ವಸ್ತ್ರದಾತನ ಬದುಕಿಗೆ ಸರ್ಕಾರಗಳು ಸಹಾಯ ನೀಡಬೇಕು: ನೀಲಕಂಠ ಸ್ವಾಮೀಜಿ

IMG-20240810-WA0023
Published on

ಗದಗ: ಬೆಟಗೇರಿಯ ನೀಲಕಂಠೇಶ್ವರ  ಮಠದಲ್ಲಿ ಗದಗ್ ಜಿಲ್ಲಾ ನೇಕಾರ ಒಕ್ಕೂಟದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಸಾನಿಧ್ಯ ವಹಿಸಿದ್ದ ಶ್ರೀ ನೀಲಕಂಠ ಸ್ವಾಮಿಗಳು ವಸ್ತ್ರದಾತನ ಬದುಕಿಗೆ ಸರ್ಕಾರಗಳು ಬೆನ್ನೆಲುಬಾಗಿ ನಿಲ್ಲಬೇಕಾಗಿದೆ ಎಂದರು.

ಸರ್ಕಾರಗಳ ಬೆಂಬಲ ಇಲ್ಲದೆ ನೇಕಾರ ಬದುಕುವುದು ಕಷ್ಟವಾಗಿದೆ ಏಕೆಂದರೆ ಔದ್ಯಮೀಕರಣ ಬದಲಾವಣೆಯಿಂದ ನೇಕಾರ ಕಂಗೆಟ್ಟಿದ್ದಾನೆ ಅವನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಾಗಿದೆ ಮನೆ ಮಂದಿಯಲ್ಲ ದುಡಿದರು ಆರ್ಥಿಕ ಸ್ಥಿತಿ  ತೊಂದರೆಗೊಳಗಾಗಿದೆ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಜನಾಂಗಗಳು ನೇಕರಿಕೆಯನ್ನು, ಕಲೆ ಪಾರಂಪರಿಕ ಕಸೂತಿ ಶೈಲಿಯ ಆಯಾ ಪ್ರಾದೇಶಿಕಕ್ಕೆ ಅನುಕೂಲಕರವಾಗಿ ಬೇರೆ ಬೇರೆ ತರನಾದ ಉಡುಪುಗಳು ಶತಶತಮಾನಗಳಿಂದ ಉಳಿದು ಬಂದಿವೆ ಆದರೆ ಎಲ್ಲೆಡೆ ಉದ್ಯಮದ ಬದಲಾವಣೆ ದಾಳಿಯಿಂದ ನೇಕಾರಿಗೆ ಉಳಿಯುವುದು ಕಷ್ಟವಾಗಿದೆ ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯತೆಯನ್ನು ಮನಗಂಡು ಪಾರಂಪರಿಕ ಶೈಲಿಯ ಈ ನೇಕಾರಿಕೆಯನ್ನು ಉಳಿಸದೆ ಹೋದರೆ ಮುಂದೆ  ನಮ್ಮ ಕಲೆ ನಶಿಸಿಹೋಗುತ್ತದೆ ಈ ಪಾರಂಪರಿಕವಾದ ಈ ಕಲೆ ಮತ್ತು ಸಂಸ್ಕೃತಿ ಉಳಿಸಬೇಕಾದರೆ ಕುಲಕಸಬು ಎಂದು ಕೊಂಡಿರುವ ಎಲ್ಲ ಸಮಾಜಗಳು ಒಕ್ಕಟ್ಟಿನಿಂದ ಹೋರಾಟ ಮಾಡಿ ಸರಕಾರದ ಸೌಲಭ್ಯ ಪಡೆಯುವ ಪ್ರಯತ್ನ ಮಾಡಬೇಕಾಗಿದೆ ಈ ದಿಶೆಯಲ್ಲಿ ನಮ್ಮ ಮಹಿಳೆಯರು ಹೆಚ್ಚು  ಪ್ರಜ್ಞಾವಂತರು ಅವರ ಜವಾಬ್ದಾರಿಯೂ ಹೆಚ್ಚಾಗಿದೆ ಎಂದರು ಕೈಮಗ್ಗದಿಂದ ಅಭಿವೃದ್ಧಿ ಹೊಂದಿದ  ಪವರ್ ಮಗ್ಗಗಳು  ಈಗಲೂ ನೇಕಾರನ ನೇರ ಕಾರ್ಯದಿಂದ ಮಾತ್ರ ಅಂದರೆ ಈಗ ನೇಕಾರರು ನಡೆಸುವ ಯಾಂತ್ರಿಕ ಮಗ್ಗ ನೇಕಾರನ ಕಾರ್ಯದಿಂದ ಮಾತ್ರ ಸೀರೆಗಳು ತಯಾರಾಗುತ್ತದೆ ಆದಕಾರಣ ಕಾನೂನಿನಲ್ಲಿರುವ ಕೈಮಗ್ಗ ಮತ್ತು ಪವರ್ ಲೂಮ್ ನಡುವೆ ವ್ಯತ್ಯಾಸ ಕಡಿಮೆ ಮಾಡಿ ಕೈಮಗ್ಗದ ಅಭಿವೃದ್ಧಿಗೆ ದೊರಕುವ ಸೌಲತ್ತುಗಳನ್ನು ಪಾವರ ಲೂಮ್ ಗಳಿಗೂ ನೀಡಬೇಕು  ಕೈಮಗ್ಗ ಅಭಿವೃದ್ಧಿಗೆ ಮೀಸಲಾಗಿಟ್ಟ ಅನುದಾನ ಮಾಹಿತಿ ಯಾರಿಗೂ ತಿಳಿಯೋದಿಲ್ಲ ಅದರ ಪ್ರಯೋಜನ ನೇಕಾರರಿಗೆ ನೇರವಾಗಿ ತಲುಪುವಂತೆ ಆಗಬೇಕೆಂದರು.  ಈ ಸಂದರ್ಭದಲ್ಲಿ ಕೈಮಗ್ಗ ನೇಕಾರರನ್ನು ಸನ್ಮಾನಿಸಲಾಯಿತು.

  ಮುಖ್ಯ ಅತಿಥಿಗಳಾದ   ಅನಿಲ ಗಡ್ಡಿ ಮತ್ತು ಮಲ್ಲಿಕಾರ್ಜುನ   ಬೆಲ್ಲದ ರಘುನಾಥ ತುಕ್ಕಾ  ಸಂದರ್ಬಕವಾಗಿ ಮಾತನಾಡಿದರು  ವೇದಿಕೆ ಮೇಲೆ ಅಂಬರೀಶ್ ಜಾಗಿ ರಾಮಕೃಷ್ಣ  ದೇವರಕೊಂಡಿ ಶ್ರೀಮತಿ ಭಾರತಿ ಗಡ್ಡಿ ಶ್ರೀಮತಿ ಶಶಿಕಲಾ ಶಾವಿ ಪ್ರಸ್ತಕವಾಗಿ ಶ್ರೀನಿವಾಸ್ ಹುಬ್ಬಳ್ಳಿ ಅವರು ಮಾತನಾಡಿದರು  ವಾಸು ಜೋಗಿ ಅವರು ನೇರಪ್ರಸಾರ ಮಾಡಿದರು ನೇಕಾರ ಸಮುದಾಯಗಳ ಒಕ್ಕೂಟದ ಕಾರ್ಯದರ್ಶಿಗಳಾದ ದಶರಾಥ  ರಾಜ  ಕೊಳ್ಳಿಯವರು ವಂದನಾರ್ಪಣೆಯನ್ನು ಮಾಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net