ಪತ್ರಕರ್ತರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿ

14-naregal-3 sanamna
Published on

ನರೇಗಲ್ಲ: ನಾಡಿನ ಪತ್ರಕರ್ತರಿಗೊಂದು ಸ್ಥಾನಮಾನ ನೀಡಿ, ಅವರನ್ನು ಸಮಾಜದ ಸೇವೆಗೆ ಸನ್ನದ್ಧಗೊಳಿಸಿದ ಡಿವಿಜಿ ಅವರನ್ನು ಪತ್ರಕರ್ತರು ನೆನೆಯಬೇಕು. ಆಗಿನ ಕಾಲದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳು ಈಗಿನ ಪತ್ರಕರ್ತರಿಗಿಲ್ಲ. ಇರುವ ಪರಿಮಿತಿ ಬಳಸಿಕೊಂಡು ಉತ್ತಮ ಪತ್ರಕರ್ತರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಹೇಳಿದರು.

ಪಟ್ಟಣದ ಶ್ರೀ ಹಿರೇಮಠದ ಸಭಾಭವನದಲ್ಲಿ ಬೀಚಿ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಡಿವಿಜಿ ಬದುಕು-ಬರಹ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಡಿವಿಜಿ ಅತ್ಯಂತ ಕಷ್ಟದಲ್ಲಿಯೇ ಜೀವನ ಕಳೆದರು. ತಮ್ಮ ವಿದ್ಯಾಭ್ಯಾಸ, ಒಂದೊಪ್ಪತ್ತಿನ ಊಟಕ್ಕೂ ಪರಿದಾಡಿದ ಅವರು ಎಂದಿಗೂ ತಮ್ಮ ಸ್ವಾಭಿಮಾನ ಬಿಟ್ಟುಕೊಟ್ಟವರಲ್ಲ. ಅಂತಹವರ ಬದುಕು ಎಲ್ಲರಿಗೂ ದಾರಿದೀಪವಾಗಬೇಕು. ಈಗಿನ ದಿನಗಳಲ್ಲಿ ಬರೆಯುವವರ ಸಂಖ್ಯೆಯೇನೋ ಹೆಚ್ಚಾಗಿದೆ. ಆದರೆ, ಕಾಗುಣಿತ ತಪ್ಪುಗಳು ಬಹಳ ಕಂಡು ಬರುತ್ತಿವೆ. ಪತ್ರಕರ್ತರು ಕಾಗುಣಿತದ ತಪ್ಪಿಲ್ಲದಂತೆ ಬರೆಯುವ ರೂಢಿ ಬೆಳೆಸಿಕೊಳ್ಳಬೇಕೆಂದು ಎಂದರು.

ನರೇಗಲ್ಲ ಹೋಬಳಿ ಘಟಕದ ಪತ್ರಕರ್ತರ ಸಂಘದ ಅಧ್ಯಕ್ಷ ಆದರ್ಶ ಕುಲಕರ್ಣಿ ಮಾತನಾಡಿ, ಬೀಚಿ ಬಳಗದಿಂದ ಪತ್ರಿಕಾ ದಿನಾಚರಣೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಪರಂಪರೆ ಹೀಗೆಯೇ ಮುಂದುವರೆಯಲಿ. ತನ್ನ ವಿಧಾಯಕ ಕಾರ್ಯಕ್ರಮಗಳ ಮೂಲಕ ಪಟ್ಟಣದಲ್ಲಿ ಬೀಚಿ ಬಳಗ ಅನೇಕ ಮಹತ್ತರ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪತ್ರಕರ್ತ ಪ್ರಭುಸ್ವಾಮಿ ಅರಟವಗಿಮಠ, ಈಶ್ವರ ಬೆಟಗೇರಿ, ಸಂಗಮೇಶ ಮೆಣಸಿಗಿ, ಮಲ್ಲಯ್ಯ ಗುಂಡಗೋಪುರಮಠ, ಅರುಣ ಕುಲಕರ್ಣಿ, ಪತ್ರಿಕಾ ವಿತರಕ ರಾಜೇಂದ್ರ ಜಕ್ಕಲಿ, ಶಿಕ್ಷಕ ಸಿ.ಕೆ. ಕೇಸರಿ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಪ್ರಾಚಾರ್ಯ ಡಿ.ಎ. ಅರವಟಗಿಮಠ ಮಾತನಾಡಿದರು. ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸಂಗಮೇಶ ಮೆಣಸಿಗಿ, ಮಲ್ಲಯ್ಯ ಗುಂಡಗೋಪುರಮಠ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ಭಾರತಿ ಶಿರ್ಸಿ, ಚಂದ್ರಾಮ ಗ್ರಾಮಪುರೋಹಿತ, ಡಾ. ಎಲ್.ಎಸ್. ಗೌರಿ, ಈಶ್ವರಪ್ಪ ಇಳಕಲ್ಲ, ಜಿ.ಎ. ಬೆಲ್ಲದ, ಸಂಗಯ್ಯ ಪ್ರಭುಸ್ವಾಮಿಮಠ, ಸಂಚಾಲಕ ಈಶ್ವರ ಬೆಟಗೇರಿ, ಎಸ್. ಸಿ. ಗುಳಗಣ್ಣವರ, ಡಾ. ಆರ್.ಕೆ. ಗಚ್ಚಿನಮಠ, ಮುಖ್ಯ ಶಿಕ್ಷಕ ಎಂ.ವಿ. ವೀರಾಪೂರ, ಬಸವರಾಜ ಕಲಾಲಬಂಡಿ ಇತರರಿದ್ದರು. ಶಿಕ್ಷಕ ಬಿ.ಟಿ. ತಾಳಿ ಪ್ರಾರ್ಥಿಸಿದರು. ಶಿವಯೋಗಿ ಜಕ್ಕಲಿ ಸ್ವಾಗತಿಸಿದರು. ಮುತ್ತು ಹಡಪದ ನಿರೂಪಿಸಿದರು. ಶಿಕ್ಷಕ ಜೆ.ಎ. ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net