ತಪವಿಲ್ಲದ ತತ್ವಜ್ಞಾನವು ಅಂಕಿ ಇಲ್ಲದ ಶೂನ್ಯದಂತೆ: ಅಭಿನವ ಶಿವಾನಂದ ಸ್ವಾಮಿಗಳು

05GDG09
Published on

ತಪವಿಲ್ಲದ ತತ್ವ ಜ್ಞಾನವು ಅಂಕಿ ಇಲ್ಲದ ಶೂನ್ಯದಂತಾಗುತ್ತದೆ. ತತ್ವ ಜ್ಞಾನ ದೃಢತೆಗೆ ಹಿಂದಿನ ಋಷಿಮುನಿಗಳು ತಪವನ್ನೇ ಮೂಲವಾಗಿ ಇರಿಸಿಕೊಂಡು ಜಗತ್ ಕಲ್ಯಾಣವನ್ನ ಮಾಡಿದರು. ತಪೋಶಕ್ತಿ ಇದ್ದಲ್ಲಿ ಏನೆಲ್ಲವೂ ಸಾಧ್ಯ ಎಂದು ಶಿವಾನಂದ ಮಠದ ಜ. ಅಭಿನವ ಶಿವಾನಂದ ಸ್ವಾಮಿಗಳು ಆಧ್ಯಾತ್ಮ ವಿದ್ಯಾಶ್ರಮದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮಾ ಹಾಗೂ ಶರಣೆ ಮೈತ್ರಾ ದೇವಿಯವರು 11 ದಿನಗಳವರೆಗೆ ಕೈಕೊಂಡ ನಿರಹರ ಮೌನ ಅನುಷ್ಠಾನ ಮಂಗಲದ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾರಂಭದ ನೇತೃತ್ವ ವಹಿಸಿದ ಪೂಜ್ಯ ಶ್ರೀ ಜ. ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಶಿರಹಟ್ಟಿ ಸಂಸ್ಥಾನ ಮಠ ಇವರು ಮಾತನಾಡುತ್ತಾ ಬರೀ ಮಾತ ನಿಂದ ಯಾರು ಮಹಾತ್ಮರಾಗುವುದಿಲ್ಲ ಮಾತು ಮಂತ್ರವಾಗಬೇಕು ಸಾಧನೆಗೆ ಪೂರಕವಾಗಿ ಮಾತು ಮೌನವಾಗಬೇಕು ಮೌನದಿಂದ ಅಸಾಧ್ಯವಾದ ಕಾರ್ಯಗಳೂ ಸಹಜ ಸಾಧ್ಯವಾಗುತ್ತವೆ. ಅನೇಕ ಉದಾಹರಣೆಗಳೊಂದಿಗೆ ಯೋಗದ ಮಹತ್ವವನ್ನು ಕುರಿತು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗ ಯೋಗವನ್ನು ತಿಳಿಸಿಕೊಟ್ಟು ಹೃದಯ ತುಂಬಿ ಸಾಧಕಳಾದ ಮೈತ್ರಾದೇವಿಯ ಸಾಧನೆಯನ್ನು ಕುರಿತು ಶ್ಲಾಘೀಸಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಿವಶರಣೆ ನೀಲಮ್ಮತಾಯಿಯವರು ಮಾತನಾಡುತ್ತಾ ಸತ್ಯವಂತರ ಸಂಕಲ್ಪ ಶಕ್ತಿಗೆ ಎಂದೂ ಪ್ರಳಯವಿಲ್ಲ ಋಷಿ ಪರಂಪರೆಯಲ್ಲಿ ಧ್ರುವತಾರೆಯಂತಿರುವ ವೇದವ್ಯಾಸ ಭಗವಾನರು 'ಅಪೌರುಷೇಯವಾದ' ವೇದಗಳನ್ನು ವಿಸ್ತರಿಸಿ ನಾಲ್ಕು ಭಾಗಗಳನ್ನಾಗಿ ಮಾಡಿದರು ಋಗ್ವೇದ ಯಜುರ್ವೇದ ಸಾಮವೇದ ಅಥರ್ವ ವೇದಗಳೆಂದು ಮಂತ್ರಗಳನ್ನು ಉಚ್ಛರಿಸುವ ದೇವನನ್ನು ಪೂಜಿಸುವ, ಸ್ವರಸಹಿತವಾಗಿ ಹಾಡುವ ವಿಧಿ ವಿಧಾನಗಳನ್ನು ಅನುಸರಿಸಿ ನಡೆಯುವ ಜೀವನ ಕ್ರಮವನ್ನು ಹೇಳಿಕೊಟ್ಟವರು, ಮಹಾಭಾರತವನ್ನು ಬ್ರಹ್ಮಸೂತ್ರಗಳನ್ನು ರಚಿಸಿದವರು ವೇದವ್ಯಾಸರು, ಅವರು ಜನಿಸಿದ ದಿನವೇ ಈ ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ವಿಶ್ಲೇಷಿಸಿದರು.

