ಜವಾಹರ ನವೋದಯ ಶಾಲೆಗೆ ಆಯ್ಕೆ ಹಾಗೂ ಸನ್ಮಾನ.

IMG-20250327-WA0027
Published on
ಗಜೇಂದ್ರಗಡ: ತಾಲೂಕಿನ ರಾಜೂರಿನ ಶ್ರೀ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕು. ಮುದಸ್ಸರ ಮಧೀನ್ ಬಾಗವಾನ ಇವನು 2024-25 ನೇ ಸಾಲಿನ ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿ ಪಡೆದು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ. ನವೋದಯ ಶಾಲೆಗೆ ಆಯ್ಕೆಯಾದ ಕು. ಮುದಸ್ಸರ ಮಧೀನ್ ಬಾಗವಾನ ಈ ವಿದ್ಯಾರ್ಥಿಗೆ ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಯು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಬಿ. ಬೆನಕನವಾರಿ, ಶಿಕ್ಷಕಿಯರಾದ ಶ್ರೀಮತಿ ಜಿ. ಜಿ. ವ್ಯಾಪಾರಿ, ಶ್ರೀಮತಿ ವೀಣಾ ಮಳಗಿ, ವಿದ್ಯಾರ್ಥಿಯ ಪಾಲಕರಾದ ಶ್ರೀ ಮೈಬುಸಾಬ ಬಾಗವಾನ, ಶ್ರೀಮತಿ ಬಿಬಿಜಾನ ಬಾಗವಾನ, ಸಮಸ್ತ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನವೋದಯ ಶಾಲೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದ ಕು. ಮುದಸ್ಸರ್ ಮಧಿನ್ ಬಾಗವಾನ ರವರಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು, ಸಮಸ್ತ ಶಿಕ್ಷಕ/ಶಿಕ್ಷಕಿಯರು, ವಿದ್ಯಾರ್ಥಿಯ ಪಾಲಕರು, ಸಿಬ್ಬಂದಿ ವರ್ಗದವರು, ಊರಿನ ಗಣ್ಯಮಾನ್ಯರು ಹಾಗೂ ಶಾಲೆಯ ಪಾಲಕರು ಅಭಿನಂದಿಸಿ, ಶುಭಾಶಯ ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net