ನೆಡುತೋಪು ನಿರ್ಮಾಣದಿಂದ ಗದಗ ಜಿಲ್ಲೆಯ 252 ಕಿ.ಮೀ. ಗ್ರಾಮೀಣ ರಸ್ತೆಗಳು ಹಸಿರುಮಯ

17GDG01A
Published on

ಶಿವಾನಂದ ಹಿರೇಮಠ, ಗದಗ

ಅಕ್ರಮಗಳಿಗೆ ಸಾ ಎಂಬಂತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಕಾರಾತ್ಮಕ ಕೆಲಸಗಳು ನಡೆಯುತ್ತವೆ ಎಂಬುದಕ್ಕೆ ಜಿಲ್ಲೆಯಲ್ಲಿ ರಸ್ತೆ ಉದ್ದಕ್ಕೂ ನರೇಗಾ ಯೋಜನೆಯಡಿಲ್ಲಿ ನೆಟ್ಟ ನೆಡುತೋಪುಗಳೇ ಸಾಕರಿಸಿವೆ. ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ಜೊತೆಗೆ ನೈಸಗಿರ್ಕ ಸಂಪನ್ಮೂಲ ಸಂರಕ್ಷಣೆ ಮತ್ತು ಪರಿಸರ ಅಭಿವೃದ್ಧಿಯಲ್ಲೂ ಕ್ರಾಂತಿಕಾರಿ ಬದಲಾವಣೆಗೆ ನರೇಗಾ ನೆಡತೋಪು ಯೋಜನೆ ಸ್ಪಷ್ಟ ಉದಾಹರಣೆ ಎಂಬುದಕ್ಕೆ ಗದಗ ಜಿಲ್ಲೆಯ ಈ ಸಾಧನೆ ಸಾಕ್ಷಿಯಾಗಿದೆ.

ಉದ್ಯೋಗ ಖಾತ್ರಿ ಯೋಜನೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಜತೆಗೂಡಿ ಜಿಲ್ಲೆಯ 252 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಹಚ್ಚಹಸಿರಿನಿಂದ ಕಂಗೊಳಿಸುವಂತೆ ಮಾಡಿವೆ. ಗ್ರಾಮಗಳ ರಸ್ತೆ ಬದಿಗಳಲ್ಲಿ ಬರಡಾಗಿದ್ದ ಜಾಗದಲ್ಲಿ ನೆಡುತೋಪುಗಳಿಂದ ರಸ್ತೆಯನ್ನುನಳನಳಿಸುವಂತೆ ಮಾಡಲಾಗಿದೆ. ಜಿಲ್ಲೆಯ ಪರಿಸರ ಸ್ನೇಹಿ ವಾತಾವರಣಕ್ಕೆ ಮತ್ತು ಪರಿಸರ ರಕ್ಷಣೆಗೆ ದೊಡ್ಡ ಕೊಡುಗೆಯಾಗಿದೆ.

2.5 ಲಕ್ಷ ಸಸಿಗಳ ಪೋಷಣೆ:

ಜಿಲ್ಲೆಯ ಐದು ವಲಯಗಳ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಈ ಮಹತ್ವದ ಕಾರ್ಯ ನಡೆದಿದೆ. ಸಾಮಾಜಿಕ ಅರಣ್ಯ ಇಲಾಖೆ, ಮನರೇಗಾ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡು, 2021-22ನೇ ಸಾಲಿನಿಂದ ಪ್ರಸಕ್ತ ಸಾಲಿನವರೆಗೆ ಹಂತ-ಹಂತವಾಗಿ ಸುಮಾರು 252 ಕಿಲೋ ಮೀಟರ್​ ವಿಸ್ತೀರ್ಣದಲ್ಲಿ ರಸ್ತೆಬದಿ ನೆಡುತೋಪುಗಳನ್ನು ನಿಮಿರ್ಸಲಾಗಿದೆ. ಈ ಕಾರ್ಯದಡಿ ಸುಮಾರು 2,52,000 ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ಮೊದಲು ಹಿಂದೆ ಜಾಲಿ ಮುಳ್ಳು ಮರಗಳನ್ನು ಹೊರತುಪಡಿಸಿ ಬೇರೆ ಮರಗಳನ್ನು ಕಾಣಲಾಗದಂತಹ ದುಸ್ಥಿತಿಯಲ್ಲಿದ್ದ ಜಿಲ್ಲೆಯ ಚಿತ್ರಣ ಸಂರ್ಪೂಣ ಬದಲಾಗಿ, ಇಂದು ಈ ಸಸಿಗಳು ಹೆಮ್ಮರಗಳಾಗಿ ಬೆಳೆದು ನಿಂತಿವೆ. ಲಾಂತರ ಪ್ರಯಾಣಿಕರಿಗೆ ನೆರಳು ನಿಡುತ್ತಿದೆ.

ಮರಗಳ ಆಯ್ಕೆ ಹೇಗೆ:

ನೀರು ಆಶ್ರಯಿಸುವ ನೀಲಗಿರಿ ಮರಗಳ ಬದಲಾಗಿ ಸ್ಥಳಿಯ ಪರಿಸರಕ್ಕೆ ಸೂಕ್ತವಾದ ಮತ್ತು ಹೆಚ್ಚು ನೆರಳು ನೀಡುವ ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ. ವಿಶೇಷವಾಗಿ ಬೇವು, ಅರಳಿ, ಸಿಹಿಹುಣಸೆ, ಗುಲ್​ಮೋಹರ್​, ಆಲ, ಹೊಂಗೆ, ಬಸರಿ, ರೈನಟ್ರಿ ಮತ್ತು ಬಸವನಪಾದ ಸಸಿಗಳನ್ನು ಬೆಳೆಸಲಾಗಿದೆ. ಈ ವೈವಿಧ್ಯಮಯ ನೆಡುತೋಪುಗಳಿಂದ ಪರಿಸರ ಸಮತೋಲನಕ್ಕೆ ಸಹಕಾರಿಯಾಗಿವೆ.

