ಕಾಯ ಉಳಿಯುವಂತ ಕಾರ್ಯ ಮಾಡಬೇಕು: ನೀಲಕಂಠ ಶ್ರೀಗಳು

05GDG02
Published on

ವಿಜಯವಾಣಿ ಸುದ್ದಿಜಾಲ ಗದಗ

ನೇಕಾರರು ಸಂಟಿತರಾಗಿ ಸಂಶಕ್ತಿ ಬೆಳೆಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಸಬೇಕು ಎಂದು ನೀಲಕಂಠ ಶ್ರೀಗಳು ಹೇಳಿದರು.

ನಗರದ ನೀಲಕಂಠೇಶ್ವರ ಮಠದಲ್ಲಿ ಮಂಗಳವಾರ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು 42ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾಯವಳಿದರೂ ಕೀತಿರ್ ಉಳಿಯುವಂತಹ ಕಾರ್ಯ ಮಾಡಬೇಕು. ನೇಕಾರರು ಕೀತಿರ್ ಉಳಿಯುವಂತಹ ಕಾರ್ಯ ಮಾಡಿ, ಸಮಾಜದಕ್ಕೆ ಮಾದರಿ ಆಗುತ್ತಾರೆ. ನೇಕಾರಿಕೆ ಈ ಭೂಮಿಯ ಹಳೆಯ ಕಸಬು ಆಗಿದೆ. ಅದನ್ನು ಉಳಿಸಿ ಬೆಳೆಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ ಎಂದರು.

ದೇವೇಂದ್ರಪ್ಪ ಗೋಟೂರ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬೆಟಗೇರಿಯಲ್ಲಿ ಹೆಚ್ಚು ಮಗ್ಗಗಳಿದ್ದು ಪೇಟೆಯ ದರಗಳು ಹೆಚ್ಚಿದಂತೆ ಬಡ ನೇಕಾರರ ಕೂಲಿದರಗಳು ಹೆಚ್ಚಾಗುತ್ತಿಲ್ಲ. ನೇಕಾರರ ಜೀವನ ಕಷ್ಟಕರವಾಗಿದೆ. ಬೆಟಗೇರಿಯಲ್ಲಿ ಜವಳಿ ಪಾರ್ಕ ಸ್ಥಾಪಿಸಿದರೆ ಸಾವಿರಾರು ನೇಕಾರರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನೇಕಾರರನ್ನು ಸನ್ಮಾನಿಸಲಾಯಿತು.

ಕೆ.ಜಿ. ಹೊನ್ನಾದೇವಿ, ಈರಣ್ಣ ದಾಣಿ, ಈರಣ್ಣ ಸಣ್ಣನಾಗಪ್ಪ ಗಟ್ಟಿ, ನಾಗರತ್ನಾ ಮಲ್ಲಿಕಾರ್ಜುನ ಕರಿ, ರಮೇಶ ಹತ್ತಿಕಾಳ, ಮಾಧುಸಾ ಮೇರವಾಡೆ, ನಿಂಗಪ್ಪ ಚೇಗೂರ, ಮೈಲಾರಪ್ಪ ಆರಣಿ, ಶ್ರೀನಿವಾಸ ತಟ್ಟಿ, ನಾರಾಯಣ ಕೋಣಿ, ಚಂದ್ರು ಆನಂದ, ಶರಣಪ್ಪ ಗದ್ದಿಕೇರಿ, ಆರ್​.ಬಿ. ಕೆಂಚಗೊಂಡಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net