ಕಾಯ ಅಳಿದರೂ ಕಾರ್ಯ ಮಾಡಬೇಕು: ನೀಲಕಂಠೇಶ್ವರ ಶ್ರೀ

14GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ಕಾಯ ಅಳಿದರೂ ಕಾರ್ಯ ಮಾಡಬೇಕು ಎಂದು ನೀಲಕಂಠೇಶ್ವರ ಪಟ್ಟದಾರ್ಯ ಶ್ರೀಗಳು ಹೇಳಿದರು.
ಬೆಟಗೇರಿ ನೀಲಕಂಟೇಶ್ವರ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿವ ಮತ್ತು ವಿಷ್ಣುವನ್ನು ಭಕ್ತರು ಸಮಭಾವದಿಂದ ಕಾಣಬೇಕು. ಹರಿ ಹರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜೀವಿಗಳಲ್ಲಿ ಮಾನವ ಶ್ರೇಷ್ಠ ಜೀವಿ. ಮಾನವ ತನ್ನ ಜೀವಿತಾವಧಿಯಲ್ಲಿ ಸಮಾಜ ಸೇವೆ ಮಾಡಿ ಸಕಲರಿಗೆ ಲೇಸನ್ನೇ ಬಯಸುವ ಜೀವಿ ಆಗಬೇಕು ಎಂದರು.
ಇಂಜಿನೀಯರ್​ ಮಲ್ಲಿಕಾರ್ಜುನ ಐಲಿ ಮಾತನಾಡಿ, ಅಳಿವಿನ ಅಂಚಿನಲ್ಲಿ ಇರುವ ಕೈಮಗ್ಗ ಕಸಬು ಉಳಿಯಬೇಕಾದರೆ ನೇಕಾರರಿಗೆ ಅಗತ್ಯವಾದ ನೆರವು ದೊರೆಯಬೇಕು. ನೇಕಾರರು ಸಂಟಿತರಾಗಿ ಸರ್ಕಾರದ ಸಹಾಯ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕು ಎಂದರು. ರಾಷ್ಟ್ರೀಯ ಕೈಮಗ್ಗದ ದಿನಾಚರಣೆ ನಿಮಿತ್ಯ ಬೆಟಗೇರಿಯ ಹಿರಿಯ ನೇಕಾರರಿಗೆ ಸನ್ಮಾನಿಸಲಾಯಿತು.
ಸಾಂಬವಶಿವ ತಟ್ಟಿ, ನಾರಾಯಣಪ್ಪ ಕೋಣಿ, ದೊಡ್ಡನಾಗಪ್ಪ ಗಟ್ಟಿ, ಹನುಮಂತಪ್ಪ ಶ್ಯಾವಿ, ಹನುಮಂತಪ್ಪ ಗಣಪಾ, ಹಂಪವ್ವ ಕಂಪ್ಲಿ, ಗಂಗಮ್ಮ ಶ್ಯಾವಿ, ರಾಜು ಶಿವಪ್ಪ ಶೇಡದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net