ಮನದ ಅಂಧಕಾರ ಹೋಗಲಾಡಿಸಲು ಗುರು ಅವಶ್ಯ- ಪ್ರಾಚಾರ್ಯ ಅನಿಲ ವೈದ್ಯ

22GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಆದಿಶಕ್ತಿ ನಗರದ ನೀಲಮ್ಮ ತಾಯಿ ಅಮ್ಮನವರ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಭಾನುವಾರ ಗುರುರ್ಪೂಣಿಮೆ ಹಾಗೂ ಮೈತ್ರಾದೇವಿ ಅಮ್ಮನವರ ಮೌನ ಅನುಷ್ಠಾನ ಮಂಗಳ ಕಾರ್ಯಕ್ರಮ ಜರುಗಿತು.
ನಿವೃತ್ತ ಪ್ರಾಚಾರ್ಯ ಅನಿಲ್​ ವೈದ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗುರು ಎಂದರೆ ಎಲ್ಲರ ಬದುಕಿನಲ್ಲಿ ಬೆಳಕನ್ನು ನೀಡುವ ಬಹುದೊಡ್ಡ ಶಕ್ತಿ. ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಯಾವುದೇ ರಂಗದ ಮಾರ್ಗ ತೋರುವ ಗುರು ಆಗಿರಬಹುದು. ಮನುಷ್ಯ ಇಂದು ಎಲ್ಲವನ್ನು ಪಡೆದಿದ್ದಾನೆ. ಆದರೆ, ಮನುಷ್ಯನಾಗಿ ಬದುಕುವ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಇಂತಹ ಅಧ್ಯಾತ್ಮ ಹಿನ್ನೆಲೆ ಇರುವ ಗುರುವಿನ ಕೃಪೆಯಿಂದ, ಮಾರ್ಗದರ್ಶನದಿಂದ ಮನದ ಅಂದಕಾರವನ್ನು ಹೋಗಲಾಡಿಸಲು, ಸಚ್ಚಾರಿತ್ರ್ಯವನ್ನ ರೂಢಿಸಿಕೊಳ್ಳಲು ಸಾಧ್ಯ ಎಂದರು.
ಹೈಕೋರ್ಟ್​ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಮಾತನಾಡಿ, ಇಂದಿನ ಯುವ ಜನಾಂಗದ ಚಿತ್ತ ಯಾವ ಕಡೆ ಸಾಗುತ್ತದೆ ಎನ್ನುವುದರ ಬಗ್ಗೆ ಹಿರಿಯರು ವಿಚಾರ ಮಾಡಬೇಕು. ಆಧುನಿಕತೆಯಲ್ಲಿ ಬಹಳಷ್ಟು ಅವಕಾಶಗಳ ಮಧ್ಯೆ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಹಾಗಾಗಿ ಗುರುವಿನ ಮಹತ್ವವನ್ನು ಅರಿತು ಬದುಕಿನಲ್ಲಿ ಅರ್ಥರ್ಪೂಣ ಜೀವನ ಮಾರ್ಗವನ್ನು ಅನುಸರಿಸುವುದು ಎಲ್ಲರ ಕರ್ತವ್ಯ ಆಗಬೇಕು ಎಂದರು.
ಜಿಲ್ಲಾ ಕ್ಷಯರೋಗ ವಿಭಾಗದ ಅಧಿಕಾರಿ ಅರುಂಧತಿ ಕುಲಕಣಿರ್ ಮಾತನಾಡಿ, ಎಲ್ಲರೂ ತಮ್ಮ ಜೀವನಕ್ಕೆ ಸನ್ಮಾರ್ಗ ಅನುಸರಿಸಬೇಕು. ವಿಶೇಷವಾಗಿ ಆರೋಗ್ಯದ ಕಡೆಗೆ ಹೆಚ್ಚು ಮಹಿಳೆಯರು ಗಮನಹರಿಸಬೇಕು. ಎಲ್ಲಾ ಭಾಗ್ಯಗಳಿಗಿಂತಲೂ ಮನುಷ್ಯನಿಗೆ ಆರೋಗ್ಯ ಭಾಗ್ಯ ಮುಖ್ಯ. ಹಾಗಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಮೇಲು -ಕೀಳು ಎನ್ನದೆ ಸಮಾನ ಮನಸ್ಥಿತಿಯಿಂದ ಬದುಕುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ 11 ದಿನಗಳ ಕಾಲ ಮೌನ ಅನುಷ್ಠಾನ ಮಾಡಿದ್ದ ಮೈತ್ರಾದೇವಿ ಅಮ್ಮನವರು ಮಾತನಾಡಿ, ಭಗವಂತನ ಪಯಣ ಆತ್ಮ ಸಾಕ್ಷಾತ್ಕಾರದ ಮಾರ್ಗವಾಗಿದೆ ಮೌನ ಮನಸ್ಸಿನ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಲೌಕಿಕ ಜಂಜಾಟದಲ್ಲಿ ಕಳೆದುಹೋಗದೆ, ಪಾರಮಾಥಿರ್ಕ ಮಾರ್ಗ ಅವಶ್ಯ. ಗುರು ಸರ್ವವನ್ನು ಕಾಯುವ ಮಹಾಶಕ್ತಿ ಎಂದರು.
ಅಭಿನವ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲರೂ ಸನ್ಮಾರ್ಗದತ್ತ ಹೋಗುವ ದಾರಿ ತೋರಿಸುವವನೇ ಗುರು. ಗುರು ವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬರ ಬದುಕಿನಲ್ಲಿ ಗುರುವಿನ ಸ್ಥಾನ ಹಿರಿಮೆಯಿಂದ ಕೂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನೀಲಮ್ಮ ತಾಯಿ ಅಮ್ಮನವರು ಮಾತನಾಡಿ, ಹರ ಮುನಿದರೂ ಗುರು ಕಾಯುವ ಎಂಬಂತೆ ಗುರುವಿನ ಕೃಪೆಗೆ ಪ್ರತಿಯೊಬ್ಬರೂ ಪಾತ್ರರಾಗಬೇಕು. ಸರಳ ಜೀವನ ಉನ್ನತ ವಿಚಾರಗಳ ಮೂಲಕ ಸಾಮಾಜಿಕ ಕಳಕಳಿ ಮೂಡಿ ಬರಬೇಕು. ನಾನು ನನ್ನದು ಎನ್ನುವ ಸ್ವಾರ್ಥ ಚಿಂತನೆಯಿಂದ ಹೊರಬಂದು ನಾವು ಎನ್ನುವ ಸಾಮಾಜಿಕ ಹೊಣೆಗಾರಿಕೆಯನ್ನು ಮೈಗೂಡಿಸಿಕೊಳ್ಳುವ ಪ್ರವೃತ್ತಿ ಎಲ್ಲರಲ್ಲಿ ಬರಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ಎಸ್​.ಪಿ. ದೊಡ್ಡಣ್ಣವರ, ಶಾರದಾ ಕಾತಕಿರ್, ಸುಧಾ ಹುಚ್ಚಣ್ಣವರ, ಮಲ್ಲನಗೌಡ್ರು ಪರಡ್ಡಿ, ಹೇಮಗಿರಿ ಶಾಸ್ತ್ರಿಗಳು, ಐ. ಬಿ. ಬೆನಕಪ್ಪ, ಬಿ. ಬಿ. ಹೂಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net