

ಗದಗ: ತಾಲೂಕಿನ ಹುಲಕೋಟಿ ರಾಜರಾಜೇಶ್ವರ ವಿದ್ಯಾನಿಕೇತನದಲ್ಲಿ ಇತ್ತೀಚೆಗೆ 38ನೇ ಎನ್ಸಿಸಿ ಬಟಾಲಿಯನ್ ವಾಷಿರ್ಕ ತರಬೇತಿ ಕ್ಯಾಂಪ್ ಯಶಸ್ವಿಯಾಗಿ ಜರುಗಿತು. 5 ವರ್ಷಗಳ ನಂತರ ಗದಗ ಜಿಲ್ಲೆಯಲ್ಲಿ ನೆರವೇರಿದ ಕ್ಯಾಂಪ್ನಲ್ಲಿ 38 ಕರ್ನಾಟಕ ಬಟಾಲಿಯನ್ನ 600 ಕೆಡೆಟ್ಗಳು ಭಾಗವಹಿಸಿ ವಿವಿಧ ರೀತಿಯ ತರಬೇತಿ ಪಡೆದರು. 1000 ರೌಂಡ್ಗಳ ೈರಿಂಗ್ನಲ್ಲಿ ತರಬೇತಿ ನೀಡಲಾಯಿತು. ಸಮೀಪದ ಅಸುಂಡಿ ಗುಡ್ಡ ಪ್ರದೇಶದಲ್ಲಿ ಮ್ಯಾಪ್ ರೀಡಿಂಗ್ ತರಬೇತಿಯನ್ನು ಆಯೋಜನೆ ಮಾಡಲಾಯಿತು. ಇದರಲ್ಲಿ ಕೆಡೆಟ್ಗಳಿಗೆ ಮ್ಯಾಪ್ ರೀಡಿಂಗ್ ತರಬೇತಿಯ ಕೌಶಲ್ಯವನ್ನು ಕಲಿಸಲಾಯಿತು. ಕ್ಯಾಂಪ್ನಲ್ಲಿ ಡಿ. ವೈ. ಎಸ್. ಪಿ ಮಹಾಂತೇಶ ಸಜ್ಜನ ಅವರು ಸೈಬರ್ ಕೆಂ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ೈರ್ ೈಟಿಂಗ್ ತರಬೇತಿಯನ್ನು ಹಾಗೂ ಅಗ್ನಿ ಆಹುತಿ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೆಡೆಟ್ಗಳಿಗೆ ವಿವಿಧ ಬಂದೂಕುಗಳನ್ನು ಉಪಯೋಗಿಸಿ ೈರಿಂಗ್ ಮಾಡುವ ಕುರಿತು ತರಬೇತಿ ನೀಡಲಾಯಿತು. ಕೆಡೆಟ್ಗಳಿಗೆ ಡ್ರಿಲ್, ದೈಹಿಕ ವ್ಯಾಯಾಮ, ಯೋಗಗಳ ಕುರಿತು ತರಬೇತಿ ನೀಡಲಾಯಿತು.
ಕ್ಯಾಂಪ್ನಲ್ಲಿ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು. ಸಾಮೂಹಿಕ ಗಾಯನ, ಸಾಮೂಹಿಕ ನೃತ್ಯ, ವಾಲಿಬಾಲ್, ಥ್ರೋಬಾಲ್, ಖೋಖೋ ಮುಂತಾದ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ಗೋವಿಂದರಡ್ಡಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ, ಪಿಯು ಉಪನಿರ್ದೇಶಕ ಸಿದ್ಧಲಿಂಗ ಮಾಸ್ ನಾಯಕ್, ವೈ. ರಾವೇಂದ್ರ ಶೆಟ್ಟಿ, ಮಂಜುಳಾ ದಾನಿ ಇತರರು ಇದ್ದರು.