ಗದಗ ರೈಲ್ವೆ ನಿಲ್ದಾಣಕ್ಕೆ ನವೀಕರಣಕ್ಕೆ ಭಾಗ್ಯ, ವರ್ಚುವಲ್​ ಮೂಲಕ ಅಡಿಗಲ್ಲು ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

20230806_172851
ಗದಗ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ವರ್ಚುವಲ್​ ಮೂಲಕ ಅಡಿಗಲ್ಲು ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ.
Published on

ವಿಜಯವಾಣಿ ಸುದ್ದಿಜಾಲ ಗದಗ
ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್​ ನಲ್ಲಿ ಘೋಷಿಸಿದಂತೆ ಗದಗ ರೈಲ್ವೆ ನಿಲ್ದಾಣಕ್ಕೆ ನವೀಕರಣ ಭಾಗ್ಯ ದೊರೆತಿದೆ. ನಗರದ ರೈಲ್ವೆ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ವರ್ಚುವಲ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಅಡಿಗಲ್ಲು ನೆರವೇರಿಸಿದರು. ಗದಗ ರೈಲ್ವೆ ನಿಲ್ದಾಣ ಜತೆ ರಾಜ್ಯದ 55 ರೈಲ್ವೆ ನಿಲ್ದಾಣಗಳನ್ನು ಉನ್ನತ ದರ್ಜೆಗೆ ಹೆಚ್ಚಿಸುವ ಯೋಜನೆಗೆ ಚಾಲನೆ ದೊರೆಯಿತು.
ನಗರದ ರೈಲ್ವೆ ನಿಲ್ದಾಣ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ವಿರೇಶ್ವರ ಪುಣ್ಯಾಶ್ರಮ ಕಲ್ಲಯ್ಯಜ್ಜನವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಭಾರತೀಯ ರೈಲ್ವೆ ವಿಶ್ವದಲ್ಲೇ ಅತೀ ಕಡಿಮೆ ವೆಚ್ಚದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ದೇಶದ ಆಥಿರ್ಕ ಅಭಿವೃದ್ಧಿ ವೇಗ ಪಡೆಬೇಕೆಮದರೆ ಸಾರಿಗೆ ಸಂಪರ್ಕ ಅತೀ ಮುಖ್ಯ. ರೈಲ್ವೆ ಇಲಾಖೆಯಿಂದ ದೇಶದ ಜಿಡಿಪಿಗೆ ಶೇ.1.5 ರಷ್ಟು ಆದಾಯದ ಕೊಡುಗೆ ಇದೆ. 2030ರ ವರೆಗೆ 5.40 ಲಕ್ಷ ಕೋಟಿ ಹಣವನ್ನು ಕೇಂದ್ರ ಸರ್ಕಾರ ರೈಲ್ವೆ ಅಭಿವೃದ್ಧಿಗೆ ವಿನಿಯೋಗಿಸಲಿದೆ. ಇದರಿಂದಾಗಿ ದೇಶದ ಗೂಡ್ಸ್​ ರೈಲ್ವೆ ವ್ಯವಸ್ಥೆಯ ಶೇ.35 ರಿಂದ ಶೇ. 50ಕ್ಕೆ ಏರಿಕೆಯಾಗಿ ಗೂಡ್ಸ್​ ಸೇವಾ ಶುಲ್ಕ ಶೇ. 11ಕ್ಕೆ ಇಳಿಕೆ ಆಗುತ್ತದೆ. ಈ ಹಿನ್ನೆಲೆ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಲಾಗುತ್ತಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ 9 ರಿಮದ 12 ಸಾವಿರ ಜನರು ರೈಲ್ವೆ ಪ್ರಯಾಣ ಮಾಡುತ್ತಾರೆ. ಹಾಗಾಗಿ ಈ ಅಮೃತ್​ ರೈಲ್ವೆ ಯೋಜನೆಯಡಿ ಗದಗ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಶೇ.98 ರಷ್ಟು ರೈಲ್ವೆ ಟ್ರ್ಯಾಕ್​ ಗಳು ವಿದ್ಯುತ್ತೀಕರಣ ಆಗಿವೆ. 2024ರ ಆ.15ಕ್ಕೆ ಭಾರದಲ್ಲಿ ಹೈಡ್ರೋಜನ್​ ರೈಲ್ವೆಗೂ ಚಾಲನೆ ದೊರೆಯಲಿದೆ. ಪ್ರತಿನಿತ್ಯ 3 ರಿಂದ 4 ಕಿಮೀ ರೈಲ್ವೆ ಟ್ರ್ಯಾಕ್​ ಅಳವಡಿಸಲಾಗುತ್ತಿದ್ದು, 2030ರ ವೇಳೆಗೆ ಪ್ರತಿನಿತ್ಯ 12 ರಿಂದ 13 ಕೀಮಿ ರೈಲ್ವೆ ಟ್ರ್ಯಾಕ್​ ಅಳವಡಿಸಲು ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈ ಅಭಿವೃದ್ಧಿಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮಾತ್ರ ಸಾಧ್ಯ ಎಂದರು.
ವಿಧಾನಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಮಾತಮಾಡಿ, ಗದಗ ರೈಕ್ವೆ ನಿಲ್ದಾಣದಲ್ಲಿ ಈ ಮೊದಲೇ ಒಂದೇ ಟ್ರ್ಯಾಕ್​ ಇತ್ತು. ಈಗ ಡಬ್ಲಿಂಗ್​ ಆಗಿದೆ. ಎಕ್ಸಲೇಟರ್​ ಅಳವಡಿಸಲಾಗಿದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ, ಸಂಸದ ಶಿವಕುಮಾರ ಉದಾಸಿ ಅವರೇ ಕಾರಣಿಕರ್ತರು ಎಂದರು.

- ಗದಗ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 2.2 ಕೋಟಿ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಮೂಲಭೂತ ಸೌಕರ್ಯದ ಜತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾವುದು. ಗದಗ ನಂತೆ ಹಾವೇರಿ ರೈಲ್ವೆ ನಿಲ್ದಾಣವನ್ನು ಈ ಯೋಜನೆಗೆ ಒಳಪಡಿಸಬೇಕು ಎಂದು ಪ್ರಧಾನಿ ಅವರಿಗೆ ಮನವಿ ಮಾಡಿದ್ದೇನೆ
- ಶಿವಕುಮಾರ ಉದಾಸಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net