​ ನಿಲ್ದಾಣದಲ್ಲಿ ಪ್ರತಿನಿತ್ಯ ನೂರಾರು ಬಸ್ಸುಗಳು ಹಾಗೂ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಸಾರ್ವಜನಿಕರ ಹಿತದೃಷ್ಠಿಯಿಂದ ಸ್ಪೋಟ ಆಗುವಂತಹ ವಸ್ತುಗಳಾದ ಪೆಟ್ರೋಲ್​, ಗ್ಯಾಸ ಇಂತಹ ಅಪಾಯಕಾರಿ ವಸ್ತುಗಳನ್ನೊಳಗೊಂಡ ಪೆಟ್ರೋಲ್​ ಪಂಪ್​ ಆರಂಭಿಸುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತದೆ. ಹೊಸ ಬಸ್ಸ ನಿಲ್ದಾಣದಲ್ಲಿ ಸಾಕಷ್ಟು ಜನ ಸಂದಣಿ ಇರುತ್ತದೆ. ಬಸ್​ ಒಳಗೆ ಪ್ರವೇಶದ ದ್ವಾರದ ಪಕ್ಕದಲ್ಲಿ ಪೆಟ್ರೋಲ್​ ಪಂಪ್​ ಸ್ಥಾಪನೆ ಮಾಡಲು ಈಗಾಗಲೇ ಕಟ್ಟಡದ ಕಾಮಗಾರಿ ಪ್ರಾರಂಭಿಸಲಾಗಿದೆ. ಹೊರಭಾಗದಿಂದ ಬರುವ ಬಸ್ಸುಗಳು ಅಲ್ಲಿಯೇ ನಿಲ್ಲುವುದರಿಂದ ಅಪಾಯಕಾರಿ ಹೆಚ್ಚಾಗುತ್ತದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಪೆಟ್ರೋಲ್​ ಬಂಕ್​ ಆರಂಭಿಸುವುದನ್ನು ಕೈಬಿಡಬೇಕು ಎಂದು ಡಿ.ಎಂ. ದೇವರಾಜು ಅವರಿಗೆ ಮನವಿ ಮಾಡಿದರು.'

ಶೇಖಣ್ಣ ಗದ್ದಿಕೇರಿ, ವಿಜಯಕುಮಾರ ಮಾಟಲದಿನ್ನಿ, ಸೋಮನಾಥ ಜಾಲಿ, ಸಂಜಯ ಬಾಗಮಾರ ಅಶೋಕಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net