ಪ್ರಯಾಣಿಕರಿಗೆ ವರದಾನ:

ಈ ನೆಡುತೋಪುಗಳಿಂದ ಸ್ಥಳಿಯ ರೈತರಿಗೆ ಮತ್ತು ಪಾದಾಚಾರಿಗಳಿಗೆ ದೊಡ್ಡ ಅನುಕೂಲವಾಗಿದೆ. ಬೇಸಿಗೆಯಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ರೈತರು ದಣಿವಾರಿಸಿಕೊಳ್ಳಲು, ಊಟ ಮಾಡಿ ವಿಶ್ರಾಂತಿ ಪಡೆಯಲು ಈ ಮರಗಳು ಆಸರೆಯಾಗಿವೆ.

ಬಾಕ್ಸ್​:

ವಿಶೇಷ ಆಕರ್ಷಣೆ

ರಸ್ತೆಬದಿ ಸೌಂದರ್ಯವನ್ನು ಹೆಚ್ಚಿಸುವಲ್ಲಿ ರೈನ್​ಟ್ರಿ ಮತ್ತು ಬಸವನಪಾದ ಮರಗಳು ಪ್ರಮುಖ ಪಾತ್ರ ವಹಿಸಿವೆ. 2015-&16ರಲ್ಲೇ ಪ್ರಯೋಗಾತ್ಮಕವಾಗಿ ಜಿಲ್ಲೆಯ ವಿವಿಧೆಡೆ ನೆಟ್ಟ 500 ರೈನ್​ ಟ್ರಿ ಸಸಿಗಳ ಯಶಸ್ಸು ಸಾಮಾಜಿಕ ಅರಣ್ಯ ಇಲಾಖೆಗೆ ಮಾದರಿಯಾಯಿತು. ನಂತರ 2021-&22ನೇ ಸಾಲಿನಲ್ಲಿ ಬೃಹತ್​ ಪ್ರಮಾಣದಲ್ಲಿ 50,000 ರೈನ್​ ಟ್ರೀ ಹಾಗೂ ಬಸವನಪಾದ ಸಸಿಗಳನ್ನು ನೆಡಲಾಯಿತು. ಇದರ ಫಲವಾಗಿ, ಬೇಸಿಗೆಯಲ್ಲಿ ಜಿಲ್ಲೆಯ ಹಲವು ರಸ್ತೆಗಳು ನೈಸಗಿರ್ಕ ಪಂಡಾಲ್​ ನಂತೆ ಆಕರ್ಷಣಿಯವಾಗಿ ಕಂಗೊಳಿಸುತ್ತಿವೆ. ಪ್ರಯಾಣದ ಸಮಯದಲ್ಲಿ ಅನೇಕ ಜನ ನಿಂತು ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿದೆ. ಗುಲ್​ ಮೋಹರ್​ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಷ್ಟು ಜನಪ್ರಿಯವಾಗಿ ಸಸಿಗಳು ಮರಗಳಾಗಿ ಬೆಳೆದಿವೆ.

ಕೋಟ್​

ಗುಜಮಾಗಡಿ, -ಚಿಕ್ಕಮಣ್ಣೂರು ರಸ್ತೆ ಮಧ್ಯ ಬೇಸಿಗೆ ಬಂತೆಂದರೆ ಉರಿಬಿಸಿಲ ತಾಪ ಹೆಚ್ಚಾಗಿ, ಕೆಲಸ ಮಾಡುವಾಗ ದಣಿವಾರಿಸಿಕೊಳ್ಳಲು ದೂರದ ಜಮೀನಿನ ಮರಗಳನ್ನು ಆಶ್ರಯಿಸಬೇಕಾಗಿತ್ತು. ಆದರೆ ಈಗ ಸಾಮಾಜಿಕ ಅರಣ್ಯ ಇಲಾಖೆ ಬೆಳೆಸಿರುವ ರಸ್ತೆ ಬದಿಯ ಮರಗಳು ನಮಗೆ ಬಹಳಷ್ಟು ಅನುಕೂಲವಾಗಿವೆ. ಮಧ್ಯಾಹ್ನದ ಊಟ ಮತ್ತು ವಿಶ್ರಾಂತಿಗೆ ಇವೇ ಆಸರೆ.

ಅರವಿಂದ ಶೇಖರಭಾವಿ, ರೈತ

ಕೋಟ್​

ಮನರೇಗಾ ಯೋಜನೆಯಡಿ ಕೈಗೊಂಡ ಈ ರಸ್ತೆಬದಿ ನೆಡುತೋಪು ನಿರ್ಮಾಣ ಇವತ್ತು ಫಲ ನೀಡುತ್ತಿವೆ. 2020-21ರಲ್ಲಿ ನೆಡುತೋಪು ನಿರ್ಮಾಣ ಸಂದರ್ಭದಲ್ಲಿ ಸಸಿಗಳು ಬದುಕುಳಿಯುವ ಭರವಸೆ ಇದ್ದಿಲ್ಲ. ಆದರೆ ಇವತ್ತು ಆ ಎಲ್ಲ ಸಸಿಗಳು ಹೆಮ್ಮರವಾಗಿ ಬೆಳೆದಿವೆ. ನೆಡುತೋಪು ನಿರ್ಮಾಣ ನಿರಂತರವಾಗಿ ನಡೆಯಲಿದೆ.

ಸಿ. ಆರ್​ . ಮುಂಡರಗಿ, ಉಪಕಾರ್ಯದಶಿರ್, ಜಿಪಂ ಗದಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net