ಅತಿಥಿಗಳಾಗಿ ಆಗಮಿಸಿದ ಶ್ರೀ ಆಯ.ಬಿ.ಬೆನಕಪ್ಪ ನೀ ಉಪ ನಿರ್ದೇಶಕರು ಹಾಗೂ ಪ್ರೊ. ಸುಧಾ ಹುಚ್ಚಣ್ಣವರ್ ಸಂಯೋಜಿತವಾಗಿ ಮಾತನಾಡಿದರು. ಶರಣಿ ಮೈತ್ರಾದೇವಿ ಮಾತನಾಡುತ್ತಾ ನಾನಿನ್ನು ಸಾಧಕಳು ಅಧ್ಯಾತ್ಮ ಸಾಧನೆಗೆ ಈ ಮೌನಾನುಷ್ಠಾನ ಸಾಧನವಾಗಲಿ ಎಂಬ ಕಾರಣಕ್ಕೆ ಕೈಕೊಂಡಿದ್ದಾಗಿ ಯಾವುದೇ ಪ್ರಚಾರಕ್ಕೆ ಅಲ್ಲ ಎಂಬ ವಿನೀತ ಭಾವನೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗದಗ್ ಬಸವೇಶ್ವರ ಪ್ರೌಢಶಾಲೆ ಮುಖ್ಯ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಶಿವನ ಗೌಡ್ರು ಗೌಡರನ್ನು ದಂಪತಿ ಸಹಿತ ಸತ್ಕರಿಸಲಾಯಿತು. ಐ ಬಿ ಬೆನಕೊಪ್ಪ ದಂಪತಿಗಳನ್ನ ಭಕ್ತಿ ಸೇವೆ ಮಾಹಿಸಿದ ಶ್ರೀ ಶಾಂತ ವಿ ಹಿರೇವಡೆಯರನ್ನು ಸಹಕಾರ ನೀಡಿದ ತಮ್ಮನ ಗೌಡ್ರು, ಮಲ್ಲನಗೌಡ ಪ್ಪರೆಡ್ಡಿ, ಪರಪ್ಪ ಕಣಿವಿ ಹಾಗೂ ಬಂಡಾರಕೌಟ್ ಭಕ್ತರನ್ನ ಸನ್ಮಾನಿಸಲಾಯಿತು ಸಿ ವಿ ಗಂಗಾವತಿ, ಅಶೋಕ್ ಲಕುಂಡಿ ಕಣಿವಿ ಹಾಗೂ ಬಂಡಾರಕವಟೆ ಭಕ್ತರನ್ನು ಸನ್ಮಾನಿಸಲಾಯಿತು. ಬಸವರಾಜ ಬಿಂಗಿ, ಶ್ರೀ ರವಿ ಸಂಕೇಶ್ವರನ ಗೌರವಿಸಲಾಯಿತು. ಈಶ್ವರ್ ರೇಷ್ಮೆ ಎಂ ವ್ಹಿ ಬೆಂಗಳೂರ ಸರ್ ಆದಿಶಕ್ತಿಯ ಬಳಗದ ಎಲ್ಲಾ ತಾಯಂದಿರ ಬಳಗ ಆಶ್ರಮದ ಭಕ್ತ ಮಂಡಳಿ ಉಪಸ್ಥಿತರಿದ್ದರು ನಂತರ ಕಾರ್ಯಕ್ರಮ ಮಂಗಲಗೊಂಡು ದಾಸೋಹ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net